»   » ಎರಡು ವರ್ಷಗಳ ನಂತರ 'ಡಿ-ಬಾಸ್' ದರ್ಶನ್ ಭೇಟಿ ಮಾಡಿದ ಬುಲೆಟ್ ಪ್ರಕಾಶ್!

ಎರಡು ವರ್ಷಗಳ ನಂತರ 'ಡಿ-ಬಾಸ್' ದರ್ಶನ್ ಭೇಟಿ ಮಾಡಿದ ಬುಲೆಟ್ ಪ್ರಕಾಶ್!

Posted By:
Subscribe to Filmibeat Kannada
ಎರಡು ವರ್ಷಗಳ ನಂತರ ದರ್ಶನ್ ರನ್ನ ಭೇಟಿ ಮಾಡಿದ ಬುಲೆಟ್ ಪ್ರಕಾಶ್ | Filmibeat Kannada

ಒಂದ್ಕಾಲದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ಕುಚ್ಚಿಕು ಗೆಳೆಯರು. ದರ್ಶನ್ ಸಿನಿಮಾ ಅಂದ್ರೆ ಅದರಲ್ಲಿ ಬುಲೆಟ್ ಪ್ರಕಾಶ್ ಇರಲೇಬೇಕಿತ್ತು. ದರ್ಶನ್ ಗೆಳೆಯರ ಬಳಗದಲ್ಲಿ ಪರ್ಮನೆಂಟ್ ಮೆಂಬರ್ ಆಗಿದ್ದವರು ಬುಲೆಟ್ ಪ್ರಕಾಶ್.

ಹೀಗಿರುವಾಗಲೇ, ಈ ಗೆಳೆಯರ ಮಧ್ಯೆ ಬಿರುಕು ಮೂಡಿದೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಗಾಂಧಿನಗರದ ಗಲ್ಲಿಗಳಲ್ಲಿ ಗಿರಕಿ ಹೊಡೆಯಿತು. ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ ನಡುವೆ ಸಣ್ಣ ಕಿರಿಕ್ ಆದ್ಮೇಲೆ, ಬುಲೆಟ್ ಗೂ ದರ್ಶನ್ ಗೂ ಆಗ್ಬರ್ತಿಲ್ಲ ಅಂತ ಗಾಂಧಿನಗರದ ಮಂದಿ ಮಾತನಾಡಿಕೊಂಡಿದ್ದರು. ಇದರಲ್ಲಿ ಸತ್ಯ ಎಷ್ಟು, ಸುಳ್ಳೆಷ್ಟು.? ನಮಗಂತೂ ಗೊತ್ತಿಲ್ಲ.

ಆದ್ರೀಗ, ಎರಡು ವರ್ಷಗಳ ಬಳಿಕ ಬುಲೆಟ್ ಪ್ರಕಾಶ್ ಹಾಗೂ ಡಿ-ಬಾಸ್ ದರ್ಶನ್ ಭೇಟಿ ಆಗಿರುವುದು ಮಾತ್ರ ಸತ್ಯ. ಬೇಕಾದ್ರೆ, ನೀವೇ ಈ ಫೋಟೋಗಳನ್ನ ನೋಡಿ...

ಎರಡು ವರ್ಷಗಳ ಬಳಿಕ ಭೇಟಿ ಆದ ಆಪ್ತಮಿತ್ರರು

ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ಭೇಟಿ ಆಗಿದ್ದಾರೆ. ಹುಟ್ಟುಹಬ್ಬದ ಹೊಸ್ತಿಲಲ್ಲಿ ದರ್ಶನ್ ಇರುವಾಗಲೇ, ಅವರನ್ನ ಬುಲೆಟ್ ಮೀಟ್ ಮಾಡಿದ್ದಾರೆ.

'ಡಿ ಬಾಸ್' ಸ್ನೇಹದ ಬಗ್ಗೆ ಗುಣಗಾನ ಮಾಡಿದ ಬುಲೆಟ್ ಪ್ರಕಾಶ್

ಆತ್ಮೀಯ ಗೆಳೆಯ 'ಡಿ' ಎಂದ ಬುಲೆಟ್

ದರ್ಶನ್ ಅವರನ್ನ ಭೇಟಿ ಆದ ಖುಷಿಯಲ್ಲಿ ಫೋಟೋಗಳನ್ನ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿರುವ ಬುಲೆಟ್ ಪ್ರಕಾಶ್, ''ಎರಡು ವರ್ಷಗಳ ನಂತರ ನಾನು ಮತ್ತು ನನ್ನ ಆತ್ಮೀಯ ಗೆಳೆಯ 'ಡಿ' ಭೇಟಿಯಾದೆವು'' ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೆ ಖುಷಿ

ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತೋ, ಇಲ್ವೋ.. ಗೊತ್ತಿಲ್ಲ. ಆದ್ರೀಗ, ಇವರಿಬ್ಬರು ಒಂದಾಗಿರುವುದು ಅಭಿಮಾನಿಗಳಿಗಂತೂ ಖುಷಿ ನೀಡಿದೆ.

ದರ್ಶನ್ ಜೊತೆಗಿನ ಸ್ನೇಹ ಕಾರಣ

ದರ್ಶನ್ ಅವರ 50 ಸಿನಿಮಾಗಳ ಪೈಕಿ 41 ಚಿತ್ರಗಳಲ್ಲಿ ಬುಲೆಟ್ ಪ್ರಕಾಶ್ ಅಭಿನಯಿಸಿದ್ದಾರೆ. ''ದರ್ಶನ್ ಜೊತೆಗಿನ ಸ್ನೇಹದಿಂದಲೇ, ಅವರೊಂದಿಗೆ ನಾನು ಇಷ್ಟು ಸಿನಿಮಾ ಮಾಡಲು ಸಾಧ್ಯವಾಯಿತು'' ಅಂತ ಸಂದರ್ಶನವೊಂದರಲ್ಲಿ ಬುಲೆಟ್ ಪ್ರಕಾಶ್ ಹೇಳಿದ್ದರು.

English summary
Kannada Actor Bullet Prakash has taken his Facebook account to express his happiness of meeting D-Boss Darshan after 2 long years. Take a look at the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada