»   » ಚಿತ್ರಗಳು: ಹೊಸ ಹೆಂಡ್ತಿ ಕೀರ್ತಿ ಜೊತೆ ದುನಿಯಾ ವಿಜಿ ಸಂಸಾರ ಸರಿಗಮ

ಚಿತ್ರಗಳು: ಹೊಸ ಹೆಂಡ್ತಿ ಕೀರ್ತಿ ಜೊತೆ ದುನಿಯಾ ವಿಜಿ ಸಂಸಾರ ಸರಿಗಮ

Posted By: Sony
Subscribe to Filmibeat Kannada

ಕನ್ನಡ ಚಿತ್ರರಂಗದ ಬ್ಲ್ಯಾಕ್ ಕೋಬ್ರಾ, ಸಮಾಜ ಸೇವೆಗಳಿಂದ ಗುರುತಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ನಟ ದುನಿಯಾ ವಿಜಯ್ ಅವರು ನೂತನ ದಾಂಪತ್ಯಕ್ಕೆ ಕಾಲಿಟ್ಟಿರೋ ವಿಚಾರ ಎಲ್ಲರಿಗೂ ಗೊತ್ತಿದೆ ಬಿಡಿ.

ಪರಸ್ಪರ ಒಪ್ಪಿಗೆಯ ಮೇರೆಗೆ ನಟ ದುನಿಯಾ ವಿಜಯ್ ಮತ್ತು ನಟಿ ಕಮ್ ಮಾಡೆಲ್ ಕೀರ್ತಿ ಗೌಡ ಅಲಿಯಾಸ್ ಕೀರ್ತಿ ಪಟಾಡಿ, ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದಾರೆ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಒಂದು ಗಂಡು ಮಗು ಕೂಡ ಇದೆ.[ಎಕ್ಸ್ ಕ್ಲೂಸಿವ್: ಮದುವೆ ಬಗ್ಗೆ ಮೌನ ಮುರಿದ ನಟ ದುನಿಯಾ ವಿಜಯ್]


ಹೊಸ ದಾಂಪತ್ಯ ಜೀವನ ಸಾಗಿಸುತ್ತಿರುವ ದುನಿಯಾ ವಿಜಯ್ ಮತ್ತು ಕೀರ್ತಿ ಗೌಡ (ಕೀರ್ತಿ ಪಟಾಡಿ) ಖುಷಿ-ಖುಷಿಯಾಗಿದ್ದಾರೆ. ಅದಕ್ಕೆ ಸಾಕ್ಷಿ ಇಲ್ಲಿರುವ ಫೊಟೋ ಆಲ್ಬಂ.....


ದುನಿಯಾ ವಿಜಯ್ ಮತ್ತು ಕೀರ್ತಿ ಗೌಡ

ಇತ್ತೀಚೆಗೆ ದುನಿಯಾ ವಿಜಿ ಅವರು ತಮ್ಮ ಹೊಸ ಹೆಂಡ್ತಿ ಕೀರ್ತಿ ಅವರ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿಯೇ ಸಂಭ್ರಮದಿಂದ ಆಚರಿಸಿದರು. ಈ ವೇಳೆ ತಮ್ಮ ಪ್ರೀತಿಯ ಪತಿ ದುನಿಯಾ ವಿಜಯ್ ಅವರ ಜೊತೆ ಪೋಸ್ ಕೊಟ್ಟ ಪರಿ ನೋಡಿ.[ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!]


ಕೇಕ್ ಕಟ್ ಮಾಡಿದ ಕೀರ್ತಿ

ಮುದ್ದು ಮಡದಿಯ ಹುಟ್ಟುಹಬ್ಬಕ್ಕೆ ವಿಧ-ವಿಧವಾದ ಕೇಕ್ ತಂದು, ಕೀರ್ತಿಗೆ ಕೊಟ್ಟ ಸರ್ ಪ್ರೈಸ್ ಈ ಫೋಟೋದಲ್ಲಿ ಸೆರೆಯಾಗಿದೆ.


ಕುಟುಂಬದ ಜೊತೆ ಕೀರ್ತಿ ಬರ್ತ್ ಡೇ ಸೆಲೆಬ್ರೇಷನ್

ಕೀರ್ತಿ ಅವರ ಹುಟ್ಟುಹಬ್ಬದ ಸಮಯದಲ್ಲಿ ದುನಿಯಾ ವಿಜಯ್ ಅವರ ಇಡೀ ಕುಟುಂಬದ ಸದಸ್ಯರು ಹಾಜರಿದ್ದು, ಬರ್ತ್ ಡೇ ಗರ್ಲ್ ಗೆ ಶುಭ ಹಾರೈಸಿದರು. ಆದ್ರೆ ಈ ಎಲ್ಲಾ ಫೋಟೋಗಳಲ್ಲೂ ಅವರ ಮಗು ಮಾತ್ರ ಮಿಸ್ಸಿಂಗ್.


ಕೇಕ್ ಹೇಗಿದೆ ನೋಡಿ?

ಮುದ್ದು ಪತ್ನಿಯ ಹುಟ್ಟುಹಬ್ಬಕ್ಕೆ ಸ್ಪೆಷಲ್ ಅಂತ ಮೂರು ಬಗೆಯ ಕೇಕ್ ಗಳನ್ನು ದುನಿಯಾ ವಿಜಯ್ ಅವರು ರೆಡಿ ಮಾಡಿಸಿದ್ದರು. ಒಂದು ಕೇಕ್ ನಲ್ಲಿ ಕೀರ್ತಿ ಅವರ ಬಾಲ್ಯದ ಫೋಟೋ ಇರೋದು ವಿಶೇಷ. ಇನ್ನೊಂದು ಕೇಕ್ ನಲ್ಲಿ ದುನಿಯಾ ವಿಜಿ-ಕೀರ್ತಿ ಜೋಡಿಯಾಗಿ ನಿಂತಿರುವ ಫೋಟೋ ಇದೆ ನೋಡಿ.


ಆನಂದ ಸಾಗರ

ದಾಂಪತ್ಯ ಜೀವನದಲ್ಲಿ ದುನಿಯಾ ವಿಜಯ್-ಕೀರ್ತಿ ಗೌಡ ಸಖತ್ ಖುಷಿಯಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ....


ದುನಿಯಾ ವಿಜಯ್ ಬಗ್ಗೆ ಕೀರ್ತಿ ಏನಂತಾರೆ?

"ನನ್ನನ್ನು ಮಗುವಿನಂತೆ ಟ್ರೀಟ್ ಮಾಡುತ್ತಾರೆ, ತುಂಬಾ ಕೇರ್ ಮಾಡ್ತಾರೆ. ನನಗೆ ದುನಿಯಾ ವಿಜಯ್ ಅವರಂತಹ ಗಂಡನೇ ಬೇಕಿತ್ತು. ನಾನು ನನ್ನ ಗಂಡನಾಗುವವನ ಬಗ್ಗೆ ಏನೇನು ಕನಸು ಕಂಡಿದ್ದೇನೋ ಅದೇ ರೀತಿ ನನಗೆ ನಿಜ ಜೀವನದಲ್ಲೂ ಸಿಕ್ಕಿದ್ದಾರೆ. ಇವರು ಸಿಕ್ಕಿದ್ದು ನನ್ನ ಭಾಗ್ಯ" ಅಂತ ಕೀರ್ತಿ ಗೌಡ ಅವರು ವಿಜಿ ಬಗ್ಗೆ ಮುದ್ದಾಗಿ ಉಲಿಯುತ್ತಾರೆ.


ವಿಜಿಯ ಎರಡನೇ ಅಮ್ಮ ಕೀರ್ತಿ

ಹೊಸ ಹೆಂಡತಿ ಬಗ್ಗೆ ನಟ ದುನಿಯಾ ವಿಜಯ್ ಅವರು ಕೂಡ ಅಷ್ಟೇ ಗೌರವ-ಪ್ರೀತಿ ಇಟ್ಟುಕೊಂಡಿದ್ದಾರೆ. "ನನಗೆ ನನ್ನ ಅಮ್ಮ ಅಂದ್ರೆ ತುಂಬಾ ಇಷ್ಟ, ನನಗೆ ಕೀರ್ತಿ ಸಿಕ್ಕಿದ್ದು ನನ್ನ ಪುಣ್ಯ. ಅವಳು ನನ್ನ ಎರಡನೇ ತಾಯಿ ಇದ್ದಂತೆ" ಎಂದು ದುನಿಯಾ ವಿಜಯ್ ಅವರು ಮುದ್ದು ಪತ್ನಿಯ ಬಗ್ಗೆ ಪ್ರೀತಿಯ ಮಳೆಯನ್ನೇ ಸುರಿಸಿದ್ದಾರೆ.


'ದುನಿಯಾ'ದಲ್ಲಿ ಕೀರ್ತಿ

ದುನಿಯಾ ವಿಜಯ್ ವೃತ್ತಿ ಬದುಕಿನಲ್ಲಿ ಹೊಸ ತಿರುವು ಕೊಟ್ಟ 'ದುನಿಯಾ' ಚಿತ್ರದ ಫೋಟೋ ಬಳಿ ನಿಂತು ದಂಪತಿ ಕ್ಲಿಕ್ ಮಾಡಿಕೊಂಡಿರುವ ಫೋಟೋ.


'ಮಾಸ್ತಿ ಗುಡಿ' ಸೆಟ್ ನಲ್ಲಿ ಪತಿ-ಪತ್ನಿ

ಸದ್ಯಕ್ಕೆ ನಟ ದುನಿಯಾ ವಿಜಯ್ ಅವರು 'ಮಾಸ್ತಿ ಗುಡಿ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಶೂಟಿಂಗ್ ಸೆಟ್ ಗೂ ತಮ್ಮ ಹೆಂಡತಿಯನ್ನು ಕರೆದೊಯ್ಯುವ ನಟ ವಿಜಿ, ಸೆಟ್ ನಲ್ಲಿ ಸುಂದರಿ ಪತ್ನಿ ಕೀರ್ತಿ ಅವರ ಜೊತೆ ರೋಮ್ಯಾಂಟಿಕ್ ಆಗಿ ಕಂಡಿದ್ದು ಹೀಗೆ.


ಕೀರ್ತಿ ಗೌಡ ಪರಿಚಯ

'ಗೌಡ' ಕುಟುಂಬದ ಅಪ್ಪಟ ಕನ್ನಡತಿ ಕೀರ್ತಿ ಗೌಡ ಅವರು, ಮೊದಲು 'ನನ್ನುಸಿರೇ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಮಿಂಚಿದರು. ಮಾಡೆಲ್ ಆಗಿದ್ದ ಇವರಿಗೆ ನಾಯಕಿ ಆಗಬೇಕೆಂಬ ಆಸೆ ತುಂಬಾನೇ ಇತ್ತು. ತದನಂತರ 'ಜಾಲಿಡೇಸ್' ನಲ್ಲಿ ನಾಲ್ವರಲ್ಲಿ ಒಬ್ಬರಾಗಿ ಮತ್ತು 'ಜಸ್ಟ್ ಮಾತ್ ಮಾತಲ್ಲಿ' ಕೂಡ ಎರಡನೇ ನಾಯಕಿಯಾಗಿ ಮಿಂಚಿದ್ದಾರೆ. ಜೊತೆಗೆ 'ಸೌತ್ ಇಂಡಿಯಾ ಕ್ವೀನ್-2016' ಆಗಿ, ದುನಿಯಾ ವಿಜಿ ಪತ್ನಿ ಆಗಿ ಎಲ್ಲರಿಗೂ ಶಾಕ್ ಟ್ರೀಟ್ ಮೆಂಟ್ ನೀಡಿದರು.[ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ.! ಯಾರೀಕೆ.?]


ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ

ಅಂದಹಾಗೆ ದುನಿಯಾ ವಿಜಯ್ ಅವರು, ತಮ್ಮ ಮೊದಲ ಪತ್ನಿಯ ಸಮ್ಮತಿಯ ಮೇರೆಗೆ ಇನ್ನೊಂದು ಮದುವೆಯಾಗಿದ್ದೇನೆ, ಇದಕ್ಕೆ ಮೂವರು ಮಕ್ಕಳು ಕೂಡ ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಅಂತ ಖುದ್ದು ದುನಿಯಾ ವಿಜಿ ಅವರೇ ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದರು.


English summary
Here is the latest pictures of Kannada Actor Duniya Vijay and his new wife Actress-Model Keerthi Gowda. Duniya Vijay Recently celebrated his wife Keerthi Birthday with family members.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X