»   » ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು

ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅವರ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ನಮ್ಮನೆ ದೇವರು' ಅನ್ನೋ ಹಾಡಿನ ಶೂಟಿಂಗ್ ಬಹಳ ವಿಭಿನ್ನವಾಗಿ ನಡೆಯುತ್ತಿದ್ದು, ಇಡೀ ಗಾಂಧಿನಗರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ನಿರ್ದೇಶಕ ದುನಿಯಾ ಸೂರಿ ಅವರು.

ನಿನ್ನೆಯಿಂದ (ಜೂನ್ 22) ಆರಂಭವಾದ ಹಾಡಿನ ಚಿತ್ರೀಕರಣಕ್ಕೆ ಬಳ್ಳಾರಿಯಿಂದ ಚಾಲನೆ ದೊರೆತಿದೆ. ಬಳ್ಳಾರಿ ನಗರದಲ್ಲಿರುವ ಪ್ರಸಿದ್ಧ ದುರ್ಗಾದೇವಿ ಮೂರ್ತಿ ಹತ್ತಿರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡ್ಯಾನ್ಸ್ ಮಾಡುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.[ಬಳ್ಳಾರಿಯಲ್ಲಿ ದೊಡ್ಮನೆ ಹುಡುಗನ ದರ್ಬಾರ್ ಆರಂಭ!]


In Pics: 'Dodmane Huduga' song shooting in Bellary

ಪುನೀತ್ ಅವರ ಫೋಟೋ ಕ್ಲಿಕ್ಕಿಸುವಲ್ಲಿ ಅಭಿಮಾನಿಗಳು ನಿರತರಾಗಿದ್ದು, ಕೆಲವು ಅಭಿಮಾನಿಗಳು ವಿಡಿಯೋ ಮಾಡುತ್ತಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪುನೀತ್ ಅವರ ಮೇಲೆ ಪುಷ್ಪಾರ್ಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.


ಕನ್ನಡದ ಬಾವುಟ ಹಿಡಿದು ಪುನೀತ್ ರಾಜ್ ಕುಮಾರ್ ಅವರು ಈ ಅಪರೂಪದ 'ಅಭಿಮಾನಿಗಳ' ಹಾಡಿಗೆ ಸಖತ್ತಾಗಿ ಬಳ್ಳಾರಿಯಲ್ಲಿ ಹೆಜ್ಜೆ ಹಾಕಿದ್ದಾರೆ.[ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ]


ಅಭಿಮಾನಿಗಳಿಗೋಸ್ಕರ ತಯಾರು ಮಾಡಿದ್ದ ಈ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟ ಪುನೀತ್ ಅವರ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಅಭಿಮಾನಿಗಳು ಧನ್ಯರಾಗಿದ್ದಾರೆ.


ಬರೋಬ್ಬರಿ 1.75 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಹಾಡಿಗೆ ಬಳ್ಳಾರಿಯ ಸುಮಾರು 10 ಸಾವಿರ ಅಭಿಮಾನಿಗಳ ಜೊತೆ 200 ನುರಿತ ನೃತ್ಯಗಾರರು ಪವರ್ ಸ್ಟಾರ್ ಪುನೀತ್ ಅವರ ಜೊತೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.[ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್]


180 ನುರಿತ ತಂತ್ರಜ್ಞರು ಮತ್ತು 15 ಕ್ಯಾಮೆರಾವನ್ನು ಒಳಗೊಂಡ 'ದೊಡ್ಮನೆ ಹುಡುಗ' ಚಿತ್ರತಂಡ ಹೊಸಪೇಟೆ ಕಡೆ ಪ್ರವಾಸ ಹೊರಟಿದ್ದು, ಇಂದು (ಜೂನ್ 23) ಹೊಸಪೇಟೆಯಲ್ಲಿ ಅಭಿಮಾನಿಗಳ ಜೊತೆ ಹಾಡಿನ ಶೂಟಿಂಗ್ ನಡೆಯಲಿದೆ.


ಬಳ್ಳಾರಿಯಲ್ಲಿ ನಡೆದ ಹಾಡಿನ ಚಿತ್ರೀಕರಣ ಸ್ಟಿಲ್ಸ್ ಮತ್ತು ಅಭಿಮಾನಿಗಳ ಸಂಭ್ರಮದ ಚಿತ್ರಗಳನ್ನು ನೋಡಲು ಕೆಳಗಿನ ಗ್ಯಾಲರಿಯತ್ತ ಕಣ್ಣಾಡಿಸಿ...


-
-
-
-
ಚಿತ್ರಗಳು: ಬಳ್ಳಾರಿಯಲ್ಲಿ ಅಭಿಮಾನಿಗಳ ಜೊತೆ ಕೇಕೆ ಹಾಕಿದ ಪುನೀತ್

ಚಿತ್ರಗಳು: ಬಳ್ಳಾರಿಯಲ್ಲಿ ಅಭಿಮಾನಿಗಳ ಜೊತೆ ಕೇಕೆ ಹಾಕಿದ ಪುನೀತ್

ಚಿತ್ರಗಳು: ಬಳ್ಳಾರಿಯಲ್ಲಿ ಅಭಿಮಾನಿಗಳ ಜೊತೆ ಕೇಕೆ ಹಾಕಿದ ಪುನೀತ್
-
-
-
-
-
-
-
-
English summary
Song shooting for Dodmane Huduga from Ballery on 22nd June. Thousands of fans took part in this shooting along with Actor Puneeth Rajkumar. The movie is directed by Duniya Soori.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada