»   » ಚಿತ್ರಗಳು : 'ನೀರ್ ದೋಸೆ' ಸೆಟ್ ನಲ್ಲಿ ಮೋಜು-ಮಸ್ತಿ

ಚಿತ್ರಗಳು : 'ನೀರ್ ದೋಸೆ' ಸೆಟ್ ನಲ್ಲಿ ಮೋಜು-ಮಸ್ತಿ

Posted By:
Subscribe to Filmibeat Kannada

'ಬೆಣ್ಣೆ ದೋಸೆ' ಹುಯ್ಯುವುದನ್ನ ಬಿಟ್ಟು ಒನ್ಸ್ ಅಗೇನ್ 'ನೀರ್ ದೋಸೆ' ಹಿಟ್ಟನ್ನ ರುಬ್ಬಿ ಅದಕ್ಕೀಗ ಮಸಾಲೆ ಹಾಕುವುದರಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಬಿಜಿಯಾಗಿದ್ದಾರೆ.

ರಮ್ಯಾ ಬಿಟ್ಟು ಹೋದ ಜಾಗಕ್ಕೆ ಕಾಲಿಟ್ಟಿರುವ ಹರಿಪ್ರಿಯಾ ಕೊಂಚ ಕೂಡ ಬಿಂಕ ಮಾಡದೆ 'ನೀರ್ ದೋಸೆ'ಗೆ ಮಿರ್ಚಿ ಚಟ್ನಿ-ಬೆಣ್ಣೆ ಸವರುತ್ತಿದ್ದಾರೆ. ['ನೀರ್ ದೋಸೆ'ಯಲ್ಲಿ ಮರ್ಲಿನ್ ಮನ್ರೋಳನ್ನು ಹಿಂದಿಕ್ಕಿದ 'ಉಗ್ರಂ' ಬೆಡಗಿ]

ಲವಲವಿಕೆಯಿಂದ 'ನೀರ್ ದೋಸೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ 'ನೀರ್ ದೋಸೆ' ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಿತು. ಅದರಲ್ಲಿ ಹರಿಪ್ರಿಯಾ, ನಿರ್ದೇಶಕ ವಿಜಯ್ ಪ್ರಸಾದ್, ಜಗ್ಗೇಶ್ ಮತ್ತು ದತ್ತಣ್ಣ ರವರ ಮೋಜು-ಮಸ್ತಿ ಹೇಗಿತ್ತು ಅಂತ ನೀವೇ ನೋಡಿ ಕೆಳಗಿರುವ ಸ್ಲೈಡ್ ಗಳಲ್ಲಿ.....

ವಿಜಯ್ ಪ್ರಸಾದ್ ತುಟಿಗೆ ಕೆಂಪು ಬಣ್ಣ

'ನೀರ್ ದೋಸೆ' ಶೂಟಿಂಗ್ ಸ್ಪಾಟ್ ನಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ತುಟಿಗೆ ಲಿಪ್ ಸ್ಟಿಕ್ ಹಚ್ಚೋಕೆ ಸಿದ್ಧವಾಗಿರುವ ನಟಿ ಹರಿಪ್ರಿಯಾ.

ಜಾಲಿ ಮೂಡ್ ನಲ್ಲಿ ಚಿತ್ರತಂಡ

ಮಲ್ಲೇಶ್ವರಂ ಬಳಿಯ ಮೈದಾನದಲ್ಲಿರುವ ಜೇಂಟ್ ವೀಲ್ ನಲ್ಲಿ ಕುಳಿತು ಹರಿಪ್ರಿಯಾ, ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ದತ್ತಣ್ಣ ಜಾಲಿ ಮೂಡ್ ನಲ್ಲಿರುವ ಕ್ಷಣ.

ಜಗ್ಗೇಶ್ ಜೊತೆ ವಿಜಯ್ ಪ್ರಸಾದ್

ಶೂಟಿಂಗ್ ಸೆಟ್ ನಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ನಿರ್ದೇಶಕ ವಿಜಯ್ ಪ್ರಸಾದ್.

ಬ್ರೇಕ್ ನಲ್ಲಿ ಕಿಲಕಿಲ

ಬೆಂಗಳೂರಿನ ಮಲ್ಲೇಶ್ವರಂ ಬಳಿಯ ಮೈದಾನದಲ್ಲಿ 'ನೀರ್ ದೋಸೆ' ಚಿತ್ರೀಕರಣದ ಬ್ರೇಕ್ ಟೈಮ್ ನಲ್ಲಿ ಚಿತ್ರತಂಡ ಹರಟುತ್ತಿದ್ದಾಗ ಕ್ಲಿಕ್ ಆಗಿರುವ ಫೋಟೋಗಳಿವು. ಇದನ್ನೆಲ್ಲ ನೋಡಿದ್ರೆ ಗೊತ್ತಾಗಲ್ವಾ ಶೂಟಿಂಗ್ ನಲ್ಲೀಗ ಕಿರಿಕಿರಿ ಇಲ್ಲ, ಕಿಲಕಿಲ ಅಂತ ಸಾಗುತ್ತಿದೆ ಅಂತ.?!

ಹಾಟ್ ಲುಕ್ ನಲ್ಲಿ ಹರಿಪ್ರಿಯಾ

ಹಿಂದೆಂದಿಗಿಂತಲೂ ಸಖತ್ ಹಾಟ್ ಲುಕ್ ನಲ್ಲಿ ನಟಿ ಹರಿಪ್ರಿಯಾ 'ನೀರ್ ದೋಸೆ' ಚಿತ್ರದಲ್ಲಿ ಮಿಂಚಿದ್ದಾರೆ. ಅದಕ್ಕೆ ಈ ಎಲ್ಲಾ ಫೋಟೋಗಳೇ ಸಾಕ್ಷಿ.

English summary
Kannada Actress Haripriya has replaced Ramya in Kannada Movie 'Neer Dose'. Check out the shooting pics of 'Neer Dose'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada