ಬೆಂಗಳೂರಿನ ಬೀದಿಗಳಲ್ಲಿ ಬುಲೆಟ್ ಮೇಲೆ ಪುನೀತ್-ಚಿಕ್ಕಣ್ಣ ಸವಾರಿ

By Harshitha

Recommended Video

ಬುಲೆಟ್‌ನಲ್ಲಿ ಪುನೀತ್ - ಚಿಕ್ಕಣ್ಣ ಸವಾರಿ..! | Filmibeat Kannada

ಜೀನ್ಸ್, ಟಿ-ಶರ್ಟ್, ಜಾಕೆಟ್ ಧರಿಸಿ ಟಿಪ್ ಟಾಪ್ ಆಗಿ ರೆಡಿ ಆಗಿದ್ದ ಅಣ್ಣಾವ್ರ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಹಸಿರು ಬಣ್ಣದ ರಾಯಲ್ ಎನ್ ಫೀಲ್ಡ್ ಬುಲೆಟ್ ರೈಡ್ ಮಾಡುತ್ತಿದ್ದರು.

ಅಪ್ಪು ಬುಲೆಟ್ ರೈಡ್ ಮಾಡ್ತಿದ್ರೆ, ಅವರ ಹಿಂದೆ ಚಿಕ್ಕಣ್ಣ ಆಸೀನರಾಗಿದ್ದರು. ಅಲ್ಲಿಗೆ, ನಾವು ಹೇಳ್ತಿರೋದು 'ರೀಲ್' ಸ್ಟೋರಿ ಅಂತ ನಿಮಗೆ ಅರ್ಥ ಆಗಿರಬೇಕು.

ಹೌದು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೂಟಿಂಗ್ ಪ್ಯಾಕಪ್ ಮಾಡಿದ ಬಳಿಕ 'ನಟ ಸಾರ್ವಭೌಮ' ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದೆ. ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಅಪ್ಪು ಬೈಕ್ ರೈಡ್ ಮಾಡುತ್ತಿರುವ ದೃಶ್ಯಗಳನ್ನು ಇಂದು ಚಿತ್ರೀಕರಿಸಲಾಯಿತು. ಅದರ ಎಕ್ಸ್ ಕ್ಲೂಸಿವ್ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.

In pic: Puneeth Rajkumar rides Royal Enfield for Nata Sarvabhauma

ಇವತ್ತಿನ ಶೂಟಿಂಗ್ ಮುಗಿದ ಮೇಲೆ, 'ನಟ ಸಾರ್ವಭೌಮ' ತಂಡಕ್ಕೆ 'ದೊಡ್ಮನೆ' ಊಟದ ರುಚಿ ಸವಿಯುವ ಅವಕಾಶ ಲಭಿಸಿತ್ತು. ಚಿತ್ರದ ನಿರ್ದೇಶಕ ಪವನ್ ಒಡೆಯರ್, ಹಾಸ್ಯ ನಟ ಚಿಕ್ಕಣ್ಣ ಹಾಗೂ ಟೀಮ್ ಇವತ್ತು ಅಪ್ಪು ಮನೆಯಲ್ಲಿಯೇ ಒಟ್ಟಿಗೆ ಊಟ ಮಾಡಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರ ಕೈರುಚಿ ಸವಿದು ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ ನಿರ್ದೇಶಕ ಪವನ್ ಒಡೆಯರ್.

ಅಂದ್ಹಾಗೆ, 'ರಣವಿಕ್ರಮ' ಬಳಿಕ ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು 'ನಟ ಸಾರ್ವಭೌಮ' ಚಿತ್ರದಲ್ಲಿಯೇ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಪ್ಪುಗೆ ರಚಿತಾ ರಾಮ್ ಜೋಡಿ ಆಗಿದ್ದಾರೆ.

More from Filmibeat

English summary
Take a look at the picture of Power Star Puneeth Rajkumar riding Royal Enfield for Pawan Wadeyar directorial 'Nata Sarvabhauma'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X