ತವರೂರಲ್ಲಿ ರಣ್ವೀರ್ ನ ಜೊತೆ ದೀಪಿಕಾ ಜೂಟಾಟ

By Harshitha

ರಣ್ಬೀರ್ ಕಪೂರ್ ಗೆ ಟಾಟಾ ಹೇಳಿದ ಮೇಲೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಕನೆಕ್ಟ್ ಆಗಿರುವುದು ರಣ್ವೀರ್ ಸಿಂಗ್ ಜೊತೆ. 'ರಾಮ್ ಲೀಲಾ' ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದೇ ತಡ, ಇಬ್ಬರ ಹೃದಯದಲ್ಲೂ ಮಧುರ ಪ್ರೇಮದ ತಲ್ಲಣವಾಗೋಯ್ತು.

'ನಾವಿಬ್ಬರೂ ಫ್ರೆಂಡ್ಸ್' ಅಂತ ತಮ್ಮ ಸಂಬಂಧವನ್ನ ಮೊದಲು ಡಿಫೈನ್ ಮಾಡಿಕೊಂಡಿದ್ದ ರಣ್ವೀರ್ ಸಿಂಗ್, ಅದು ಎಕ್ಸ್ ಟ್ರಾ ಸ್ಪೆಷಲ್ ಆಗಿದ್ದು ಅವರ ಆರೋಗ್ಯ ಕೈಕೊಟ್ಟಾಗ. 'ರಾಮ್ ಲೀಲಾ' ಚಿತ್ರೀಕರಣದ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ರಣ್ವೀರ್ ಸಿಂಗ್ ರನ್ನ ದೀಪಿಕಾ ಆರೈಕೆ ಮಾಡಿದ್ದರು.

Deepika Padukone and Ranveer Singh in Bengaluru1

ಆಗಾಗ ರಣ್ವೀರ್ ಮನೆಗೆ ತೆರಳಿ ದೀಪಿಕಾ ಯೋಗಕ್ಷೇಮ ವಿಚಾರಿಸುತ್ತಿದ್ದಾಗಲೇ, ಇಬ್ಬರ ಸ್ನೇಹ, ಪ್ರೀತಿಗೆ ತಿರುಗಿದ್ದು. ಇದೀಗ ಮದುವೆ ಮಟ್ಟಕ್ಕೆ ಬಂದು ತಲುಪಿದೆ ಇಬ್ಬರ ಪ್ರೇಮ ಪ್ರಣಯ. ಸದ್ಯದಲ್ಲೇ ವಾಲಗ ಊದಿಸುವುದಕ್ಕೆ ರೆಡಿಯಾಗಿರುವ ಈ ಜೋಡಿ, ಮೊನ್ನೆಯಷ್ಟೆ, ಅಂದ್ರೆ ಹೊಸ ವರ್ಷವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದು ನ್ಯೂಯಾರ್ಕ್ ನಲ್ಲಿ. [ರಾಮಲೀಲಾ ಜೋಡಿ ದೀಪಿಕಾ ರಣವೀರ್ ಕೃಷ್ಣಲೀಲೆ]

ನ್ಯೂ ಯಾರ್ಕ್ ನಲ್ಲಿ ಭರ್ಜರಿ ಪಾರ್ಟಿ ಮುಗಿಸಿದ ಮೇಲೆ ಭಾರತಕ್ಕೆ ಮರಳಿರುವ ಈ ಜೋಡಿ, ನಿನ್ನೆ ಸೀದಾ ಬಂದು ಲ್ಯಾಂಡ್ ಆಗಿದ್ದು ಎಲ್ಲಿ ಹೇಳಿ..? ಬೇರೆಲ್ಲೂ ಅಲ್ಲ, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ..!

Deepika Padukone and Ranveer Singh in Bengaluru2

ಎಲ್ಲರಿಗೂ ಗೊತ್ತಿರುವ ಹಾಗೆ, ದೀಪಿಕಾ ಕುಟುಂಬ ನೆಲೆಸಿರುವುದು ಬೆಂಗಳೂರಲ್ಲಿ. ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿಳಿದ ದೀಪಿಕಾ ಜೊತೆ ರಣ್ವೀರ್ ಸಿಂಗ್ ಕೂಡ ಕಾಣಿಸಿಕೊಂಡಿದ್ದು ಬೆಂಗಳೂರಿಗರಿಗೆ ಅಚ್ಚರಿ ತಂದಿದೆ. [ಮದ್ವೆ ಬಗ್ಗೆ ದೀಪಿಕಾ ಪಡುಕೋಣೆ ಬಿಚ್ಚಿಟ್ಟ ಸತ್ಯ]

ಅಷ್ಟಕ್ಕೂ ಸ್ಪೆಷಲ್ ಏನ್ ಗೊತ್ತಾ...ನಿನ್ನೆ ದೀಪಿಕಾ 'ಬರ್ತಡೆ ಗರ್ಲ್'. 29ನೇ ವಸಂತಕ್ಕೆ ಕಾಲಿಟ್ಟಿರುವ ದೀಪಿಕಾ ಬರ್ತಡೆಯನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ಬೇಕು ಅನ್ನುವ ಕಾರಣಕ್ಕೆ ರಣ್ವೀರ್ ಕೂಡ ಬೆಂಗಳೂರಿಗೆ ಬಂದಿದ್ದರು.

Deepika Padukone and Ranveer Singh in Bengaluru3

ಮನೆಗೆ ಬಂದ ಹಾಗೆ, ತಾಯಿ, ತಂಗಿ ಮತ್ತು ರಣ್ವೀರ್ ಜೊತೆ ಶಾಪಿಂಗ್ ಗೆ ಅಂತ ಹೊರಟ ದೀಪಿಕಾ ಯು.ಬಿ.ಸಿಟಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕಿಕ್ಕಿರಿದು ತುಂಬಿದ್ದ ಯು.ಬಿ.ಸಿಟಿಯಲ್ಲಿ ಟೈಟ್ ಸೆಕ್ಯೂರಿಟಿಯಿಂದಲೇ ಆಗಮಿಸಿದ ದೀಪಿಕಾ ಮತ್ತು ರಣ್ವೀರ್, ಶಾಪಿಂಗ್ ಮುಗಿಸಿ, ಕೈತುಂಬ ಲಗೇಜ್ ಹೊತ್ತು ಅಭಿಮಾನಿಗಳತ್ತ ಕೈಬೀಸಿ ತೆರಳಿದ್ದಾರೆ. [ರಣ್ವೀರ್ ಜೊತೆ ಡೇಟಿಂಗ್: ದೀಪಿಕಾ ಹೇಳಿದ್ದೇನು?]

Deepika Padukone and Ranveer Singh in Bengaluru5

ಚಿತ್ರಗಳಲ್ಲಿ ದೀಪಿಕಾ ತಾಯಿ ಉಜ್ಜಲ ಮತ್ತು ತಂಗಿ ಅನೀಷಾರನ್ನ ಕಾಣಬಹುದು. ಕುಟುಂಬದೊಂದಿಗೆ ಬೇಜಾನ್ ಶಾಪಿಂಗ್ ಮಾಡಿರುವ ದೀಪಿಕಾಗೆ, ರಣ್ವೀರ್ ಕಡೆಯಿಂದ ಏನು 'ಬರ್ತಡೆ ಗಿಫ್ಟ್' ಸಿಕ್ತೋ..?!

More from Filmibeat

English summary
The lovely couple Deepika Padukone and Ranveer Singh were spotted in UB City, Bengaluru yesterday (January 05th) apparently on Deepika's Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X