For Quick Alerts
  ALLOW NOTIFICATIONS  
  For Daily Alerts

  ಮದುವೆ ಸಂಭ್ರಮದಲ್ಲಿ ನಟಿ ಹಿತಾ ಮತ್ತು ನಟ ಕಿರಣ್ ಶ್ರೀನಿವಾಸ್

  |

  ಚಂದನವನದಲ್ಲಿ ಮತ್ತೆ ಮತ್ತೆ ಮಂಗಳವಾದ್ಯದ ಸದ್ದು ಕೇಳಿ ಬರುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ನಟ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟ ರಿಷಿ ಕೂಡ ಗೃಹಸ್ಥಾಶ್ರಮಕ್ಕೆ ಅಡಿಯಿಟ್ಟರು. ಈಗ ಇದೇ ಸಾಲಿಗೆ ನಟಿ ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ಶ್ರೀನಿವಾಸ್ ಸೇರುತ್ತಿದ್ದಾರೆ.

  'ಒಂಥರಾ ಬಣ್ಣಗಳು' ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಇದೀಗ ನಿಜ ಜೀವನದಲ್ಲೂ ಜಂಟಿ ಆಗುತ್ತಿದ್ದಾರೆ. ಇಂದು (ಡಿಸೆಂಬರ್ 1) ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಸಪ್ತಪದಿ ತುಳಿಯಲಿದ್ದಾರೆ.

  ವಿವಾಹ ಮಹೋತ್ಸವಕ್ಕೂ ಮುನ್ನ ಹಿತಾ-ಕಿರಣ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಗೌರಿ ಪೂಜೆ, ಮೆಹಂದಿ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ಅದರ ಫೋಟೋಗಳು ಇಲ್ಲಿವೆ, ನೋಡಿರಿ..

  ಗೌರಿ ಪೂಜೆ ನೆರವೇರಿಸಿದ ಹಿತಾ

  ಗೌರಿ ಪೂಜೆ ನೆರವೇರಿಸಿದ ಹಿತಾ

  ಮದುವೆಗೂ ಮುನ್ನ ಮನೆಯಲ್ಲಿ ಹಿತಾ ಚಂದ್ರಶೇಖರ್ ಶಾಸ್ತ್ರೋಕ್ತವಾಗಿ ಗೌರಿ ಪೂಜೆ ನೆರವೇರಿಸಿದರು. ತಾಯಿ ಸಿಹಿ ಕಹಿ ಗೀತಾ, ಸಹೋದರಿ ಖುಷಿ ಚಂದ್ರಶೇಖರ್ ಸೇರಿದಂತೆ ಕುಟುಂಬಸ್ಥರು ಗೌರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

  ಹಿತಾ ಚಂದ್ರಶೇಖರ್-ಕಿರಣ್ ಮದುವೆಗೆ ದಿನಾಂಕ ನಿಗದಿ ಆಯ್ತುಹಿತಾ ಚಂದ್ರಶೇಖರ್-ಕಿರಣ್ ಮದುವೆಗೆ ದಿನಾಂಕ ನಿಗದಿ ಆಯ್ತು

  ಮೆಹಂದಿ ಸಂಭ್ರಮದಲ್ಲಿ ವಧು

  ಮೆಹಂದಿ ಸಂಭ್ರಮದಲ್ಲಿ ವಧು

  ಗೌರಿ ಪೂಜೆಯ ಬಳಿಕ ಮೆಹಂದಿ ಶಾಸ್ತ್ರ ನಡೆಯಿತು. ವಧು ಹಿತಾ ಜೊತೆಯಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಕೈಗೆ ಮೆಹಂದಿ ಹಾಕಿಕೊಂಡು ಸಂಭ್ರಮ ಪಟ್ಟರು. ಮೆಹಂದಿ ಶಾಸ್ತ್ರಕ್ಕೆ ಪಿಂಕ್ ಬಣ್ಣದ ಡ್ರೆಸ್ ಧರಿಸಿದ್ದರು ಹಿತಾ ಚಂದ್ರಶೇಖರ್.

  ಹುಡುಗಿಯರ ಗ್ಯಾಂಗ್ ಜೊತೆ ಹಿತಾ ಬ್ಯಾಚುಲರೆಟ್ ಪಾರ್ಟಿಹುಡುಗಿಯರ ಗ್ಯಾಂಗ್ ಜೊತೆ ಹಿತಾ ಬ್ಯಾಚುಲರೆಟ್ ಪಾರ್ಟಿ

  ವರ ಪೂಜೆಯಲ್ಲಿ ಕಿರಣ್

  ವರ ಪೂಜೆಯಲ್ಲಿ ಕಿರಣ್

  ಇತ್ತ ಕಿರಣ್ ಶ್ರೀನಿವಾಸ್ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿತ್ತು. ವರಪೂಜೆ ಶಾಸ್ತ್ರ ನಿನ್ನೆ ನಡೆಯಿತು. ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ನಟ ಕಿರಣ್ ಶ್ರೀನಿವಾಸ್ ಗೆ ಬಂಧು-ಮಿತ್ರರು ಶುಭ ಕೋರಿದರು.

  ಸಂಗೀತ ಸಮಾರಂಭ

  ಸಂಗೀತ ಸಮಾರಂಭ

  ಇನ್ನೂ ಸಂಗೀತ ಸಮಾರಂಭದಲ್ಲಿ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಕಾಣಿಸಿಕೊಂಡಿದ್ದು ಹೀಗೆ.. ರೋಮ್ಯಾಂಟಿಕ್ ಹಾಡುಗಳಿಗೆ ಕಿರಣ್ ಮತ್ತು ಹಿತಾ ಹೆಜ್ಜೆ ಹಾಕಿದರು. ಇಡೀ ಕುಟುಂಬ ಮತ್ತು ಸ್ನೇಹಿತರ ಬಳಗ ಸಂಗೀತ ಸಮಾರಂಭದಲ್ಲಿ ಖುಷಿ ಪಟ್ಟರು.

  English summary
  Kannada Actress Hita Chandrashekar and Kiran Srinivas is getting married. Have a look at Hitha's mehendi and sangeeth ceremony photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X