ಆಟೋ ಸವಾರಿ ಮಾಡಿದ ನಾಗಾರ್ಜುನ ಸೊಸೆ ಸಮಂತಾ ಅಕ್ಕಿನೇನಿ
'ರಂಗಸ್ಥಳಂ' ಹಾಗೂ 'ಮಹಾನಟಿ' ಸಿನಿಮಾಗಳ ನಂತರ ನಟಿ ಸಮಂತಾ ಅಕ್ಕಿನೇನಿ 'ಸೀಮಾ ರಾಜ' ಹಾಗೂ 'ಸೂಪರ್ ಡೀಲಕ್ಸ್' ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿದ್ದರು.
ಈ ನಡುವೆ ಕನ್ನಡಿಗ ಪವನ್ ಕುಮಾರ್ ನಿರ್ದೇಶನ ಮಾಡುತ್ತಿರುವ ತಮಿಳು ಹಾಗೂ ತೆಲುಗಿನಲ್ಲಿ ರೀಮೇಕ್ ಆಗುತ್ತಿರುವ 'ಯು-ಟರ್ನ್' ಚಿತ್ರದ ಚಿತ್ರೀಕರಣದಲ್ಲಿಯೂ ಸಮಂತಾ ತೊಡಗಿದ್ದಾರೆ.
ಕನ್ನಡದಲ್ಲಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡ 'ಯು-ಟರ್ನ್' ಚಿತ್ರದ ಕಥೆಯನ್ನ ಮೆಚ್ಚಿಕೊಂಡ ಸಮಂತಾ, ತೆಲುಗು ಹಾಗೂ ತಮಿಳಿನಲ್ಲಿ ರೀಮೇಕ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ 'ಯು-ಟರ್ನ್' ರೀಮೇಕ್ ಶೂಟಿಂಗ್ ನಲ್ಲಿ ಸಮಂತಾ ಬಿಜಿಯಾಗಿದ್ದಾರೆ.

ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ ಪಾತ್ರಕ್ಕೆ ತೆಲುಗು ಹಾಗೂ ತಮಿಳಿನಲ್ಲಿ ಸಮಂತಾ ಜೀವ ತುಂಬಲಿದ್ದಾರೆ. ಪತ್ರಕರ್ತೆಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಸಮಂತಾ ಆಟೋ ಸವಾರಿ ಕೂಡ ಮಾಡಿದ್ದಾರೆ.
ಹೌದು, 'ಯು-ಟರ್ನ್' ತೆಲುಗು ಹಾಗೂ ತಮಿಳು ವರ್ಷನ್ ಶೂಟಿಂಗ್ ಟೈಮ್ ನಲ್ಲಿ ನಾಗಾರ್ಜುನ ಸೊಸೆ ಆಟೋ ಸವಾರಿ ಮಾಡಿದ್ದಾರೆ. ಆ ಟೈಮ್ ನಲ್ಲಿ ಕ್ಲಿಕ್ ಆಗಿರುವ ಫೋಟೋ ಇದು.
ಅಂದ್ಹಾಗೆ, 'ಯು-ಟರ್ನ್' ರೀಮೇಕ್ ನಿಂದಾಗಿ ಕನ್ನಡಿಗ ಪವನ್ ಕುಮಾರ್ ಕಾಲಿವುಡ್ ಹಾಗೂ ಟಾಲಿವುಡ್ ಗೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ರಾಧಿಕಾ ಚೇತನ್ ನಿರ್ವಹಿಸಿದ ಪಾತ್ರಕ್ಕೆ ತೆಲುಗಿನಲ್ಲಿ ಭೂಮಿಕಾ ಚಾವ್ಲಾ ಬಣ್ಣ ಹಚ್ಚಿದ್ದಾರೆ. ಸದ್ಯ 'ಯು-ಟರ್ನ್'ನಲ್ಲಿ ಅಡಗಿರುವ ಮಿಸ್ಟ್ರಿ ಕಂಡು ಹಿಡಿಯುವಲ್ಲಿ ಸಮಂತಾ ಬಿಜಿಯೋ ಬಿಜಿ.


Click it and Unblock the Notifications











