ಚಿತ್ರಗಳು : 'ಜಗ್ಗು ದಾದಾ' ಅಡ್ಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

By Harshitha

'ಅಂಬರೀಶ' ಅಬ್ಬರಿಸಿದ್ದು ಆಯ್ತು. 'Mr.ಐರಾವತ' ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ. ಈಗ ಏನಿದ್ದರೂ 'ಜಗ್ಗು ದಾದಾ' ದರ್ಬಾರ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಸಿನಿಮಾ 'ಜಗ್ಗು ದಾದಾ'. ಇದೇ ಚಿತ್ರದಲ್ಲಿ ಟಾಲಿವುಡ್ ನಟಿ ಅನುಶ್ಕಾ ಶೆಟ್ಟಿ ನಟಿಸುತ್ತಾರೆ ಅಂತ ಈ ಹಿಂದೆ ಜಗಜ್ಜಾಹೀರಾಗಿತ್ತು. ಈಗ ಆ ಜಾಗಕ್ಕೆ ದೀಕ್ಷಾ ಸೇಠ್ ಬಂದಿದ್ದಾರೆ. [ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?]

ದರ್ಶನ್ ಜೊತೆ ಸೃಜನ್ ಲೋಕೇಶ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮುಂಬೈನಲ್ಲಿ 'ಜಗ್ಗು ದಾದಾ' ಚಿತ್ರದ ಚಿತ್ರೀಕರಣ ನಡೆದಿದೆ. 'ಜಗ್ಗು ದಾದಾ' ಶೂಟಿಂಗ್ ಸೆಟ್ ನ ಚಿತ್ರಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಅಡ್ಡದಲ್ಲಿ 'ಜಗ್ಗು ದಾದಾ'ನ ದರ್ಬಾರ್ ಹೇಗಿದೆ ಅಂತ ಚಿತ್ರಗಳಲ್ಲಿ ನೀವೇ ನೋಡಿ....

ಸತ್ಯ ಹೆಗಡೆ ಜೊತೆ 'ಜಗ್ಗು ದಾದಾ'

ಸತ್ಯ ಹೆಗಡೆ ಜೊತೆ 'ಜಗ್ಗು ದಾದಾ'

'ಜಗ್ಗು ದಾದಾ' ಚಿತ್ರದ ಮೇಕಿಂಗ್ ಸ್ಟಿಲ್ ಇದು. ಕ್ಯಾಮರಾಮೆನ್ ಸತ್ಯ ಹೆಗಡೆಯ ಕ್ಯಾಮರಾ ಕೈಚಳಕ ವೀಕ್ಷಿಸುತ್ತಿರುವ ದರ್ಶನ್. [ಮುಂಬೈನಲ್ಲಿ 'ಜಗ್ಗು ದಾದಾ' ದರ್ಶನ್ ಜೊತೆ ಸೃಜ ಮಜಾ]

ಸ್ಟೈಲಿಶ್ ಲುಕ್ ನಲ್ಲಿ ದರ್ಶನ್

ಸ್ಟೈಲಿಶ್ ಲುಕ್ ನಲ್ಲಿ ದರ್ಶನ್

ಮೇಕಿಂಗ್ ಸ್ಟಿಲ್ಸ್ ನಲ್ಲಿ ದರ್ಶನ್ ರನ್ನ ನೋಡಿದ್ರೆ, 'ಜಗ್ಗು ದಾದಾ'ನಾಗಿ ದರ್ಶನ್ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದು ಖಚಿತ. ಜೀನ್ಸ್ ಮತ್ತು ಟಿ-ಶರ್ಟ್ ನಲ್ಲಿ ದರ್ಶನ್ ಸಖತ್ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣ್ತಾರೆ.

ಹಿಂದೆಂದೂ ಮಾಡಿರದ ಪಾತ್ರ

ಹಿಂದೆಂದೂ ಮಾಡಿರದ ಪಾತ್ರ

'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ನಿರ್ವಹಿಸುತ್ತಿರುವ ಪಾತ್ರದ ವಿವರ ಗುಟ್ಟಾಗಿದೆ. ನಿರ್ದೇಶಕರು ಹೇಳುವ ಪ್ರಕಾರ 'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಪಾತ್ರ ಸಿಕ್ಕಾಪಟ್ಟೆ ಡಿಫರೆಂಟ್ ಆಗಿದೆ. ಇದುವರೆಗೂ ನೀವು ನೋಡಿರದ ದರ್ಶನ್ 'ಜಗ್ಗು ದಾದಾ' ಚಿತ್ರದಲ್ಲಿರಲಿದ್ದಾರೆ.

ದಾದಾ ಅಂದ್ರೆ ಡಾನ್ ಪಾತ್ರ?

ದಾದಾ ಅಂದ್ರೆ ಡಾನ್ ಪಾತ್ರ?

'ಜಗ್ಗು ದಾದಾ' ಅಂದ್ರೆ ಸಿನಿಮಾದಲ್ಲಿ ದರ್ಶನ್ ಡಾನ್ ಪಾತ್ರ ನಿರ್ವಹಿಸಲಿದ್ದಾರೆ ಅಂತ ಅಲ್ಲ. ಸಿನಿಮಾದಲ್ಲಿ ದರ್ಶನ್ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರಂತೆ.

ಶೂಟಿಂಗ್ ನಲ್ಲಿ ಸಂತಸ

ಶೂಟಿಂಗ್ ನಲ್ಲಿ ಸಂತಸ

ಕ್ಯಾಮರಾಮ್ಯಾನ್ ಸತ್ಯ ಹೆಗಡೆ ಜೊತೆ ದರ್ಶನ್ ಸಂತಸದಿಂದ ಇರುವ ಫೋಟೋ.

ದರ್ಶನ್ ಜೊತೆ ದೀಕ್ಷಾ ಸೇಠ್

ದರ್ಶನ್ ಜೊತೆ ದೀಕ್ಷಾ ಸೇಠ್

ಪರಭಾಷಾ ನಟಿ ದೀಕ್ಷಾ ಸೇಠ್ ಮೊದಲ ಬಾರಿಗೆ ದರ್ಶನ್ ಜೊತೆ 'ಜಗ್ಗು ದಾದಾ' ಚಿತ್ರದಲ್ಲಿ ಜೋಡಿಯಾಗಲಿದ್ದಾರೆ. ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಿನಿಮಾದಲ್ಲಿ ಹೇಗಿರಬಹುದು ಅಂತ ತಿಳಿದುಕೊಳ್ಳುವುದಕ್ಕೆ ಚಿತ್ರ ಬಿಡುಗಡೆ ಆಗುವವರೆಗೂ ಕಾಯಲೇಬೇಕು.

More from Filmibeat

English summary
Kannada Actor Darshan has started to shoot for 'Jaggu Dada'. The Actor's pics from the sets of 'Jaggu Dada' is here. Check out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X