»   » 'ತಾರೆ'ಗಳ ತೋಟದಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ'

'ತಾರೆ'ಗಳ ತೋಟದಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ'

Posted By:
Subscribe to Filmibeat Kannada

ಮಾಡಿಕೊಳ್ಳುತ್ತಿರುವುದು ಎರಡನೇ ಮದುವೆ ಆದರೂ, ಶ್ರೀಜಾ ರವರ ವಿವಾಹ ಬಹಳ ಅದ್ಧೂರಿಯಿಂದ ನಡೆಯುತ್ತಿದೆ. ಯಾವುದಕ್ಕೂ ಕಡಿಮೆ ಮಾಡದೆ ತಮ್ಮ ಕಿರಿಯ ಪುತ್ರಿ ಶ್ರೀಜಾ ಮದುವೆಯನ್ನು ಗ್ರ್ಯಾಂಡ್ ಆಗಿ ನೆರವೇರಿಸಿಕೊಡುತ್ತಿದ್ದಾರೆ ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ.

ಬೆಂಗಳೂರಿನ ದೇವನಹಳ್ಳಿಯಲ್ಲಿ ಇರುವ ಚಿರಂಜೀವಿ ಅವರ ಪ್ರಕೃತಿ ರೆಸಾರ್ಟ್ ನಲ್ಲಿ ಇಂದು ರಾತ್ರಿ 9.18ಕ್ಕೆ ಶ್ರೀಜಾ-ಕಲ್ಯಾಣ್ ರವರ ವಿವಾಹ ಮಹೋತ್ಸವ ನಡೆಯಲಿದೆ. [ಶ್ರೀಜಾ ಪ್ರೇಮ ಎಡವಿದ್ದಾದರೂ ಎಲ್ಲಿ?]

In Pics; Chiranjeevi's Daughter Srija's Sangeet ceremony

ಶ್ರೀಜಾ ರವರಿಗಿದು ಎರಡನೇ ಮದುವೆ ಆಗಿರುವ ಕಾರಣ ಚಿರಂಜೀವಿ ಆಪ್ತರಿಗಷ್ಟೇ ವಿವಾಹ ಮಹೋತ್ಸವಕ್ಕೆ ಪ್ರವೇಶ ಕಲ್ಪಿಸಲಾಗಿದೆ. ರೆಸಾರ್ಟ್ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. [ಚಿರಂಜೀವಿ ಮಗಳು ಹೆತ್ತವರ ಕಣ್ತಪ್ಪಿಸಿ ಮದುವೆಯಾದ ಕತೆ!]

ಕಳೆದ ಎರಡು ದಿನಗಳಿಂದ ಶ್ರೀಜಾ ರವರ ಮದುವೆ ಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ನಿನ್ನೆ ಸಂಜೆ ಸಂಗೀತ್ ಕಾರ್ಯಕ್ರಮ ನಡೆಯಿತು. ಅದರಲ್ಲಿ ವಧು-ವರರಾದ ಶ್ರೀಜಾ ಹಾಗೂ ಕಲ್ಯಾಣ್, ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ರವರ ಸೂಪರ್ ಡ್ಯೂಪರ್ ಹಿಟ್ ಹಾಡುಗಳಿಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು. [ಹೌದೇ? ನಿಜವೇ? ಚಿರಂಜೀವಿ ಮನೇಲಿ ಹೀಗೂ ಉಂಟಾ?]

ಚಿರಂಜೀವಿ ಪುತ್ರಿಗೆ ಶುಭ ಹಾರೈಸೋಕೆ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಕೂಡ ಸಂಗೀತ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ಎಲ್ಲಾ ಸಂಭ್ರಮ ಕ್ಷಣಗಳ ಫೋಟೋಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ ಮಾಡುತ್ತಾ ಹೋಗಿ....

-
-
-
-
-
-
-
-
-
-
-
-
-
-
-
-
-
-
-
-
-
-
-
English summary
Tollywood Actor Chiranjeevi's daughter Srija's sangeet ceremony took place last night (March 27th) at Prakruthi Resort, Bengaluru. Check out the pictures here.
Please Wait while comments are loading...