»   » ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾಜೋಡಿಯ 'ಕಲ್ಯಾಣ'!

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾಜೋಡಿಯ 'ಕಲ್ಯಾಣ'!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬರೇ ತಾರೆಯರು ಹಸೆಮಣೆ ಏರುತ್ತಿದ್ದಾರೆ. ಮೊನ್ನೆ ತಾನೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದಕ್ಕೂ ಮುಂಚೆ ಚಿಂಗಾರಿ ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇಂತಹ ಸಂದರ್ಭದಲ್ಲಿ 'ಮಡಮಕ್ಕಿ' ಖ್ಯಾತಿಯ ತನುಷ್ ಹಾಗೂ ನಟಿ ಶ್ರಾವ್ಯ ರಾವ್ ತಮ್ಮ ಮದುವೆಗಾಗಿ ಒರಾಯನ್ ಮಾಲ್ ನಲ್ಲಿ ಬಟ್ಟೆ ಖರೀದಿಸಿದ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಹೌದು, ತನುಷ್ ಹಾಗೂ ಶ್ರಾವ್ಯ ಒಟ್ಟಿಗೆ ಶಾಪಿಂಗ್ ಮಾಡಿರುವ ಫೋಟೋವನ್ನ ಫೇಸ್ ಬುಕ್ ನಲ್ಲಿ ಹಾಕಿ, ''ನಮ್ಮ ಮದುವೆಗೆ ಮಾಡುತ್ತಿರುವ ಶಾಪಿಂಗ್'' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಇದು ಕುತೂಹಲ ಹೆಚ್ಚಿಸಿದೆ.

'ಶ್ರಾವ್ಯ-ತನುಷ್' ಮದುವೆಯಾಗ್ತಿದ್ದಾರಾ?

ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯ ರಾವ್ ಹಾಗೂ 'ಮಡಮಕ್ಕಿ' ಚಿತ್ರದ ನಾಯಕ ತನುಷ್ ಮದುವೆಯಾಗ್ತಿದ್ದಾರಾ? ಹೀಗಂತ ಒಂದು ಸುದ್ದಿ ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಈ ಫೋಟೋ.

ನಮ್ಮ ಮದುವೆಗಾಗಿ ಶಾಪಿಂಗ್ !

ನಟ ತನು‍ಷ್, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶ್ರಾವ್ಯ ರಾವ್ ಅವರೊಂದಿಗೆ ಇರುವ ಫೋಟೋ ಹಾಕಿ, ''ನಮ್ಮ ಮದುವೆಗೆ ಕಾಸ್ಟ್ಯೂಮ್ ಪರ್ಚೇಸ್ ಮಾಡುತ್ತಿದ್ದೇವೆ. ಉಳಿದ ವಿವರಗಳನ್ನ ಸದ್ಯದಲ್ಲೇ ಪೋಸ್ಟ್ ಮಾಡುತ್ತೇನೆ'' ಎಂದು ಹಾಕಿದ್ದಾರೆ.

ಶುಭ ಹಾರೈಸಿದ ಸ್ನೇಹಿತರು, ಅಭಿಮಾನಿಗಳು

ತನುಷ್, ಹಾಕಿದ ಈ ಪೋಸ್ಟ್ ನೋಡಿ, ಸ್ನೇಹಿತರು, ಅಭಿಮಾನಿಗಳು ಎಲ್ಲರೂ ಶುಭ ಹಾರೈಸಿದ್ದಾರೆ.

ಮದುವೆನಾ? ಸಿನಿಮಾನಾ?

ಈ ಪೋಸ್ಟ್ ನೋಡಿ ಕೆಲವರು ಆಲ್ ದಿ ಬೆಸ್ಟ್ ಅಂತ ಶುಭ ಹಾರೈಸಿದ್ರೆ, ಮತ್ತೆ ಕೆಲವರು ಇದು ನಿಜಾನ ಅಥವಾ ಸಿನಿಮಾನಾ ಅಂತ ಪ್ರಶ್ನೆ ಹಾಕಿದ್ದರು. ಅಮೇಲೆ ಗೊತ್ತಾಯ್ತು ನಿಜ ಏನೂ ಅಂತ.

'ನಂಜುಂಡಿ ಕಲ್ಯಾಣ'ಕ್ಕಾಗಿ!

ಅಂದ್ಹಾಗೆ, ತನುಷ್ ಹಾಗೂ ಶ್ರಾವ್ಯ 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ನಾಯಕ-ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಹೀಗಾಗಿ, ತನುಷ್ ಹಾಕಿರುವ ಪೋಸ್ಟ್ ತಮ್ಮ ವೈಯಕ್ತಿಕ ಕಲ್ಯಾಣಕ್ಕೆ ಸಂಬಂಧಿಸಿದಲ್ಲ, ಅದು 'ನಂಜುಂಡಿ ಕಲ್ಯಾಣ' ಚಿತ್ರಕ್ಕಾಗಿ ಅಂತ ಬಹಿರಂಗವಾಯ್ತು.['ನಂಜುಂಡಿ ಕಲ್ಯಾಣ'ಕ್ಕೆ ಮತ್ತೊಮ್ಮೆ ಸಮಯ ನಿಕ್ಕಿ ಆಯ್ತು.! ]

ಶ್ರಾವ್ಯ ರಾವ್ ಕೊಟ್ಟ ಕ್ಲಾರಿಟಿ !

ಫೇಸ್ ಬುಕ್ ನಲ್ಲಿ ತನುಷ್ ಅಪಲೋಡ್ ಮಾಡಿರುವ ಪೋಸ್ಟ್ ನೋಡಿ, ಶ್ರಾವ್ಯ ಅಭಿಮಾನಿಗಳು ಶಾಕ್ ಆಗಿದ್ದರು. ಇದರಿಂದ ಎಚ್ಚೆತ್ತುಕೊಂಡ ಶ್ರಾವ್ಯ, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.

ಶ್ರಾವ್ಯ ರಾವ್ ಮಾಡಿದ ಹೊಸ ಪೋಸ್ಟ್ !

''ಯಾರು ಈ ಪೋಸ್ಟ್ ನಿಂದ ಕನ್ ಫ್ಯೂಸ್ ಮಾಡ್ಕೋಬೇಡಿ. ಇದು ನನ್ನ ಹೊಸ ಚಿತ್ರ 'ನಂಜುಂಡಿ ಕಲ್ಯಾಣ'ಕ್ಕೆ ಸಂಬಂಧಿಸಿದ ಪೋಸ್ಟ್. ಇದು ಮದುವೆಗೆ ಸಂಬಂಧಸಿದಂತೆ ಸ್ಕ್ರಿಪ್ಟ್ ಮಾಡಲಾಗಿದೆ. ತನುಷ್ ಚಿತ್ರದ ನಾಯಕ. ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ನನ್ನ ಫಸ್ಟ್ ಲುಕ್ ಬಗ್ಗೆ ಆದಷ್ಟೂ ಬೇಗ ಬಹಿರಂಗ ಪಡಿಸುತ್ತೇನೆ'' ಎಂದು ಪೋಸ್ಟ್ ಮಾಡಿದ್ದಾರೆ.

ಸಿನಿಮಾ ಪ್ರಮೋಷನ್!

'ನಂಜುಂಡಿ ಕಲ್ಯಾಣ' ಚಿತ್ರದ ಶೂಟಿಂಗ್ ಗಾಗಿ ಕಾಸ್ಟ್ಯೂಮ್ ಕೊಳ್ಳಲು ಒರಾಯನ್ ಮಾಲ್ ಗೆ ತೆರಳಿದ್ದಾಗ, ಈ ಫೋಟೋ ಕ್ಲಿಕ್ಕಿಸಲಾಗಿದೆ. ಇದಕ್ಕೆ ಈ ರೀತಿಯ ಕ್ಯಾಪ್ಷನ್ ಕೊಟ್ಟು ಸಿನಿಮಾ ಪ್ರಮೋಷನ್ ಗೆ ಬಳಸಲಾಗಿದೆ.

'ನಂಜುಂಡಿ ಕಲ್ಯಾಣ' ಹೊಸ ಸಿನಿಮಾ'

'ನಂಜುಂಡಿ ಕಲ್ಯಾಣ', 1989ರಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಾಲಾಶ್ರೀ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. ಈಗ ಇದೇ ಹೆಸರಿನಲ್ಲಿ ಮತ್ತೆ ಸಿನಿಮಾ ಬರ್ತಿದ್ದು, ಈ ಚಿತ್ರದಲ್ಲಿ ತನುಷ್-ಶ್ರಾವ್ಯ ಕಾಣಿಸಿಕೊಳ್ಳುತ್ತಿದ್ದಾರೆ. ರಾಜೇಂದ್ರ ಕಾರಂತ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

English summary
Kannada Actor Thanush and Kannada Actress Shravya Rao starrer 'Nanjundi Kalyana' is all set to go on floors.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada