»   » ಚಿತ್ರಗಳು: ಜಗ್ಗೇಶ್ ಪತ್ನಿ ಪರಿಮಳ'ರ ಪ್ರಾಣಿ-ಪಕ್ಷಿ ಪ್ರೀತಿ ಹೇಗಿದೆ ಒಮ್ಮೆ ನೋಡಿ..

ಚಿತ್ರಗಳು: ಜಗ್ಗೇಶ್ ಪತ್ನಿ ಪರಿಮಳ'ರ ಪ್ರಾಣಿ-ಪಕ್ಷಿ ಪ್ರೀತಿ ಹೇಗಿದೆ ಒಮ್ಮೆ ನೋಡಿ..

Posted By:
Subscribe to Filmibeat Kannada

ನವರಸ ನಾಯಕ ನಟ ಜಗ್ಗೇಶ್ ಮತ್ತು ಪತ್ನಿ ಪರಿಮಳ ಜಗ್ಗೇಶ್ ಅವರದ್ದು ಲವ್ ಮ್ಯಾರೇಜ್ ಅನ್ನೋ ವಿಷಯ ನಿಮಗೆಲ್ಲಾ ತಿಳಿದಿರುವ ವಿಷಯ. ಅವರ ಪ್ರೇಮಕಥೆ ಅದ್ಭುತ ಮತ್ತು ಕುತೂಹಲಕಾರಿಯಾದುದು. ಈ ಬಗ್ಗೆ ಹಲವರು ಫಿಲ್ಮಿಬೀಟ್ ನಲ್ಲಿ ಓದಿರುತ್ತೀರಿ, ಇನ್ನೂ ಹಲವರು ಜಗ್ಗೇಶ್ ರವರ 'ವೀಕೆಂಡ್ ವಿತ್ ರಮೇಶ್ 3' ಎಪಿಸೋಡ್ ನೋಡಿ ತಿಳಿದಿರುತ್ತೀರಿ.

ಪರಿಮಳ 'ಗಗನ ಜಿಗಿತ' ಕಂಡು ಚಕಿತಗೊಂಡ ಜಗ್ಗೇಶ್

ನಟ ಜಗ್ಗೇಶ್ ರವರಿಗೆ ಕನ್ನಡ, ಕರ್ನಾಟಕ ಅಂದ್ರೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಕಾಳಜಿ ಪರಿಸರದ ಮೇಲೂ ಇದೆ. ಇನ್ನು ಅವರ ಪತ್ನಿ ಪರಿಮಳ ಜಗ್ಗೇಶ್ ಅವರಿಗೂ ಪ್ರಕೃತಿ, ಸುಂದರ ತಾಣಗಳು, ಪ್ರಾಣಿ-ಪಕ್ಷಿಗಳೊಂದಿಗೆ ಕಾಲ ಕಳೆಯುವುದು ಅಂದ್ರೆ ತುಂಬಾ ಇಷ್ಟ. ಅವರಿಗೆ ಪ್ರಾಣಿಗಳು ಅಂದ್ರೆ ಎಷ್ಟು ಲವ್ ಇದೆ ಅನ್ನೋದನ್ನ ಈ ಕೆಳಗಿನ ಚಿತ್ರಗಳಲ್ಲಿ ನೀವೆ ಒಮ್ಮೆ ನೋಡಿ..

ಪಕ್ಷಿಗಳೊಂದಿಗೆ ಪರಿಮಳ

ಪರಿಮಳ ಜಗ್ಗೇಶ್ ರವರು ಆಗಾಗ ಕುಟುಂಬ ಸಮೇತ ವಿದೇಶಗಳಿಗೆ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸದ್ಯ ಮಲೇಶಿಯಾ ಟೂರಿಂಗ್ ಹೋಗಿರುವ ಪರಿಮಳ ಅವರು ಅಲ್ಲಿನ ಮೃಗಾಲಯಗಳಿಗೆ ಮತ್ತು ಸುಂದರ ತಾಣಗಳಿಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಪಕ್ಷಿಗಳು ಎಂದರೆ ಬಹಳ ಇಷ್ಟಪಡುವ ಅವರು 'Aviary' ಗಿಳಿಗಳೊಂದಿಗೆ ಕಾಲ ಕಳೆಯುತ್ತಾ ಅವುಗಳಿಗೆ ಆಹಾರ ನೀಡುತ್ತಿರುವ ಸಂದರ್ಭದಲ್ಲಿ ಕ್ಲಿಕ್ಕಿಸಿದ ಈ ಮೇಲಿನ ಫೋಟೋ ನೋಡಿ.

ಮಂಗಗಳೊಂದಿಗೆ ಆಟವಾಡಿದ ಕ್ಷಣ

ಮಲೇಶಿಯಾ ಪ್ರವಾಸದಲ್ಲಿ ಪರಿಮಳ ಜಗ್ಗೇಶ್ ರವರು ಅಲ್ಲಿನ ಮೃಗಾಲಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಸಿಲ್ವರ್ಡ್‌ ಲೀಫ್ ಮಂಕಿಗಳೊಂದಿಗೆ ಆಟವಾಡಿ ಸಮಯ ಕಳೆದ ಅವರು ಅವುಗಳೊಂದಿಗೆ ಇಂಟೆರ್ಯಾಕ್ಟ್ ಮಾಡಲು ಒಂದು ಒಳ್ಳೆಯ ಅವಕಾಶ ಸಿಕ್ಕಿತು ಎಂದು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಹೆಬ್ಬಾವನ್ನು ಕತ್ತಿಗೆ ಸುತ್ತಿಕೊಳ್ಳವುದು ಕನಸಾಗಿತ್ತಂತೆ

ಪರಿಮಳ ಜಗ್ಗೇಶ್ ರವರಿಗೆ ಪ್ರಾಣಿಗಳು ಮತ್ತು ಪಕ್ಷಿಗಳು ಅಂದ್ರೆ ಎಲ್ಲಿಲ್ಲದ ಲವ್. ಆದರೆ ಹೆಬ್ಬಾವನ್ನು ಕತ್ತಿಗೆ ಸುತ್ತಿಕೊಳ್ಳುವುದು ಅವರ ಕನಸ್ಸಾಗಿತಂತೆ. ಮಲೇಶಿಯಾದ ಮೃಗಾಲಯದಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು ತೆಗೆಸಿಕೊಂಡಿರುವ ಈ ಮೇಲಿನ ಫೋಟೋ ಜೊತೆಗೆ ಪರಿಮಳ ಅವರು 'Dream Come True' ಎಂದು ಟ್ವೀಟ್ ಮಾಡಿದ್ದಾರೆ.

ನವಿಲು

ಪರಿಮಳ ಅವರು ಗಿಳಿಗಳಿಗೆ ಆಹಾರ ತಿನಿಸಿದಂತೆ, ನಮ್ಮ ರಾಷ್ಟ್ರೀಯ ಪಕ್ಷಿ ನವಿಲಿಗು ಆಹಾರ ನೀಡುತ್ತ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

ಆಮೆ ಮತ್ತು ಮೊಲ

ಪರಿಮಳ ಅವರಿಗೆ ಪ್ರಕೃತಿಯಲ್ಲಿ ಹೆಚ್ಚು ಕಾಲ ಟೈಮ್ ಸ್ಪೆಂಡ್ ಮಾಡುವುದು ಎಂದರೆ ತುಂಬಾ ಇಷ್ಟ. ಆದ್ದರಿಂದ ಅವರು ಮಲೇಶಿಯಾದಲ್ಲಿ ಪ್ರಾಣಿ ಪಕ್ಷಿಗಳೊಂದಿಗೆ ಕಳೆದ ಸುಂದರ ಕ್ಷಣಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಮೊಲ ಮತ್ತು ಆಮೆಯೊಂದಿಗೆ ತೆಗೆಸಿಕೊಂಡ ಈ ಫೋಟೋ ನೋಡಿ.

English summary
In Pics: Actor Jaggesh wife Parimala Jaggesh spending time with Wild Animals in Malaysia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada