'ಮುಕುಂದ ಮುರಾರಿ' ಅಡ್ಡದಿಂದ ಲೀಕ್ ಆಗಿರುವ 'ಕೃಷ್ಣ' ಸುದೀಪ್ ಫೋಟೋ ಇದೇ.!

By Harshitha

ಫಾರ್ ದಿ ಫಸ್ಟ್ ಟೈಮ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ 'ಮುಕುಂದ ಮುರಾರಿ'.

ಸ್ಯಾಂಡಲ್ ವುಡ್ ನ ಎರಡು ಅದ್ಭುತಗಳು 'ಮುಕುಂದ ಮುರಾರಿ' ಚಿತ್ರದ ಮೂಲಕ ಒಂದಾಗಿರುವುದರಿಂದ ಸಹಜವಾಗಿ ಸಿನಿಮಾದ ಮೇಲೆ ಎಕ್ಸ್ ಪೆಕ್ಟೇಷನ್ಸ್ ತುಂಬಾ ಇದೆ.

ಅದರಲ್ಲೂ, 'ಮುಕುಂದ ಮುರಾರಿ' ಚಿತ್ರದಲ್ಲಿ ಸುದೀಪ್ ಶ್ರೀ ಕೃಷ್ಣ. ಹೀಗಾಗಿ ತೆರೆಮೇಲೆ ಕಿಚ್ಚ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆ ಕುತೂಹಲಕ್ಕೆ ಈಗ ಬ್ರೇಕ್ ಹಾಕುವ ಕೆಲಸ ನಮ್ಮದು. ಮುಂದೆ ಓದಿ.....

ಲೀಕ್ ಆಯ್ತು ಕಿಚ್ಚನ ಶ್ರೀ ಕೃಷ್ಣ ಅವತಾರ

ಲೀಕ್ ಆಯ್ತು ಕಿಚ್ಚನ ಶ್ರೀ ಕೃಷ್ಣ ಅವತಾರ

'ಮುಕುಂದ ಮುರಾರಿ' ಚಿತ್ರದಲ್ಲಿ ಶ್ರೀ ಕೃಷ್ಣನ ಅವತಾರದಲ್ಲಿ ಸುದೀಪ್ ಮಿಂಚಿರುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಅದನ್ನ ಮುಂದಿನ ಫೋಟೋ ಸ್ಲೈಡ್ ನಲ್ಲಿ ನೋಡಿ....

ಶ್ರೀ ಕೃಷ್ಣ ಸುದೀಪ್

ಶ್ರೀ ಕೃಷ್ಣ ಸುದೀಪ್

ಶ್ರೀ ಕೃಷ್ಣನಾಗಿ ಸುದೀಪ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ....

ಎಂಥಾ ಪಾತ್ರಕ್ಕೂ ಸುದೀಪ್ ಓಕೆ ಅಲ್ವಾ?

ಎಂಥಾ ಪಾತ್ರಕ್ಕೂ ಸುದೀಪ್ ಓಕೆ ಅಲ್ವಾ?

ಇದುವರೆಗೂ ಸ್ಟೈಲಿಶ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದ ಸುದೀಪ್ 'ಮುಕುಂದ ಮುರಾರಿ' ಚಿತ್ರದಲ್ಲಿ ಕೃಷ್ಣನಾಗಿ ಕೊಳಲು ಹಿಡಿದಿದ್ದಾರೆ. ಸುದೀಪ್ ಎಂಥಾ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಎಂಬ ಮಾತಿಗೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಾ?

ಸುದೀಪ್ ಗಾಗಿ ಸಿನಿಮಾದಲ್ಲಿ ಸೂಪರ್ ಬೈಕ್

ಸುದೀಪ್ ಗಾಗಿ ಸಿನಿಮಾದಲ್ಲಿ ಸೂಪರ್ ಬೈಕ್

ಇದೇ ಚಿತ್ರದಲ್ಲಿ 'ಕೃಷ್ಣ' ಸುದೀಪ್ ಗಾಗಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಸ್ಪೆಷಲ್ ಬೈಕ್ ರೆಡಿ ಮಾಡಲಾಗಿದೆ.[ಲಕ್ಷಾನುಗಟ್ಟಲೇ ಬೆಲೆಬಾಳುವ ಸ್ಟೈಲಿಷ್ ಬೈಕ್ ನಲ್ಲಿ ಕಿಚ್ಚನ ಜಾಲಿ ರೈಡ್]

ಹಿಂದಿಯಲ್ಲಿ ಅಕ್ಷಯ್ ಕುಮಾರ್ ಹೇಗಿದ್ದರು?

ಹಿಂದಿಯಲ್ಲಿ ಅಕ್ಷಯ್ ಕುಮಾರ್ ಹೇಗಿದ್ದರು?

ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್ ಈ 'ಮುಕುಂದ ಮುರಾರಿ'. ಅಲ್ಲಿ ಕೃಷ್ಣನ ಅವತಾರದಲ್ಲಿ ಅಕ್ಷಯ್ ಕುಮಾರ್ ಹೇಗೆ ಕಾಣಿಸಿಕೊಂಡಿದ್ದರು ಅಂತ ಸ್ವಲ್ಪ ನೋಡಿ....

ಉಪ್ಪಿ ಹೇಗೆ ಕಾಣ್ಬಹುದು?

ಉಪ್ಪಿ ಹೇಗೆ ಕಾಣ್ಬಹುದು?

'ಮುಕುಂದ ಮುರಾರಿ' ಚಿತ್ರದಲ್ಲಿ ನಾಸ್ತಿಕನ ಪಾತ್ರ ನಿರ್ವಹಿಸುವ ಉಪೇಂದ್ರ ರವರ ಲುಕ್ ಇನ್ನೂ ರಿವೀಲ್ ಆಗಿಲ್ಲ.

ಚಿತ್ರ ಬಿಡುಗಡೆ ಯಾವಾಗ?

ಚಿತ್ರ ಬಿಡುಗಡೆ ಯಾವಾಗ?

ಸೆಪ್ಟೆಂಬರ್ 18 ರಂದು, ರಿಯಲ್ ಸ್ಟಾರ್ ಉಪೇಂದ್ರ ರವರ ಹುಟ್ಟುಹಬ್ಬದಂದು 'ಮುಕುಂದ ಮುರಾರಿ' ಚಿತ್ರವನ್ನ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್. [ಉಪ್ಪಿ ಹುಟ್ಟುಹಬ್ಬಕ್ಕೆ 'ಮುಕುಂದ ಮುರಾರಿ' ರಿಲೀಸ್.?]

More from Filmibeat

English summary
Kiccha Sudeep's Lord Krishna look in Kannada Movie 'Mukunda Murari' is out. Check out the picture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X