»   » 'ಚಕ್ರವ್ಯೂಹ' ಅಡ್ಡದಲ್ಲಿ ಪುನೀತ್ ಜೊತೆ ರಚಿತಾ ರಾಮ್

'ಚಕ್ರವ್ಯೂಹ' ಅಡ್ಡದಲ್ಲಿ ಪುನೀತ್ ಜೊತೆ ರಚಿತಾ ರಾಮ್

Posted By:
Subscribe to Filmibeat Kannada

ಫೇಸ್ ಬುಕ್ ನಲ್ಲಿ ರಚಿತಾ ರಾಮ್ ಮುಖಕ್ಕೆ ಯಾರೇ ಬೆರಣಿ ತಟ್ಟಿದ್ದರೂ, ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಚಿತ್ರ 'ಚಕ್ರವ್ಯೂಹ'ಗೆ ಆಕೆ ನಾಯಕಿ ಆಗಿದ್ದಾರೆ.

ಸದ್ದಿಲ್ಲದೇ, 'ಚಕ್ರವ್ಯೂಹ' ಶೂಟಿಂಗ್ ಕೂಡ ಬಿರುಸಿನಿಂದ ಸಾಗುತ್ತಿದೆ. ಪುನೀತ್ ರಾಜ್ ಕುಮಾರ್ ಜೊತೆ ರಚಿತಾ ರಾಮ್ ಖುಷಿಯಿಂದ ನಟಿಸುತ್ತಿದ್ದಾರೆ. ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ 'ಚಕ್ರವ್ಯೂಹ' ಅಡ್ಡದ ಶೂಟಿಂಗ್ ಸ್ಟಿಲ್ ಸಿಕ್ಕಿದೆ.[ಪುನೀತ್ ಚಕ್ರವ್ಯೂಹ ಭೇದಿಸಲಿರುವ ಬುಲ್ ಬುಲ್ ರಾಣಿ]

In Pic: Rachita Ram shoots with Puneeth Rajkumar for 'Chakravyuha'

'ಚಕ್ರವ್ಯೂಹ' ಚಿತ್ರದ ಈ ಮೇಕಿಂಗ್ ಸ್ಟಿಲ್ ನೋಡಿದ್ರೆ, ಪವರ್ ಸ್ಟಾರ್ ಇಲ್ಲಿ ಜೆಂಟಲ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದು ಕನ್ಫರ್ಮ್. ಟಾಪ್ ಟು ಬಾಟಂ ಫಾರ್ಮಲ್ ಲುಕ್ ನಲ್ಲಿ ಮಿಂಚಿದ್ದಾರೆ ಅಪ್ಪು. ಇನ್ನು ಚಿತ್ರದಲ್ಲಿ ರಚಿತಾ ರಾಮ್ ಗ್ಲಾಮರ್ ಗೊಂಬೆ.

ಅಂದ್ಹಾಗೆ, 'ಚಕ್ರವ್ಯೂಹ' ಸಿನಿಮಾ ತಮಿಳಿನ 'ಇವನ್ ವೀರಮಾದಿರಿ' ರೀಮೇಕ್ ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಪುನೀತ್ ರಾಜ್ ಕುಮಾರ್ ಅಧಿಕೃತ ಮಾಹಿತಿ ನೀಡಿಲ್ಲ. ಕಾಲಿವುಡ್ ನ ಖ್ಯಾತ ನಿರ್ದೇಶಕ ಸರವಣನ್ 'ಚಕ್ರವ್ಯೂಹ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actress Rachita Ram is roped into play lead opposite Puneeth Rajkumar in Kannada Movie 'Chakravyuha'. Check out the making still of 'Chakravyuha'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada