»   » ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು

ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು

By: ಸೋನು
Subscribe to Filmibeat Kannada

ಕಾಲಿವುಡ್ ಚಿತ್ರರಂಗದಲ್ಲಿ ದಾಖಲೆ ಹುಟ್ಟುಹಾಕಲು ಸಜ್ಜಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಮತ್ತೊಂದು ದಾಖಲೆ ಮಾಡಿದೆ. ಈಗಾಗಲೇ ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಬಹಳಷ್ಟು ಸುದ್ದಿಯಲ್ಲಿರುವ 'ಕಬಾಲಿ' ಇದೀಗ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತಹ ದಾಖಲೆ ಮಾಡಿದೆ.

ಹೌದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಏರ್ ಏಷ್ಯಾ ಏರ್ ಲೈನ್ ಕಂಪೆನಿ ತಮ್ಮ ವಿಮಾನವೊಂದನ್ನು 'ಕಬಾಲಿ' ಚಿತ್ರಕ್ಕೆಂದು ಮೀಸಲಿಡಲು ಮುಂದಾಗಿದೆ. ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ತರ ವಿಶೇಷವಾಗಿ ಶುಭಕೋರುವ ಜೊತೆಗೆ ಚಿತ್ರದ ಪ್ರಚಾರಾರ್ಥವಾಗಿ ಈ ವಿಶೇಷ ವಿಮಾನ ಸಜ್ಜಾಗಿದೆ.['ಮದಾರಿ'-'ಕಬಾಲಿ' ಪೋಸ್ಟರ್ ಸೇಮ್: ಕಳ್ಳರು ಯಾರು?]

In pics: 'Kabali' flights with Rajini image first time in the world

ಅಂದಹಾಗೆ 'ಕಬಾಲಿ' ಚಿತ್ರ ಬಿಡುಗಡೆಯಾಗುವ ದಿನದಿಂದ ವಿಶೇಷವಾಗಿ ಈ ವಿಮಾನ ಸಂಚಾರ ಆರಂಭಿಸಲಿದ್ದು, ಪ್ರಮುಖವಾಗಿ ಬೆಂಗಳೂರಿನಿಂದ ಚೆನ್ನೈ ಗೆ 'ಕಬಾಲಿ' ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಈ ವಿಮಾನದ ಮೂಲಕ ಪ್ರಯಾಣಿಸಬಹುದು.

ಈ ವಿಶೇಷ ವಿಮಾನಕ್ಕೆ ಈಗಾಗಲೇ 'ಕಬಾಲಿ' ಚಿತ್ರದ ಪೋಸ್ಟರ್ ಅಂಟಿಸಲಾಗಿದೆ. ಇನ್ನು ಬರೀ ಬೆಂಗಳೂರು ಮಾತ್ರವಲ್ಲದೇ, ದೆಹಲಿ, ಗೋವಾ, ಪುಣೆ, ಚಂಡೀಗಡ, ಜೈಪುರ, ಗುಹವಾಟಿ, ಇಂಫಾಲ್, ವೈಜಾಗ್, ಮತ್ತು ಕೊಚ್ಚಿಯಿಂದ ಆಗಮಿಸುವ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಈ ವಿಶೇಷ ವಿಮಾನಯಾನ ಸೌಲಭ್ಯವನ್ನು ದೊರಕಲಿದ್ದು, ಇದಕ್ಕಾಗಿ ಒಟ್ಟು 6 ವಿಮಾನವನ್ನು ಮೀಸಲಿರಿಸಿದೆ.['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

ತಲೈವರ್ 'ಕಬಾಲಿ' ನೋಡಲು ಚೆನ್ನೈಗೆ ವಿಮಾನದಲ್ಲಿ ಹಾರಿ

ತಲೈವರ್ 'ಕಬಾಲಿ' ನೋಡಲು ಚೆನ್ನೈಗೆ ವಿಮಾನದಲ್ಲಿ ಹಾರಿ

-
-
-

ಅಲ್ಲದೇ ಏರ್ ಏಷ್ಯಾ ಏರ್ ಲೈನ್ ನವರು ತಮ್ಮ ಅಧೀಕೃತ ಫೇಸ್ ಬುಕ್ ಪೇಜ್ ನಲ್ಲಿ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಅದರಲ್ಲಿ ಭಾಗವಹಿಸಿ ಗೆದ್ದ 10 ಜನರಿಗೆ 'ಕಬಾಲಿ' ಫಸ್ಟ್ ಶೋ ನೋಡುವ ಅವಕಾಶ ದೊರೆಯಲಿದೆ.

ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನಟಿ ರಾಧಿಕಾ ಆಪ್ಟೆ ಅವರು ಸಾಥ್ ನೀಡಿದ್ದು, ನಿರ್ದೇಶಕ ಪ ರಂಜಿತ್ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಜುಲೈ 15 ಕ್ಕೆ ತೆರೆ ಕಾಣಬೇಕಿದ್ದ 'ಕಬಾಲಿ' ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗಿದ್ದು, ಜುಲೈ 22ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.[ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್]

ಇನ್ನು ಈ ವಿಶೇಷ 'ಕಬಾಲಿ' ವಿಮಾನಯಾನ ಮಾಡಲು ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಸಿ ಅಭಿಮಾನಿಗಳು ಸಿನಿಮಾ ನೋಡಲು ಚೆನ್ನೈಗೆ ವಿಮಾನದಲ್ಲಿ ಹಾರಬಹುದು.

ಅಬ್ಬಾ ಎಷ್ಟೊಂದು ಸಂಭ್ರಮಪಡುವ ವಿಚಾರ ಅಲ್ವಾ. ಯಾರೆಲ್ಲಾ ಇಲ್ಲಿತನಕ ವಿಮಾನದಲ್ಲಿ ಸಂಚರಿಸಲ್ಲವೋ ಅವರೀಗ ವಿಮಾನದಲ್ಲಿ ತಲೈವರ ಸಿನಿಮಾ ನೋಡಲು ಹೋಗಬಹುದು. ಅಭಿಮಾನಿಗಳೇ ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ.

English summary
For the first time in the history of world cinema, Air Asia is operating international special flights with Rajinikanth's Kabali images. Wow... It's really a pride for Tamil cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada