For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು : 'ನೀರ್ ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಹಸಿ ಬಿಸಿ

  By Harshitha
  |

  ಅಂತೂ ಇಂತೂ 'ನೀರ್ ದೋಸೆ' ರೆಡಿಯಾಗಿದೆ. ರಮ್ಯಾ ಒಲ್ಲೆ ಎಂದು ಬಿಟ್ಟು ಹೋದ 'ನೀರ್ ದೋಸೆ' ಹುಯ್ಯೋಕೆ ಬಂದ ಹರಿಪ್ರಿಯಾ, ಬಿಸಿ ಬಿಸಿಯಾದ 'ನೀರ್ ದೋಸೆ' ಜೊತೆಗೆ ಮಿರ್ಚಿ ಮಸಾಲೆಯನ್ನೂ ಅರೆದಿದ್ದಾರೆ.

  ಇದುವರೆಗೂ ಪಕ್ಕದ್ಮನೆ ಹುಡುಗಿಯಂತೆ ತೆರೆ ಮೇಲೆ ಕಂಗೊಳಿಸುತ್ತಿದ್ದ ನಟಿ ಹರಿಪ್ರಿಯಾ, 'ನೀರ್ ದೋಸೆ' ಚಿತ್ರದಲ್ಲಿ ಬಿಂಕ ಬಿಟ್ಟು ಅಲ್ಟ್ರಾ ಮಾರ್ಡನ್ ಕುವರಿ ಆಗಿದ್ದಾರೆ. ತುಂಡುಡುಗೆ ತೊಟ್ಟು, ಬಾಯಿಂದ ಹೊಗೆ ಬಿಟ್ಟಿದ್ದಾರೆ.

  ಇನ್ನೂ ನವರಸ ನಾಯಕ ಜಗ್ಗೇಶ್, ದತ್ತಣ್ಣ, ಸುಮನ್ ರಂಗನಾಥ್ ಸೇರಿದಂತೆ ದೊಡ್ಡ ತಾರಾಬಳಗದ ದಂಡು 'ನೀರ್ ದೋಸೆ' ಚಿತ್ರದ ಪ್ರಮುಖ ಆಕರ್ಷಣೆ. [ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ]

  ಈಗಾಗಲೇ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದಿರುವ 'ನೀರ್ ದೋಸೆ' ಚಿತ್ರ ಈಗ ರೀರೆಕಾರ್ಡಿಂಗ್ ಟೇಬಲ್ ಮೇಲಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ 'ನೀರ್ ದೋಸೆ' ಚಿತ್ರದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ.

  ವಿಜಯ್ ಪ್ರಸಾದ್ ನಿರ್ದೇಶನವಿರುವ 'ನೀರ್ ದೋಸೆ' ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಇದೆ. [ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?]

  'ನೀರ್ ದೋಸೆ' ನಿಮ್ಮ ಟೇಬಲ್ ಗೆ ಬರುವ ಮುನ್ನ, ಅಡುಗೆ ಮನೆಯಿಂದ ನೇರವಾಗಿ ನಾವು ತಂದಿರುವ ಚಿತ್ರದ ಸ್ಟಿಲ್ಸ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ ನೋಡಿ....

  'ನೀರ್ ದೋಸೆ' ಚಿತ್ರದಲ್ಲಿ ಸಖತ್ ಹಾಟ್ ಅವತಾರದಲ್ಲಿ ನಟಿ ಹರಿಪ್ರಿಯಾ

  ತುಂಡುಡುಗೆ ತೊಟ್ಟಿರುವ ನಟಿ ಹರಿಪ್ರಿಯಾ

  ಈ ಹಿಂದೆ ಹರಿಪ್ರಿಯಾ ಇಷ್ಟು ಹಾಟ್ ಆಗಿ ಕಾಣಿಸಿರ್ಲಿಲ್ಲ.!

  ನಟಿ ಹರಿಪ್ರಿಯಾ ಈಗ ಬೋಲ್ಡ್ ಅಂಡ್ ಬ್ಯೂಟಿಫುಲ್

  ನೋಡಿ, ಹರಿಪ್ರಿಯಾ ಸ್ಟೈಲ್ ಹೇಗಿದೆ ಅಂತ.!

  ಬಬ್ಲಿ ಅಂಡ್ ಬ್ಯೂಟಿಫುಲ್ ಹರಿಪ್ರಿಯಾ

  ಜಗ್ಗೇಶ್ ರವರ ತ್ರಿಬಲ್ ರೈಡಿಂಗ್.!

  ಜಗ್ಗೇಶ್ ಜೊತೆ ಹರಿಪ್ರಿಯಾ

  ಯಾವ ಬಾಲಿವುಡ್ ಹೀರೋಯಿನ್ ಗೆ ಹರಿಪ್ರಿಯಾ ಕಮ್ಮಿ ಹೇಳಿ.?

  ಜಗ್ಗೇಶ್ ಗೆ ಸುಮನ್ ರಂಗನಾಥ್ ಜೋಡಿ ಕಣ್ರೀ.!

  'ನೀರ್ ದೋಸೆ' ಅಡ್ಡದಲ್ಲಿ ಸುಮನ್ ರಂಗನಾಥ್ ಡ್ಯಾನ್ಸರ್

  ಜಗ್ಗೇಶ್ ಜೊತೆ ದತ್ತಣ್ಣ

  'ನೀರ್ ದೋಸೆ' ಚಿತ್ರದ ಡೈಲಾಗ್ಸ್ ಹೆಂಗಿದೆ ಗೊತ್ತಾ?

  ಮಸ್ತ್ ಕಾಮಿಡಿ ಮಾಡ್ತಾರೆ ಜಗ್ಗೇಶ್

  'ನೀರ್ ದೋಸೆ' ಸೆಟ್ ನಲ್ಲಿ ಒಂದು ವಿಸಿಟ್

  'ನೀರ್ ದೋಸೆ' ಸೆಟ್ ನಲ್ಲಿ ಒಂದು ವಿಸಿಟ್

  'ನೀರ್ ದೋಸೆ' ಸೆಟ್ ನಲ್ಲಿ ಒಂದು ವಿಸಿಟ್

  'ನೀರ್ ದೋಸೆ' ಸೆಟ್ ನಲ್ಲಿ ಒಂದು ವಿಸಿಟ್

  English summary
  Check out the making stills and Glamorous images of Haripriya from Jaggesh starrer Kannada Movie 'Neer Dose'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X