For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಸರ್ ಪ್ರೈಸ್ ಕೊಟ್ಟಾಗ...

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್....ಇಬ್ಬರೂ ಸ್ಯಾಂಡಲ್ ವುಡ್ ನ ಬಿಜಿಯೆಸ್ಟ್ ಸ್ಟಾರ್ಸ್.!

  'ರಾಜಕುಮಾರ' ಹಾಗೂ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ನಲ್ಲಿ ಪುನೀತ್ ಮುಳುಗಿದ್ದರೆ, ಸುದೀಪ್ ಗೆ 'ಹೆಬ್ಬುಲಿ'ಯದ್ದೇ ಚಿಂತೆ. ಹೀಗಿರುವಾಗಲೇ, ಅಪ್ಪುಗೆ ಸುದೀಪ್ ಒಂದು ಪ್ಲೆಸೆಂಟ್ ಸರ್ ಪ್ರೈಸ್ ನೀಡಿದ್ದಾರೆ.

  ಮೊನ್ನೆ 'ರಾಜಕುಮಾರ' ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಅಲ್ಲೇ ಪಕ್ಕದಲ್ಲಿ 'ಹೆಬ್ಬುಲಿ' ಚಿತ್ರೀಕರಣ ಕೂಡ ಫಿಕ್ಸ್ ಆಗಿತ್ತು. ಸುದೀಪ್ ಶೂಟಿಂಗ್ ಸ್ಪಾಟ್ ಗೆ ಹಾಜರ್ ಆದ ಕೂಡಲೆ ಅಸುಪಾಸಿನಲ್ಲೇ 'ರಾಜಕುಮಾರ' ಶೂಟಿಂಗ್ ನಡೆಯುತ್ತಿದೆ ಅಂತ ಗೊತ್ತಾಗಿದೆ. ಕೂಡಲೆ 'ರಾಜಕುಮಾರ' ಸೆಟ್ ಗೆ ಸುದೀಪ್ ತೆರಳಿದರು. [ಸುದೀಪ್ ಹುಷಾರಾದರು.! 'ಹೆಬ್ಬುಲಿ' ಶೂಟಿಂಗ್ ಈ ವಾರ ಶುರು.!]

  ಇದಕ್ಕಿದ್ದಂತೆ ಸುದೀಪ್ ಆಗಮಿಸಿದ್ದು ಕಂಡು ಪುನೀತ್ ರಾಜ್ ಕುಮಾರ್ ಹಾಗೂ ಇಡೀ 'ರಾಜಕುಮಾರ' ಚಿತ್ರತಂಡ ಸಂತಸಗೊಂಡರು. ಸುದೀಪ್ ಹಾಗೂ ಪುನೀತ್ ಒಟ್ಟಿಗೆ ಬ್ರೇಕ್ ಫಾಸ್ಟ್ ಕೂಡ ಮಾಡಿ, ಕೆಲ ಕಾಲ ಹರಟಿದರು. ಅದರ ಎಕ್ಸ್ ಕ್ಲೂಸಿವ್ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. [ಕಿಚ್ಚನ 'ಹೆಬ್ಬುಲಿ' ಶೂಟಿಂಗ್ ಗೆ ಮೈಸೂರಿನಲ್ಲಿ ತಡೆ]

  'ಸ್ಟಾರ್ ವಾರ್' ಅಂತ ಸುಖಾ ಸುಮ್ಮನೆ ಗಾಸಿಪ್ ಹಬ್ಬಿಸುವ ಗುಮ್ಮಗಳ ಬಾಯಿಗೆ ಈಗ ಬೀಗ ಬಿದ್ದಿರಬೇಕೇನೋ..!?

  English summary
  Kiccha Sudeep made surprise visit to Kannada Actor Puneeth Rajkumar starrer 'Rajakumara' set in Mysuru. Sudeep and Puneeth Rajkumar had breakfast together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X