ಎಕ್ಸ್ ಕ್ಲೂಸಿವ್ ಫೋಟೋ: 'ಜಾಗ್ವಾರ್' ಅಡ್ಡದಲ್ಲಿ ತಮನ್ನಾ ಜಿಂಗಿಚಕ್ಕ
ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ 'ಜಾಗ್ವಾರ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಪದಾರ್ಪಣೆ ಮಾಡಿರುವ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವು ಓದಿದ್ರಿ.
ಇದೀಗ ಅದೇ 'ಜಾಗ್ವಾರ್' ಅಡ್ಡದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ 'ಹೀರೋ' ನಿಖಿಲ್ ಕುಮಾರ್ ಜೊತೆ ನಟಿ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿರುವ ಎಕ್ಸ್ ಕ್ಲೂಸಿವ್ ಫೋಟೋ ನಿಮಗಾಗಿ ಹೊತ್ತು ತಂದಿದ್ದೀವಿ ನೋಡಿ....

ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಿದ್ದ ಅದ್ಧೂರಿ ಸೆಟ್ ನಲ್ಲಿ 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಚಿತ್ರೀಕರಣ ನಡೆದಿದೆ. ಖ್ಯಾತ ಕೊರಿಯೋಗ್ರಫರ್ ಶೋಬಿ ಪೌಲ್ ರಾಜ್ ನೃತ್ಯ ಸಂಯೋಜನೆಯಲ್ಲಿ ತಮನ್ನಾ ಭಾಟಿಯಾ ಹಾಗೂ ನಿಖಿಲ್ ಕುಮಾರ್ ಸಖತ್ತಾಗಿ ಜಿಂಗಿಚಕ್ಕ ಡ್ಯಾನ್ಸ್ ಮಾಡಿದ್ದಾರೆ. [ಗಾಸಿಪ್ ನಿಜ ಆಯ್ತಲ್ಲ: ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡಕ್ಕೆ ಬಂದ್ರಲ್ಲ.!]
'ಜಾಗ್ವಾರ್' ಚಿತ್ರಕ್ಕೆ 'ಬಾಹುಬಲಿ' ಖ್ಯಾತಿಯ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದರೆ, ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳಿದ್ದಾರೆ. ಥಮನ್ ಸಂಗೀತ ಈ ಚಿತ್ರಕ್ಕಿದೆ.
ನಿಖಿಲ್ ಕುಮಾರ್, ದೀಪ್ತಿ ಸತಿ, ಜಗಪತಿ ಬಾಬು, ರಮ್ಯಾ ಕೃಷ್ಣ, ಸೌರವ್ ಲೋಕೇಶ್, ಸಾಧು ಕೋಕಿಲ ಮುಂತಾದವರ ತಾರಾಬಳಗ 'ಜಾಗ್ವಾರ್' ಚಿತ್ರಕ್ಕಿದೆ.


Click it and Unblock the Notifications











