ಚಿತ್ರಗಳು: ಶಿವಣ್ಣನ ಮಗಳ ಆರತಕ್ಷತೆಯಲ್ಲಿ ಗಣ್ಯಾತಿಗಣ್ಯರ ದಂಡು

By Harshitha

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹಿರಿಯ ಮಗಳು ಡಾ.ನಿರುಪಮ ಅವರ ಕಲ್ಯಾಣ ಮಹೋತ್ಸವ ನಿನ್ನೆ (ಆಗಸ್ಟ್ 31) ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.

ಬೆಳಗ್ಗೆ ಮುಹೂರ್ತ ಸಮಾರಂಭ ಸಾಂಪ್ರದಾಯಿಕವಾಗಿ ನಡೆದರೆ, ಸಂಜೆ ಆರತಕ್ಷತೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸಂಜೆ 7.30 ರಿಂದ ಶುರುವಾದ ರಿಸೆಪ್ಷನ್ ಗಾಗಿ ಅದ್ದೂರಿ ವೇದಿಕೆ ನಿರ್ಮಾಣವಾಗಿತ್ತು. [ಸಪ್ತಪದಿ ತುಳಿದ ಶಿವರಾಜ್ ಕುಮಾರ್ ಪುತ್ರಿ ನಿರುಪಮ]

ಎಲ್ಲರ ಕಣ್ಣು ಕುಕ್ಕುವಂತೆ ಮಿರ ಮಿರ ಮಿಂಚುತ್ತಿದ್ದ ನವ ಜೋಡಿ ಡಾ.ನಿರುಪಮ-ಡಾ.ದಿಲೀಪ್ ಅವರನ್ನ ಆಶೀರ್ವದಿಸುವುದಕ್ಕೆ ಟಾಲಿವುಡ್ ನಿಂದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ, ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಸೇರಿದಂತೆ ಅನೇಕ ಗಣ್ಯರು ಆಗಮಿಸಿದರು. [ಚಿತ್ರಗಳು : ಶಿವಣ್ಣನ ಮಗಳಿಗೆ ಆಶೀರ್ವದಿಸಿದ ಸಿನಿಮಾ ತಾರೆಯರು]

ಡಾ.ನಿರುಪಮ-ಡಾ.ದಿಲೀಪ್ ಅವರ ಆರತಕ್ಷತೆಯ ಚಿತ್ರಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದಾಗಿ ಕ್ಲಿಕ್ ಮಾಡಿ.......

ಆರತಕ್ಷತೆಯಲ್ಲಿ ನವ ಜೋಡಿ

ಆರತಕ್ಷತೆಯಲ್ಲಿ ನವ ಜೋಡಿ

ತಿಳಿ ಕೆಂಪು ಬಣ್ಣದ ಸೀರೆಯಲ್ಲಿ ಡಾ.ನಿರುಪಮ ಮಿಂಚುತ್ತಿದ್ದರೆ, ಡಾ.ದಿಲೀಪ್ ಸೂಟ್ ತೊಟ್ಟಿದ್ದರು. ಆರತಕ್ಷತೆಯಲ್ಲಿ ನವ ಜೋಡಿ ಕಂಡಿದ್ದು ಹೀಗೆ. [ಮುತ್ತಣ್ಣನ ಮಗಳ ಆರತಕ್ಷತೆಯ ಅದ್ಧೂರಿ ಸಮಾರಂಭ]

ನವ ಜೋಡಿಯನ್ನ ಕರೆತಂದ ಶಿವಣ್ಣ

ನವ ಜೋಡಿಯನ್ನ ಕರೆತಂದ ಶಿವಣ್ಣ

ವಿಶೇಷವಾಗಿ ಅಲಂಕೃತವಾಗಿದ್ದ ವೇದಿಕೆಗೆ ನವ ಜೋಡಿಯ ಕೈಹಿಡಿದು ಕರೆತಂದಿದ್ದು ಶಿವರಾಜ್ ಕುಮಾರ್. [ಶಿವಣ್ಣನ ಮಗಳ ಮದುವೆ, ಮಧ್ಯಾಹ್ನ ತಾರೆಯರು ಊಟ ಸವಿದ ಪರಿ]

ಅಳಿಯ ಮಗಳೊಂದಿಗೆ ಅತ್ತೆ-ಮಾವ

ಅಳಿಯ ಮಗಳೊಂದಿಗೆ ಅತ್ತೆ-ಮಾವ

ಅಳಿಯ ಡಾ.ದಿಲೀಪ್ ಮತ್ತು ಮಗಳು ಡಾ.ನಿರುಪಮ ಜೊತೆ ಶಿವರಾಜ್ ಕುಮಾರ್ ಮತ್ತು ಗೀತಾ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಹೀಗೆ. [ಶಿವಣ್ಣನ ಮಗಳ ಮದುವೆಗೆ ಬಂದು ಆಶೀರ್ವದಿಸಿದ ಕಿಚ್ಚ]

ವಧು-ವರರಿಗೆ ಆಶೀರ್ವದಿಸಿದ ಎಚ್.ಡಿ.ಕುಮಾರಸ್ವಾಮಿ

ವಧು-ವರರಿಗೆ ಆಶೀರ್ವದಿಸಿದ ಎಚ್.ಡಿ.ಕುಮಾರಸ್ವಾಮಿ

ಡಾ.ನಿರುಪಮ-ಡಾ.ದಿಲೀಪ್ ಅವರ ಆರತಕ್ಷತೆಗೆ ಅಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಧು-ವರರಿಗೆ ಶುಭ ಕೋರಿದರು.[ದೊಡ್ಮನೆ ಮದುವೆ ಸಂಭ್ರಮದ ಚಿತ್ರಗಳು]

ಆರತಕ್ಷತೆಯಲ್ಲಿ ಸಿ.ಎಂ. ಸಿದ್ದರಾಮಯ್ಯ

ಆರತಕ್ಷತೆಯಲ್ಲಿ ಸಿ.ಎಂ. ಸಿದ್ದರಾಮಯ್ಯ

ಶಿವಣ್ಣನ ಮಗಳ ಆರತಕ್ಷತೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವ ಜೋಡಿಗೆ ಆಶೀರ್ವದಿಸಿದರು.

ರಿಸೆಪ್ಷನ್ ಗೆ ಬಂದ ರಾಜ್ಯಪಾಲರು

ರಿಸೆಪ್ಷನ್ ಗೆ ಬಂದ ರಾಜ್ಯಪಾಲರು

ಡಾ.ನಿರುಪಮ-ಡಾ.ದಿಲೀಪ್ ಅವರ ರಿಸೆಪ್ಷನ್ ಗೆ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾ ಆಗಮಿಸಿ ಶುಭ ಕೋರಿದರು.

ಖ್ಯಾತ ನಿರ್ದೇಶಕ ರಾಜಮೌಳಿ

ಖ್ಯಾತ ನಿರ್ದೇಶಕ ರಾಜಮೌಳಿ

'ಬಾಹುಬಲಿ' ಚಿತ್ರದ ನಿರ್ದೇಶಕ, ಟಾಲಿವುಡ್ ನ ಖ್ಯಾತ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಶಿವಣ್ಣನ ಮಗಳ ಆರತಕ್ಷತೆಗೆ ಬಂದು ಆಶೀರ್ವಾದ ಮಾಡಿದರು.

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್

ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಕೂಡ ಆರತಕ್ಷತೆಗೆ ಆಗಮಿಸಿ ನವ ಜೋಡಿಗೆ ಶುಭ ಕೋರಿದರು.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ

ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಡಾ.ನಿರುಪಮ-ಡಾ.ದಿಲೀಪ್ ರಿಸೆಪ್ಷನ್ ಗೆ ಆಗಮಿಸಿ ಶುಭಕೋರಿದರು.

ರಮೇಶ್ ಅರವಿಂದ್ ಕುಟುಂಬ

ರಮೇಶ್ ಅರವಿಂದ್ ಕುಟುಂಬ

ಶಿವರಾಜ್ ಕುಮಾರ್ ಅವರಿಗೆ ಆತ್ಮೀಯರಾಗಿರುವ ರಮೇಶ್ ಅರವಿಂದ್ ಪತ್ನಿ ಸಮೇತರಾಗಿ ಬಂದು ಶಿವಣ್ಣನ ಮಗಳು-ಅಳಿಯನಿಗೆ ಆಶೀರ್ವಾದ ಮಾಡಿದರು.

ದೇವರಾಜ್ ಕುಟುಂಬ

ದೇವರಾಜ್ ಕುಟುಂಬ

ದೇವರಾಜ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ನವ ಜೋಡಿಗೆ ಶುಭ ಕೋರಿದರು.

ಲವ್ಲಿ ಸ್ಟಾರ್‌ ಪ್ರೇಮ್

ಲವ್ಲಿ ಸ್ಟಾರ್‌ ಪ್ರೇಮ್

ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ಪ್ರೇಮ್ ಕೂಡ ಪತ್ನಿ ಸಮೇತರಾಗಿ ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಸಿದರು.

ಹಿರಿಯ ನಟ ಶ್ರೀನಿವಾಸ್ ಮೂರ್ತಿ

ಹಿರಿಯ ನಟ ಶ್ರೀನಿವಾಸ್ ಮೂರ್ತಿ

ಡಾ.ರಾಜ್ ಕುಮಾರ್ ಅವರಿಗೆ ಆಪ್ತರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಆರತಕ್ಷತೆ ಆಗಮಿಸಿ ಡಾ.ನಿರುಪಮ-ಡಾ.ದಿಲೀಪ್ ಅವರಿಗೆ ಶುಭ ಕೋರಿದರು.

ಮಾಳವಿಕಾ-ಅವಿನಾಶ್

ಮಾಳವಿಕಾ-ಅವಿನಾಶ್

ನಟ ಅವಿನಾಶ್ ಮತ್ತು ಪತ್ನಿ ಮಾಳವಿಕಾ ಅವಿನಾಶ್ ನವ ವಧು-ವರರಿಗೆ ಶುಭ ಕೋರಿದರು.

ಆರತಕ್ಷತೆ ತಯಾರಿಯಲ್ಲಿ ಶಿವರಾಜ್ ಕುಮಾರ್

ಆರತಕ್ಷತೆ ತಯಾರಿಯಲ್ಲಿ ಶಿವರಾಜ್ ಕುಮಾರ್

ಆರತಕ್ಷತೆ ಶುರುವಾಗುವ ಮುನ್ನ ತಯಾರಿಯಲ್ಲಿ ತೊಡಗಿದ್ದ ಶಿವಣ್ಣ ಕ್ಯಾಮರಾ ಕಣ್ಣುಗಳಲ್ಲಿ ಸೆರೆಸಿಕ್ಕಿದ್ದು ಹೀಗೆ...[ಶಿವಣ್ಣ ಮಗಳ ಮದುವೆಯ 'ರಾಜ' ವೈಭೋಗ]

ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್

ಅಣ್ಣನ ಮಗಳ ಆರತಕ್ಷತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

ಗೀತಾ ಶಿವರಾಜ್ ಕುಮಾರ್-ಮಧು ಬಂಗಾರಪ್ಪ

ಗೀತಾ ಶಿವರಾಜ್ ಕುಮಾರ್-ಮಧು ಬಂಗಾರಪ್ಪ

ಡಾ.ನಿರುಪಮ-ಡಾ.ದಿಲೀಪ್ ಅವರ ಜೊತೆ ಗೀತಾ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ.

ವೇದಿಕೆ ತಯಾರಾಗಿದ್ದು ಹೀಗೆ..

ವೇದಿಕೆ ತಯಾರಾಗಿದ್ದು ಹೀಗೆ..

ವಿದೇಶದಿಂದ ಆಮದು ಮಾಡಿಕೊಂಡಿದ್ದ ಹೂಗಳಿಂದ ಶಿವಣ್ಣನ ಮಗಳ ಆರತಕ್ಷತೆ ವೇದಿಕೆ ತಯಾರಾಗಿತ್ತು.

More from Filmibeat

English summary
Kannada Actor Shivarajkumar Daughter Dr.Nirupama has tied knot with Dr.Dileep yesterday (August 31st) in Palace Grounds, Bengaluru. Check out the pictures of Daughter Nirupama weds Dr.Dileep Reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X