For Quick Alerts
  ALLOW NOTIFICATIONS  
  For Daily Alerts

  ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!

  By Harshitha
  |

  ಪಕ್ಕಾ ಮಾಸ್ ಗೂ ಸೈ, ಫುಲ್ ಕ್ಲಾಸ್ ಗೂ ಜೈ ಅಂದಿರುವ ಸ್ಯಾಂಡಲ್ ವುಡ್ ನ 'ಡಿ' ಬಾಸ್ ದರ್ಶನ್ ಈಗ 'ಚಕ್ರವರ್ತಿ' ಆಗಿರುವ ಬಗ್ಗೆ ನಾವು ನಿಮಗೆ ಸ್ಪೆಷಲ್ ಆಗಿ ಹೇಳಬೇಕಾಗಿಲ್ಲ.

  'ಬುಲ್ ಬುಲ್'ನ ಮಾತಾಡ್ಸಿ, 'ಬೃಂದಾವನ'ದ ಕೃಷ್ಣನಾಗಿ ಕೊಳಲು ಊದಿ, 'ಅಂಬರೀಶ'ನಂತೆ ರೆಬೆಲ್ ಆಗಿ, 'ಐರಾವತ' ಏರಿ 'ವಿರಾಟ್' ರೂಪ ತೋರಿಸಿದ ದರ್ಶನ್ 'ಜಗ್ಗು ದಾದಾ' ಆಗಿ ನಿಮ್ಮ ಮುಂದೆ ಬರುವ ಮುನ್ನ 'ಚಕ್ರವರ್ತಿ'ಯ ಚಕ್ರಾಧಿಪತ್ಯ ಹೇಗಿರಬಹುದು ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ?

  ನಿಮ್ಮಲ್ಲಿರುವ ಆ ಕುತೂಹಲಕ್ಕೆ ಬ್ರೇಕ್ ಹಾಗ್ಬೇಕು ಅಂತಲೇ 'ಚಕ್ರವರ್ತಿ' ಅಡ್ಡದಲ್ಲಿ ಒಂದು ವಿಸಿಟ್ ಹಾಕಿ, ದರ್ಶನ್ ದರ್ಬಾರ್ ಹೇಗೆ ನಡೀತಿದೆ ಅಂತ ನೋಡ್ಕೊಂಡು ಬಂದಿದ್ದೀವಿ. [ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ]

  ಕೆಲವೇ ದಿನಗಳ ಹಿಂದೆಯಷ್ಟೆ, 'ಚಕ್ರವರ್ತಿ' ಚಿತ್ರಕ್ಕಾಗಿ ದರ್ಶನ್ ರವರು ಒಂದು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದರು. ಉದ್ದ ಮೀಸೆ ಬಿಟ್ಟು, ತಲೆಕೂದಲಿಗೆ ಜೆಲ್ ಹಾಕಿ, ರೆಟ್ರೋ ಲುಕ್ ನಲ್ಲಿ 'ಚಕ್ರವರ್ತಿ' ದರ್ಶನ್ ಹೇಗೆ ಕಾಣ್ತಾರೆ ಅಂತ ನೋಡುವ ಕುತೂಹಲ ನಿಮ್ಗೆ ಇದ್ಯಾ? ಹಾಗಾದ್ರೆ, ಕೆಳಗಿರುವ ಫೋಟೋ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ ನೋಡಿ....

  'ಚಕ್ರವರ್ತಿ'....ಹೆಸರೇ ಹೇಳುವಂತೆ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಇದರಲ್ಲಿ ದರ್ಶನ್ 'ಚಕ್ರವರ್ತಿ'ಯಂತೆ ಮೆರೆಯಲಿದ್ದಾರೆ. ಅದಕ್ಕೆ 'ಚಕ್ರವರ್ತಿ' ಚಿತ್ರದ ಫೋಟೋಶೂಟ್ ಸಾಕ್ಷಿ.

  ದರ್ಶನ್ ಗೆಟಪ್ ನೋಡಿದ್ರೆ, 'ಚಕ್ರವರ್ತಿ' ಚಿತ್ರದಲ್ಲಿ 'ಡಾನ್' ಪಾತ್ರ ನಿರ್ವಹಿಸುತ್ತಿದ್ದಾರಾ? ಎಂಬ ಅನುಮಾನ ಮೂಡುವುದು ಸಹಜ. ಆದ್ರೆ, ಈ ಬಗ್ಗೆ ಚಿತ್ರತಂಡ ತುಟಿಕ್ ಪಿಟಿಕ್ ಅಂದಿಲ್ಲ. [ದರ್ಶನ್ 'ಚಕ್ರವರ್ತಿ' ನಿರ್ಮಾಪಕ ಹಠಾತ್ ಬದಲಾವಣೆ.! ಕಾರಣ ಇದೇನಾ?]

  'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಗೆ ಸವಾಲ್ ಹಾಕುವುದಕ್ಕೆ ಸಹೋದರ ದಿನಕರ್ ತೂಗುದೀಪ ಹಾಗೂ 'ಡೆಡ್ಲಿ' ಆದಿತ್ಯ ಇದ್ದಾರೆ. ಟಾಲಿವುಡ್ ನಟಿ ಅಂಜಲಿ ಚಿತ್ರದ ನಾಯಕಿ. ನಿರ್ದೇಶನ ಮಾಡುತ್ತಿರುವವರು ಚಿಂತನ್. [ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ]

  ಮೊನ್ನೆ ಸೋಮವಾರವಷ್ಟೇ (ಮೇ 23) 'ಚಕ್ರವರ್ತಿ' ಚಿತ್ರದ ಮುಹೂರ್ತ ಸಮಾರಂಭ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿದೆ.

  ಸದ್ಯದಲ್ಲೇ 'ಚಕ್ರವರ್ತಿ' ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

  English summary
  Kannada Actor Darshan has done special photoshoot for his upcoming movie 'Chakravarthi'. Check out the new get-up of Challenging Star here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X