Just In
Don't Miss!
- News
ನಮಗೆ ವಿನಾಯಿತಿ ಕೊಡಿ ಪ್ಲೀಸ್ ಎಂದ ಮೇಘಾಲಯ ಸಿಎಂ
- Finance
ಭಾರತದ ಚಿಲ್ಲರೆ ಹಣದುಬ್ಬರ ಮೂರು ವರ್ಷದ ಗರಿಷ್ಠ ಮಟ್ಟ 5.54%
- Sports
ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಲೀಗ್ಗೆ ರೋಹಿತ್ ಶರ್ಮಾ ರಾಯಭಾರಿ!
- Automobiles
ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು
- Lifestyle
ಜ್ಯೋತಿಶಾಸ್ತ್ರದ ಪ್ರಕಾರ 2020ರಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹೇಗಿರಲಿದೆ
- Technology
ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಸೇರಿಸಿ ಸೆಂಡ್ ಮಾಡಲು ಅವಕಾಶ ನೀಡುವ ಜಿಮೇಲ್
- Education
IBPS SO Admit Card 2019: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಪ್ರಕಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಹ್ಯಾಪಿ ಮ್ಯಾರೀಡ್ ಲೈಫ್ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್
ಲವ್ ಮಾಡುತ್ತಿದ್ದರೂ ''ನಾವಿಬ್ಬರು ಜಸ್ಟ್ ಫ್ರೆಂಡ್ಸ್.. ಜಸ್ಟ್ ಫ್ರೆಂಡ್ಸ್'' ಅಂತ ಎಲ್ಲರ ಬಳಿಯೂ ಹೇಳಿಕೊಳ್ಳುತ್ತಿದ್ದ ಕನ್ನಡ ನಟಿ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಇವತ್ತು ಅಧಿಕೃತವಾಗಿ 'ಕಪಲ್' ಆಗಿದ್ದಾರೆ.
ಇಷ್ಟು ದಿನ ಪ್ರೇಮ ಗೀತೆ ಹಾಡುತ್ತಿದ್ದ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಇಂದು ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದಾರೆ. ಗುರು, ಹಿರಿಯರು, ಕುಟುಂಬಸ್ಥರ ಆಶೀರ್ವಾದ ಪಡೆದು ಹೊಸ ಜೀವನಕ್ಕೆ ನವ ದಂಪತಿ ಅಡಿಯಿಟ್ಟಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ನೆರವೇರಿದೆ. ಮುಂದೆ ಓದಿರಿ..

ಮಿಸ್ಟರ್ ಅಂಡ್ ಮಿಸಸ್ ಕಿರಣ್
ಇವತ್ತು ಬೆಳಗ್ಗೆ ಇದ್ದ ಶುಭ ಮುಹೂರ್ತದಲ್ಲಿ ವಧು ಹಿತಾ ಚಂದ್ರಶೇಖರ್ ಕೊರಳಿಗೆ ಕಿರಣ್ ಶ್ರೀನಿವಾಸ್ ಮಾಂಗಲ್ಯಧಾರಣೆ ಮಾಡಿದರು. ಮಗಳ ಮದುವೆಯನ್ನ ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ದಂಪತಿ ಮುಂದೆ ನಿಂತು ನೆರವೇರಿಸಿದರು. ಹಿತಾ-ಕಿರಣ್ ಮದುವೆಗೆ ಕೃಷಿ ತಾಪಂಡ, ಅನುಪಮಾ ಗೌಡ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಕಲಾವಿದರು ಸಾಕ್ಷಿ ಆದರು.
ಮದುವೆ ಸಂಭ್ರಮದಲ್ಲಿ ನಟಿ ಹಿತಾ ಮತ್ತು ನಟ ಕಿರಣ್ ಶ್ರೀನಿವಾಸ್

ಲವ್ ಕಮ್ ಅರೇಂಜ್ಡ್ ಮ್ಯಾರೇಜ್
ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇಬ್ಬರು ಪ್ರೀತಿ ಮಾಡುತ್ತಿದ್ದ ವಿಚಾರವನ್ನು ನಟಿ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು. ಬಳಿಕ ತಮ್ಮ ಪ್ರೀತಿಗೆ ಕುಟುಂಬದಿಂದ ಸಮ್ಮತಿ ಪಡೆದು ಇಂದು ಸಪ್ತಪದಿ ತುಳಿದಿದ್ದಾರೆ ಈ ಜೋಡಿ.

ಇಬ್ಬರ ಮಧ್ಯೆ ಪ್ರೀತಿ ಮೂಡಿದ್ದು ಹೇಗೆ.?
'1/4 ಕೆ.ಜಿ ಪ್ರೀತಿ', 'ದುನಿಯಾ-2', 'ಒಂಥರಾ ಬಣ್ಣಗಳು', 'ತುರ್ತು ನಿರ್ಗಮನ' ಸಿನಿಮಾಗಳಲ್ಲಿ ಹಿತಾ ಚಂದ್ರಶೇಖರ್ ಅಭಿನಯಿಸಿದ್ದಾರೆ. ಇನ್ನೂ 'ಹಾಗೇ ಸುಮ್ಮನೆ', 'ಪ್ರೀತಿಯಿಂದ ರಮೇಶ್', 'ನಿರುತ್ತರ' ಸಿನಿಮಾಗಳಲ್ಲಿ ಕಿರಣ್ ಶ್ರೀನಿವಾಸ್ ನಟಿಸಿದ್ದಾರೆ. 'ಒಂಥರಾ ಬಣ್ಣಗಳು' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹಿತಾ ಮತ್ತು ಕಿರಣ್ ನಡುವೆ ಪ್ರೀತಿ ಮೂಡಿದೆ.

ಗ್ರ್ಯಾಂಡ್ ಆಗಿ ನಡೆದ ಸಂಗೀತ ಕಾರ್ಯಕ್ರಮ
ಮದುವೆಗೂ ಮುನ್ನ ಹಿತಾ-ಕಿರಣ್ ರವರ ಸಂಗೀತ ಸಮಾರಂಭ ಕೂಡ ಗ್ರ್ಯಾಂಡ್ ಆಗಿ ನಡೆದಿತ್ತು. ಸಂಗೀತ ಸೆರೆಮನಿಯಲ್ಲಿ ರೋಮ್ಯಾಂಟಿಕ್ ಹಾಡುಗಳಿಗೆ ನವ ಜೋಡಿ ಹೆಜ್ಜೆ ಹಾಕಿದರು.

ಹಿತಾ ಕೈಯಲ್ಲಿ ಮದರಂಗಿ
ವಿವಾಹ ಮಹೋತ್ಸವಕ್ಕೂ ಮುನ್ನ ಹಿತಾ ಮನೆಯಲ್ಲಿ ಗೌರಿ ಪೂಜೆ ಮತ್ತು ಮೆಹಂದಿ ಶಾಸ್ತ್ರ ನಡೆಯಿತು. ವಧು ಹಿತಾ ಜೊತೆಯಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಕೈಗೆ ಮೆಹಂದಿ ಹಾಕಿಕೊಂಡು ಸಂಭ್ರಮ ಪಟ್ಟರು. ಮೆಹಂದಿ ಶಾಸ್ತ್ರಕ್ಕೆ ಪಿಂಕ್ ಬಣ್ಣದ ಡ್ರೆಸ್ ಧರಿಸಿದ್ದರು ಹಿತಾ ಚಂದ್ರಶೇಖರ್.