»   » ಸಿಂಹದ ಮೇಲೆ ಕೂತಿರುವ ಈ ಪೊಲೀಸ್ ಆಫೀಸರ್ ಪರಿಚಯ ಇದ್ಯಾ.?

ಸಿಂಹದ ಮೇಲೆ ಕೂತಿರುವ ಈ ಪೊಲೀಸ್ ಆಫೀಸರ್ ಪರಿಚಯ ಇದ್ಯಾ.?

Posted By:
Subscribe to Filmibeat Kannada

'ಕರಾಟೆ ಕಿಂಗ್' ಶಂಕರ್ ನಾಗ್, 'ಡೈನಾಮಿಕ್ ಸ್ಟಾರ್' ದೇವರಾಜ್, 'ಡೈಲಾಗ್ ಕಿಂಗ್' ಸಾಯಿ ಕುಮಾರ್...ಇವರೆಲ್ಲಾ ಜನರ ಮೆಚ್ಚುಗೆ ಗಳಿಸಿದ್ದೇ ತೆರೆಮೇಲೆ 'ಪೊಲೀಸ್ ಅಧಿಕಾರಿ' ಆಗಿ.

ಈಗ ಇವರೆಲ್ಲರ ಲಿಸ್ಟ್ ಗೆ ಹೊಸ ಪೊಲೀಸ್ ಆಫೀಸರ್ ಸೇರ್ಪಡೆ ಆಗಿದ್ದಾರೆ. ಅವರ ಅಬ್ಬರದ ಬಗ್ಗೆ ಹೇಳುವ ಮುನ್ನ ಈ ಫೋಟೋ ನ ಮೊದಲು ನೋಡಿ....


in-pic-raghu-bhat-as-police-officer-in-nanna-ninna-prema-kathe

ಬೈಕ್ ಗೆ ಸಿಂಹದ ರೂಪ ಕೊಟ್ಟು, ಅದರ ಮೇಲೆ ಕುಳಿತು ಪೋಸ್ ಕೊಟ್ಟಿರುವ ಈ ಪೊಲೀಸ್ ಆಫೀಸರ್ ಹೆಸರು ರಘು ಭಟ್ ಅಂತ. ಹಾಗೆ, ಅವರು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿರುವುದು 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ.


ವಿಜಯ್ ರಾಘವೇಂದ್ರ ಹಾಗೂ ನಿಧಿ ಸುಬ್ಬಯ್ಯ ಜೋಡಿಯಾಗಿ ನಟಿಸುತ್ತಿರುವ 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ಖಡಕ್ ಪೊಲೀಸ್ ಆಗಿ ರಘು ಭಟ್ ನಟಿಸಿದ್ದಾರೆ. [ಸಿಟ್ಟಿಗೆದ್ರೆ 'ಸುಡುಗಾಡು ಸಿದ್ಧ' ಆಗುವ ವಿಜಯ್ ರಾಘವೇಂದ್ರ.!]


in-pic-raghu-bhat-as-police-officer-in-nanna-ninna-prema-kathe

ಹಾರರ್ ಸಿನಿಮಾ 'ಕರ್ವ' ಸೇರಿದಂತೆ ಈ ಹಿಂದೆ ಹಲವಾರು ಚಿತ್ರಗಳಲ್ಲಿ ರಘು ಭಟ್ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈಗ 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರ ಲಭಿಸಿದೆ.


in-pic-raghu-bhat-as-police-officer-in-nanna-ninna-prema-kathe

ಸಿಕ್ಕ ಅವಕಾಶವನ್ನ ಉತ್ತಮವಾಗಿ ಬಳಸಿಕೊಂಡಿರುವ ರಘು, ತೆರೆಮೇಲೆ ಆರಕ್ಷಕನಾಗಿ ಅಕ್ಷರಶಃ ಅಬ್ಬರಿಸಿದ್ದಾರಂತೆ. ಮೇಲ್ನೋಟಕ್ಕೆ ಅವರ ಪಾತ್ರದಲ್ಲಿ ನೆಗೆಟಿವ್ ಶೇಡ್ ಇದ್ದ ಹಾಗಿದೆ. [ಶಂಕರಣ್ಣನ ಅಪ್ಪಟ ಅಭಿಮಾನಿಯ ಪ್ರೇಮ ಕಥೆ ಬಲ್ಲಿರಾ.?]


in-pic-raghu-bhat-as-police-officer-in-nanna-ninna-prema-kathe

ಮೂಲತಃ ದಕ್ಷಿಣ ಕನ್ನಡದವರಾಗಿರುವ ರಘು ಅವರಿಗೆ ಉತ್ತರ ಕನ್ನಡದ ಭಾಷೆ ಕಷ್ಟ ಆಗ್ಲಿಲ್ವಂತೆ. ಶಿವು ಜಮಖಂಡಿ ಆಕ್ಷನ್ ಕಟ್ ಹೇಳಿರುವ 'ನನ್ನ ನಿನ್ನ ಪ್ರೇಮಕಥೆ' ಈ ಶುಕ್ರವಾರ ತೆರೆಗೆ ಬರುತ್ತಿದೆ.

English summary
Kannada Actor Raghu Bhat of 'Karva' fame has played Police Officer role in Kannada Movie 'Nanna Ninna Prem Kathe' which features Vijay Raghavendra and Nidhi Subbaiah. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada