»   » ಅಂದು ಮುತ್ತು ಕೊಟ್ಟಿದ್ದ ಮುದ್ದು ಚೆಲುವೆಗೆ ಇಂದು ಅಂಬಿ ಕ್ಲಾಪ್ ಮಾಡಿದ್ರು!

ಅಂದು ಮುತ್ತು ಕೊಟ್ಟಿದ್ದ ಮುದ್ದು ಚೆಲುವೆಗೆ ಇಂದು ಅಂಬಿ ಕ್ಲಾಪ್ ಮಾಡಿದ್ರು!

Posted By:
Subscribe to Filmibeat Kannada

ಹರೆಯದ ಯುವತಿಯ ಕೆನ್ನೆಗೆ ಮುತ್ತು ಕೊಟ್ಟು ಅಂಬರೀಶ್ ಕ್ಲಿಕ್ಕಿಸಿಕೊಂಡಿದ್ದ ಒಂದು ಫೋಟೋ ವಾಟ್ಸ್ ಆಪ್ ನಲ್ಲಿ ಲೀಕ್ ಆಗಿ ಇಡೀ ಬೆಳಗಾವಿ ಸದನ, ಮಂಡ್ಯ ಕಾಂಗ್ರೆಸ್, ದೆಹಲಿ ಹೈಕಮಾಂಡ್, ರಾಹುಲ್ ಗಾಂಧಿವರೆಗೂ ತಲುಪಿ ಇಡೀ ಸ್ಯಾಂಡಲ್ ವುಡ್ ನೆಲವನ್ನೇ ಅಲುಗಾಡಿಸಿದ್ದು ನಿಮಗೆ ನೆನಪಿದ್ಯಾ?

ಅಂಬರೀಶ್ ಮುತ್ತು ಕೊಟ್ಟಿದ್ದ ಆ ಯುವತಿಯ ಪೂರ್ವಾಪರ ತಿಳಿಯದೇ, ಯಾರೋ ಮಾಡಿದ್ದ ಒಂದು ವರದಿ ಅಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಕಡೆಗೆ ಆ ಯುವತಿ ಬೇರೆ ಯಾರೂ ಅಲ್ಲ, ಅಂಬರೀಶ್ ಕುಟುಂಬಕ್ಕೆ ಅತ್ಯಾಪ್ತರಾಗಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹೋದರಿ ವಿಜಯಲಕ್ಷ್ಮಿ ಸಿಂಗ್ ಪುತ್ರಿ ವೈಭವಿ ಅಂತ್ಹೇಳಿ ಸುಮಲತಾ ಅಂಬರೀಶ್, ಬೇಜವಾಬ್ದಾರಿ ವರದಿ ಮಾಡಿದ್ದ ಪತ್ರಕರ್ತರಿಗೆ ಚಾಟಿ ಬೀಸಿದ್ದರು. [ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!]

-
-
-
-

ಇನ್ನೂ ವಿಜಯಲಕ್ಷ್ಮಿ ಸಿಂಗ್-ಜೈಜಗದೀಶ್ ಕೂಡ ಪತ್ರಿಕಾಗೋಷ್ಠಿ ನಡೆಸಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಈಗ ಈ ವಿವಾದವನ್ನು ನಾವು ನಿಮಗೆಲ್ಲಾ ನೆನಪಿಸುವುದಕ್ಕೆ ಕಾರಣ 'ಯಾನ' ಸಿನಿಮಾ. [ಕಡೆಗೂ ಮುತ್ತಿನ ಬಗ್ಗೆ ಮೌನ ಮುರಿದ ಅಂಬರೀಶ್]

ವಿಜಯಲಕ್ಷ್ಮಿ ಸಿಂಗ್ - ಜೈಜಗದೀಶ್ ದಂಪತಿಯ ಮೂವರು ಹೆಣ್ಮಕ್ಕಳು 'ಯಾನ' ಚಿತ್ರದ ಮೂಲಕ ಬೆಳ್ಳಿಪರದೆ ಮೇಲೆ 'ನಾಯಕಿ'ಯರಾಗಿ ಪರಿಚಯ ಆಗುತ್ತಿರುವ ಸುದ್ದಿಯನ್ನು ನೀವು ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. [ಚಿತ್ರಪುಟ; ಸ್ಯಾಂಡಲ್ ವುಡ್ ನಲ್ಲಿ ವಿಜಯಲಕ್ಷ್ಮಿ ಸಿಂಗ್ ಮಕ್ಕಳ 'ಯಾನ']

ಮೊನ್ನೆಯಷ್ಟೆ 'ಯಾನ' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ವಿಶೇಷ ಅಂದ್ರೆ, ಅಂಬಿ ಮಾಮನಿಂದ ಮುತ್ತು ಕೊಡಿಸಿಕೊಂಡಿದ್ದ ವೈಭವಿ ನಾಯಕಿ ಆಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಯಾನ' ಮುಹೂರ್ತದ ಶಾಟ್ ಗೆ ಇದೇ ಅಂಬರೀಶ್ ಕ್ಲಾಪ್ ಮಾಡಿದರು.

-
-
-
-
-
-
-
-
-
-
-
-

ಅಂಬರೀಶ್ ಜೊತೆ ವೈಭವಿ, ವೈನಿಧಿ ಹಾಗೂ ವೈಸಿರಿ ಪೋಸ್ ಕೊಟ್ಟು ಸಂಭ್ರಮಿಸಿದರು. ವಿಜಯಲಕ್ಷ್ಮಿ ಸಿಂಗ್ ರವರ ಈ ವಿಭಿನ್ನ ಪ್ರಯೋಗಕ್ಕೆ ಅಂಬರೀಶ್ ಶುಭ ಹಾರೈಸಿದರು. [3 ಮಗಳಂದಿರ ಜೊತೆ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಹೊಸ ಮ್ಯಾಜಿಕ್]

ಅಂದ್ಹಾಗೆ, ತಮ್ಮ ಮೂವರು ಹೆಣ್ಮಕ್ಕಳ 'ಯಾನ' ಚಿತ್ರಕ್ಕೆ ತಾಯಿ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳ್ತಿದ್ರೆ, ತಂದೆ ಜೈಜಗದೀಶ್ ಬಂಡವಾಳ ಹೂಡುತ್ತಿದ್ದಾರೆ.

-
-
-
-
-
-
-
-
-
-
-
-
-
-
-
-
-
-
-
-
-
-
English summary
Do you remember the controversy surrounding Kannada Actor Ambareesh kissing Vaibhavi, daughter of Actor- Producer Jai Jagadeesh? Ambareesh had then slammed for irresponsible reports. Now, Kannada Actress-Producer-Director Vijayalakshmi Singh is all set to launch her 3 daughters, Vaibhavi, Vainidhi and Vaisiri in her directorial next 'Yaanaa' which is being produced by her husband Jai Jagadish. Incidentally, Ambareesh clapped for the Muhoortha shot of 'Yaanaa'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada