Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರಗಳು: 'ಯಶೋರಾಧೆ' ಅದ್ಧೂರಿ ರಿಸೆಪ್ಷನ್ ನಲ್ಲಿ ಗಣ್ಯಾತಿಗಣ್ಯರ ದಂಡು
ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ವಿವಾಹ ಮಹೋತ್ಸವ ಡಿಸೆಂಬರ್ 9 ರಂದು ಅದ್ಧೂರಿಯಾಗಿ ನೆರವೇರಿತು. ಬೆಂಗಳೂರಿನ ಪ್ರತಿಷ್ಟಿತ ದಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್-ರಾಧಿಕಾ ಪಂಡಿತ್ ಮದುವೆ ನಡೆಯಿತು.
ಬಳಿಕ ಡಿಸೆಂಬರ್ 10 ರಂದು ಸಂಜೆ 7 ಗಂಟೆ ನಂತರ ಬೆಂಗಳೂರಿನ ಅರಮನೆ ಮೈದಾನದ 'ತ್ರಿಪುರ ವಾಸಿನಿ'ಯಲ್ಲಿ 'ಯಶೋರಾಧೆ'ಯ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.[ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ]
'ಯಶೋರಾಧೆ'ಯ ರಿಸೆಪ್ಷನ್ ನಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರು-ನಟಿಯರು, ರಾಜಕಾರಣಿಗಳು ಭಾಗವಹಿಸಿ ನವ ವಧು-ವರರಿಗೆ ಶುಭ ಹಾರೈಸಿದರು. ಯಶ್-ರಾಧಿಕಾ ಪಂಡಿತ್ ವೆಡ್ಡಿಂಗ್ ರಿಸೆಪ್ಷನ್ ಆಲ್ಬಂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೋಡಿ....

ಕಂಗೊಳಿಸಿದ ನವ ಜೋಡಿ
ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್-ರಾಧಿಕಾ ಪಂಡಿತ್ ಕಂಗೊಳಿಸಿದ್ದು ಹೀಗೆ...

ಹಾಲು-ಜೇನು ಒಂದಾದ ಹಾಗೆ...
ಸಭ್ಯಸಾಚಿ ವಿನ್ಯಾಸವಿರುವ ಕೆಂಪು ಬಣ್ಣದ ಗಾಘ್ರಾ ತೊಟ್ಟು ವಧು ರಾಧಿಕಾ ಪಂಡಿತ್ ಕಂಗೊಳಿಸಿದ್ರೆ, ಮನೀಶ್ ಮಲ್ಹೋತ್ರ ವಿನ್ಯಾಸ ಮಾಡಿರುವ ಕೆಂಪು ಶೇರ್ವಾನಿಯಲ್ಲಿ ವರ ಯಶ್ ಮಿಂಚಿದರು.[ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ]

'ರಾಜಾ-ರಾಣಿ'ಯಂತೆ ಮಿಂಚಿದ 'ಯಶೋರಾಧೆ'
ಆರತಕ್ಷತೆ ಕಾರ್ಯಕ್ರಮದಲ್ಲಿ 'ರಾಯಲ್ ಸೆಟ್'ನಲ್ಲಿ ಥೇಟ್ ರಾಜಾ-ರಾಣಿಯಂತೆ ಕಂಡುಬಂದರು ಯಶ್-ರಾಧಿಕಾ ಪಂಡಿತ್. ['ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಶುಭ ಹಾರೈಸಿದ ಮುಖ್ಯಮಂತ್ರಿಗಳು
ಯಶ್-ರಾಧಿಕಾ ಪಂಡಿತ್ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆ.ಜೆ.ಚಾರ್ಜ್ ನವ ಜೋಡಿಗೆ ಶುಭ ಹಾರೈಸಿದರು. ಚಿತ್ರದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಕೆ.ಮಂಜು ರವರನ್ನ ಕಾಣಬಹುದು. [ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್]

ಆರತಕ್ಷತೆಯಲ್ಲಿ ಮಾಲಾಶ್ರೀ-ರಾಮು ದಂಪತಿ
'ಯಶೋರಾಧೆ' ವೆಡ್ಡಿಂಗ್ ರಿಸೆಪ್ಷನ್ ನಲ್ಲಿ ನಿರ್ಮಾಪಕ ರಾಮು-ಮಾಲಾಶ್ರೀ ದಂಪತಿ ಕೂಡ ಹಾಜರ್ ಇದ್ದರು.

ಗೋಲ್ಡನ್ ಸ್ಟಾರ್ ದಂಪತಿ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಗೆ ಗೋಲ್ಡನ್ ಸ್ಟಾರ್ ಗಣೇಶ್-ಶಿಲ್ಪಾ ದಂಪತಿ ಶುಭ ಕೋರಿದರು.

ಕಂಗ್ರ್ಯಾಕ್ಟ್ಸ್ ಗೆಳೆಯ
ವರ ಯಶ್ ಗೆ 'ಕಂಗ್ರ್ಯಾಕ್ಟ್ಸ್ ಗೆಳೆಯ.. ಹ್ಯಾಪಿ ಮ್ಯಾರೀಡ್ ಲೈಫ್' ಅಂತ ಗಣೇಶ್ ವಿಶ್ ಮಾಡಿದ ಕ್ಷಣ.

ವಿಶ್ ಮಾಡಿದ ಮಧು ಬಂಗಾರಪ್ಪ
ರಾಜಕಾರಣಿ ಮಧು ಬಂಗಾರಪ್ಪ ಕೂಡ ಯಶ್-ರಾಧಿಕಾ ಪಂಡಿತ್ ಆರತಕ್ಷತೆಗೆ ಆಗಮಿಸಿ ಶುಭ ಹಾರೈಸಿದರು.

ವಿಶ್ ಮಾಡಿದ ಅರ್ಜುನ್ ಜನ್ಯ
'ಯಶೋರಾಧೆ'ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶ್ ಮಾಡಿದರು.

ಭಾವಿ ಪತಿ ಜೊತೆ ಆಗಮಿಸಿದ ಪ್ರಿಯಾಮಣಿ
ಭಾವಿ ಪತಿ ಮುಸ್ತಫಾ ರಾಜ್ ಜೊತೆ ಆಗಮಿಸಿ ಯಶ್-ರಾಧಿಕಾ ಪಂಡಿತ್ ಗೆ ನಟಿ ಪ್ರಿಯಾಮಣಿ ಶುಭ ಕೋರಿದರು.

ಶುಭ ಕೋರಿದ ತಿಲಕ್
ನಟ ತಿಲಕ್ ಕೂಡ ನವ ಜೋಡಿಗೆ ವಿಶ್ ಮಾಡಿದರು.

ಉಡುಗೊರೆ ನೀಡಿದ ವಿನಯ ಪ್ರಸಾದ್
ಹೊಸ ಜೀವನಕ್ಕೆ ಕಾಲಿಟ್ಟಿರುವ ಯಶ್-ರಾಧಿಕಾ ಪಂಡಿತ್ ಗೆ ನಟಿ ವಿನಯ ಪ್ರಸಾದ್ ಉಡುಗೊರೆ ನೀಡಿದರು.

ಹಿರಿಯ ನಟ ರಾಮಕೃಷ್ಣ ಬಂದಿದ್ರು
ಯಶ್-ರಾಧಿಕಾ ಪಂಡಿತ್ ರಿಸೆಪ್ಷನ್ ನಲ್ಲಿ ಹಿರಿಯ ನಟ ರಾಮಕೃಷ್ಣ ಕೂಡ ಪಾಲ್ಗೊಂಡಿದ್ದರು.

ವಿಶ್ ಮಾಡಿದ ನಟ ಬಾಲಾಜಿ
ನವ ದಂಪತಿಗಳಿಗೆ ನಟ ಬಾಲಾಜಿ ಶುಭ ಹಾರೈಸಿದರು.

ಆರತಕ್ಷತೆಯಲ್ಲಿ ಪಾಲ್ಗೊಂಡ ನಿರ್ದೇಶಕ ರಘುರಾಮ್
ಯಶೋರಾಧೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರ್ದೇಶಕ ರಘುರಾಮ್ ಶುಭ ಹಾರೈಸಿದರು.

ಶುಭ ಹಾರೈಸಿದ ವೇಲು
ಯಶ್-ರಾಧಿಕಾ ಪಂಡಿತ್ ವಿವಾಹ ಆರತಕ್ಷತೆಯಲ್ಲಿ ಲಹರಿ ವೇಲು ಕೂಡ ಭಾಗವಹಿಸಿದ್ರು.