ಫೋಟೋ ಆಲ್ಬಂ: ತಾರೆಗಳ ತೋಟದಲ್ಲಿ 'ಚಂದನ'ದ 'ಗೊಂಬೆ'ಯ ಕಲರ್ ಫುಲ್ ರಿಸೆಪ್ಷನ್

'ಬಿಗ್ ಬಾಸ್' ವಿನ್ನರ್, ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು 'ಬಿಗ್ ಬಾಸ್' ಫೈನಲಿಸ್ಟ್ ನಿವೇದಿತಾ ಗೌಡ ರವರ ಆರತಕ್ಷತೆ ಮೈಸೂರಿನಲ್ಲಿ ವಿಜೃಂಭಣೆಯಿಂದ ನೆರವೇರಿದೆ.

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ನಿನ್ನೆ ಸಂಜೆ (ಫೆಬ್ರವರಿ 25) ಚಂದನ್ ಶೆಟ್ಟಿ ಮತ್ತು 'ಗೊಂಬೆ' ನಿವೇದಿತಾ ಗೌಡ ರಿಸೆಪ್ಷನ್ ಅದ್ಧೂರಿಯಾಗಿ ನಡೆಯಿತು.

ನಿನ್ನೆ ಸಂಜೆ 7 ಗಂಟೆ ಹೊತ್ತಿಗೆ ಆರತಕ್ಷತೆ ಆರಂಭಗೊಂಡಿತು. ಕುದುರೆ ಸಾರೋಟು ಏರಿ ಕಲ್ಯಾಣ ಮಂಟಪಕ್ಕೆ ವಧು ನಿವೇದಿತಾ ಗೌಡ, ವರ ಚಂದನ್ ಶೆಟ್ಟಿ ಆಗಮಿಸಿದರು. ವಧು-ವರರಿಗೆ ಚಿತ್ರರಂಗದ ಗಣ್ಯರು ಆಶೀರ್ವದಿಸಿದರು. ತಾರೆಗಳ ತೋಟದಲ್ಲಿ ನಡೆದ 'ಚಂದನ'ದ 'ಗೊಂಬೆ'ಯ ರಿಸೆಪ್ಷನ್ ಫೋಟೋ ಆಲ್ಬಂ ಇಲ್ಲಿದೆ, ನೋಡಿ...

ಮೇಡ್ ಫಾರ್ ಈಚ್ ಅದರ್.!

ಮೇಡ್ ಫಾರ್ ಈಚ್ ಅದರ್.!

ರಿಸೆಪ್ಷನ್ ನಲ್ಲಿ ವಧು ನಿವೇದಿತಾ ಗೌಡ ಮತ್ತು ವರ ಚಂದನ್ ಶೆಟ್ಟಿ ಕಂಗೊಳಿಸಿದ್ದು ಹೀಗೆ.. ಮರೂನ್ ಮತ್ತು ಪರ್ಪಲ್ ಕಲರ್ ಕಾಂಬಿನೇಶನ್ ಹೊಂದಿರುವ ವೆಸ್ಟರ್ನ್ ಔಟ್ ಫಿಟ್ ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಿರಿ ಮಿರಿ ಮಿಂಚಿದರು. ಈ ಜೋಡಿ ನೋಡ್ತಿದ್ರೆ, ಮೇಡ್ ಫಾರ್ ಈಚ್ ಅದರ್ ಅಂತ ಅನಿಸದೇ ಇರುತ್ತಾ.?!

ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದರು.!

ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದರು.!

ತಮ್ಮ ರಿಸೆಪ್ಷನ್ ಗೆ ಉಡುಗೆ ಇದೇ ರೀತಿ ಬೇಕು ಎಂದು ಖುದ್ದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿಸೈನರ್ ಬಳಿ ಚರ್ಚಿಸಿ ರೆಡಿ ಮಾಡಿಸಿರುವ ಔಟ್ ಫಿಟ್ ಇದು. ಹೇಳಿ ಕೇಳಿ ನಿವೇದಿತಾಗೆ ಗೌನ್ ಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ, ಆರತಕ್ಷತೆಗೂ ಸ್ಪೆಷಲ್ ಆಗಿ ಗೌನ್ ಡಿಸೈನ್ ಮಾಡಿಸಿದ್ದರು. ಇನ್ನೂ ಅದಕ್ಕೆ ಮ್ಯಾಚ್ ಆಗುವಂತೆ ಸೂಟ್ ತೊಟ್ಟಿದ್ದರು ಚಂದನ್ ಶೆಟ್ಟಿ.

ರಾಯಲ್ ಥೀಮ್

ರಾಯಲ್ ಥೀಮ್

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಆರತಕ್ಷತೆ 'ರಾಯಲ್' ಥೀಮ್ ನಲ್ಲಿ ನೆರವೇರಿತು. ಕೆಂಪು, ಬಿಳಿ, ನೇರಳೆ ಬಣ್ಣದ ಹೂಗಳಿಂದ ಇಡೀ ಮದುವೆ ಮಂಟಪ ಸಿಂಗಾರಗೊಂಡಿತ್ತು. ವೇದಿಕೆ ಮೇಲೆ ಕಿಂಗ್ ಅಂಡ್ ಕ್ವೀನ್ ನಂತೆಯೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಕಂಗೊಳಿಸುತ್ತಿದ್ದರು.

ಹಾಜರ್ ಆದ ಪುನೀತ್ ರಾಜ್ ಕುಮಾರ್

ಹಾಜರ್ ಆದ ಪುನೀತ್ ರಾಜ್ ಕುಮಾರ್

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಆರತಕ್ಷತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಜರ್ ಆಗಿ ಶುಭಾಶಯಗಳನ್ನು ತಿಳಿಸಿದರು.

ಪತ್ನಿ ಸಮೇತ ಬಂದಿದ್ದ ಅಪ್ಪು

ಪತ್ನಿ ಸಮೇತ ಬಂದಿದ್ದ ಅಪ್ಪು

ಪತ್ನಿ ಅಶ್ವಿನಿ ಸಮೇತರಾಗಿ ಚಂದನ್ ಶೆಟ್ಟಿ-ನಿವೇದಿತಾ ರಿಸೆಪ್ಷನ್ ನಲ್ಲಿ ಪುನೀತ್ ರಾಜ್ ಕುಮಾರ್ ಭಾಗವಹಿಸಿದರು.

ಧ್ರುವ ಸರ್ಜಾ ದಂಪತಿ

ಧ್ರುವ ಸರ್ಜಾ ದಂಪತಿ

ಚಂದನ್ ಶೆಟ್ಟಿ-ನಿವೇದಿತಾ ಗೌಡ ರಿಸೆಪ್ಷನ್ ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಕೂಡ ಪಾಲ್ಗೊಂಡು, ನವ ಜೋಡಿಗೆ ವಿಶ್ ಮಾಡಿದರು.

ಅಕುಲ್ ಬಾಲಾಜಿ ಭಾಗಿ

ಅಕುಲ್ ಬಾಲಾಜಿ ಭಾಗಿ

'ಬಿಗ್ ಬಾಸ್' ವಿನ್ನರ್ ಮತ್ತು ಖ್ಯಾತ ನಿರೂಪಕ ಅಕುಲ್ ಬಾಲಾಜಿ ಕೂಡ ಚಂದನ್ ಶೆಟ್ಟಿ-ನಿವೇದಿತಾ ಗೌಡ ಆರತಕ್ಷತೆಗೆ ಬಂದಿದ್ದರು. ನವ ದಂಪತಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಕುಲ್ ಬಾಲಾಜಿ ಸಂಭ್ರಮಿಸಿದರು.

ನಿರ್ದೇಶಕ ಚೇತನ್

ನಿರ್ದೇಶಕ ಚೇತನ್

ಇನ್ನೂ ನಿರ್ದೇಶಕ ಚೇತನ್ ಕೂಡ ರಿಸೆಪ್ಷನ್ ನಲ್ಲಿ ಪಾಲ್ಗೊಂಡು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಶುಭಾಶಯಗಳನ್ನು ತಿಳಿಸಿದರು.

ಚಂದನ್ ಶೆಟ್ಟಿ ಫ್ಯಾಮಿಲಿ

ಚಂದನ್ ಶೆಟ್ಟಿ ಫ್ಯಾಮಿಲಿ

ರಿಸೆಪ್ಷನ್ ನಲ್ಲಿ ಕ್ಯಾಮರಾ ಕಂಗಳಿಗೆ ಸೆರೆಯಾದ ಚಂದನ್ ಶೆಟ್ಟಿಯ ಫ್ಯಾಮಿಲಿ ಫೋಟೋ ಇದು. ಈ ಫೋಟೋದಲ್ಲಿ ಚಂದನ್ ಶೆಟ್ಟಿ ತಂದೆ ಪರಮೇಶ್ ಶೆಟ್ಟಿ, ತಾಯಿ ಪ್ರೇಮ ಶೆಟ್ಟಿ, ಸಹೋದರ ಪುನೀತ್ ರಾಜ್ ಶೆಟ್ಟಿ ಮತ್ತು ಮುದ್ದಿನ ನಾಯಿ ಮರಿ ಆಪಲ್ ನ ನೀವು ಕಾಣಬಹುದು.

ನಿವೇದಿತಾ ತಂದೆ-ತಾಯಿ

ನಿವೇದಿತಾ ತಂದೆ-ತಾಯಿ

ಆರತಕ್ಷತೆಯಲ್ಲಿ ಕ್ಯಾಮರಾ ಕಂಗಳಿಗೆ ನಿವೇದಿತಾ ತಂದೆ ರಮೇಶ್ ಮತ್ತು ತಾಯಿ ಹೇಮಾ ರಮೇಶ್ ಕಾಣಿಸಿಕೊಂಡಿದ್ದು ಹೀಗೆ...

ಸ್ಪೆಷಲ್ ಭೋಜನ

ಸ್ಪೆಷಲ್ ಭೋಜನ

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಆರತಕ್ಷತೆಗಾಗಿ ರಸಗುಲ್ಲಾ, ರಸಮಲೈ, ಮೈಸೂರು ಪಾಕ್ ಸೇರಿದಂತೆ 20 ಬಗೆಯ ವಿಶೇಷ ಖಾದ್ಯಗಳು ತಯಾರಾಗಿತ್ತು.

ಸೆಲ್ಫಿ ಕ್ಲಿಕ್ಕಿಸಿಕೊಂಡ ಜೋಡಿ

ಸೆಲ್ಫಿ ಕ್ಲಿಕ್ಕಿಸಿಕೊಂಡ ಜೋಡಿ

ವಿವಾಹ ಪೂರ್ವ ಶಾಸ್ತ್ರಗಳನ್ನು ಮುಗಿಸಿ, ಮದುವೆ ಮಂಟಪಕ್ಕೆ ಕಾಲಿಟ್ಟಾಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಷಣ..

ಡ್ಯುಯೆಟ್ ಹಾಡಿದ ಜೋಡಿ

ಡ್ಯುಯೆಟ್ ಹಾಡಿದ ಜೋಡಿ

ರಿಸೆಪ್ಷನ್ ನಲ್ಲಿ ಪಾಲ್ಗೊಳ್ಳುವ ಮುನ್ನ, ಕ್ಯಾಮರಾ ಮುಂದೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪೋಸ್ ಕೊಟ್ಟಿದ್ದು ಹೀಗೆ...

ಹೊಸ ಜೀವನ ಆರಂಭ

ಹೊಸ ಜೀವನ ಆರಂಭ

'ಬಿಗ್ ಬಾಸ್' ಮನೆಯಲ್ಲಿ ಪರಿಚಯವಾಗಿ, ಪ್ರೇಮಿಗಳಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಫೆಬ್ರವರಿ 26 ರಂದು ಬೆಳಗ್ಗೆ ಇರುವ ಶುಭ ಮುಹೂರ್ತದಲ್ಲಿ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ.

ವಯಸ್ಸಿನ ಅಂತರ

ವಯಸ್ಸಿನ ಅಂತರ

ಕನ್ನಡ ರಾಪರ್ ಚಂದನ್ ಶೆಟ್ಟಿಗೆ 30 ವರ್ಷ. ಇನ್ನೂ ನಿವೇದಿತಾ ಗೌಡ 20ರ ಆಸುಪಾಸಿನಲ್ಲಿದ್ದಾರೆ. ಇಬ್ಬರ ನಡುವೆ ಸುಮಾರು 10 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ಗ್ಯಾಪ್ ಬಗ್ಗೆ ಯಾರು ಏನೇ ಟ್ರೋಲ್ ಮಾಡಿದರೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ಮನಸಾರೆ ಪ್ರೀತಿಸಿದ ಈ ಜೋಡಿ ಇದೀಗ ದಂಪತಿಗಳಾಗುತ್ತಿದ್ದಾರೆ.

More from Filmibeat

English summary
Have a look at Chandan Shetty-Niveditha Gowda's wedding reception photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X