For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ತಾರೆಗಳ ತೋಟದಲ್ಲಿ ಧ್ರುವ ಸರ್ಜಾ 'ಅದ್ಧೂರಿ' ಕಲ್ಯಾಣ

  |

  ಅಂತೂ ಬ್ಯಾಚುಲರ್ ಲೈಫ್ ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುಡ್ ಬೈ ಹೇಳಿದರು. ನವೆಂಬರ್ 24 ರಂದು ಭಾನುವಾರ ನಟ ಧ್ರುವ ಸರ್ಜಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಬಹುಕಾಲದ ಗೆಳತಿ ಪ್ರೇರಣಾ ಜೊತೆಗೆ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

  ನಿನ್ನೆ ಬೆಳಗ್ಗೆ 7.15 ರಿಂದ 7.45 ರವರೆಗೆ ಇದ್ದ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಹಸೆ ಮಣೆ ಏರಿದರು. 7.45 ರ ಸುಮಾರಿಗೆ ಪ್ರೇರಣಾ ಶಂಕರ್ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ ಮಾಡಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಯಿತು.

  ಧ್ರುವ ಸರ್ಜಾ ಮದುವೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ತಾರೆಯರು ಸಾಕ್ಷಿ ಆದರು. ತಾರೆಗಳ ತೋಟದಲ್ಲಿ ನಡೆದ ಧ್ರುವ ಸರ್ಜಾ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿರಿ...

  ಮೇಡ್ ಫಾರ್ ಈಚ್ ಅದರ್

  ಮೇಡ್ ಫಾರ್ ಈಚ್ ಅದರ್

  ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 15 ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶಾಲಾ ದಿನಗಳಿಂದಲೇ ಪ್ರೇರಣಾ ಮೇಲೆ ಧ್ರುವ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆದಿತ್ತು. ತಮ್ಮ ಪ್ರೇಮ ಕಹಾನಿಯನ್ನ ಕುಟುಂಬದವರಿಗೆ ತಿಳಿಸಿ, ಎಲ್ಲರ ಸಮ್ಮತಿ ಪಡೆದು ಧ್ರುವ ಸರ್ಜಾ-ಪ್ರೇರಣಾ ಮದುವೆ ಆಗಿದ್ದಾರೆ. ಈ ನವ ಜೋಡಿ ಮೇಡ್ ಫಾರ್ ಈಚ್ ಅದರ್ ಅಂತ ಅನಿಸದೇ ಇರಲ್ಲ.!

  ಗಟ್ಟಿಮೇಳ.. ಗಟ್ಟಿಮೇಳ.. ಪ್ರೇರಣಾ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆಗಟ್ಟಿಮೇಳ.. ಗಟ್ಟಿಮೇಳ.. ಪ್ರೇರಣಾ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ

  ಹ್ಯಾಪಿ ಮ್ಯಾರೀಡ್ ಲೈಫ್ ಧ್ರುವ-ಪ್ರೇರಣಾ

  ಹ್ಯಾಪಿ ಮ್ಯಾರೀಡ್ ಲೈಫ್ ಧ್ರುವ-ಪ್ರೇರಣಾ

  ನಿನ್ನೆ ಬೆಳಗ್ಗೆ ನಡೆದ ಮುಹೂರ್ತ ಸಮಾರಂಭದಲ್ಲಿ ಕ್ರೀಮ್ ಮತ್ತು ಕೇಸರಿ ಬಣ್ಣದ ರೇಶ್ಮೆ ಸೀರೆಯಲ್ಲಿ ವಧು ಪ್ರೇರಣಾ ಶಂಕರ್ ಮಿಂಚಿದರೆ, ವರ ಧ್ರುವ ಸರ್ಜಾ ಬಿಳಿ ಬಣ್ಣದ ರೇಶ್ಮೆ ಪಂಚೆ-ಶರ್ಟ್ ಧರಿಸಿದ್ದರು. ಸಾಂಪ್ರದಾಯಿಕವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

  ಧ್ರುವ ಕೈಯಲ್ಲಿ ಆಂಜನೇಯನ ಮೆಹಂದಿ: ಅರಿಶಿಣ ಶಾಸ್ತ್ರ ಸಂಭ್ರಮದಲ್ಲಿ 'ಪೊಗರು' ಹುಡುಗಧ್ರುವ ಕೈಯಲ್ಲಿ ಆಂಜನೇಯನ ಮೆಹಂದಿ: ಅರಿಶಿಣ ಶಾಸ್ತ್ರ ಸಂಭ್ರಮದಲ್ಲಿ 'ಪೊಗರು' ಹುಡುಗ

  ಕಾಶಿಯಾತ್ರೆ ಮುಗಿಸಿ ಬಂದ ಧ್ರುವ

  ಕಾಶಿಯಾತ್ರೆ ಮುಗಿಸಿ ಬಂದ ಧ್ರುವ

  ಗೌರಿ ಪೂಜೆ ಮಾಡಿ ಮದುವೆ ಮಂಟಪಕ್ಕೆ ಪ್ರೇರಣಾ ಶಂಕರ್ ಬಂದರೆ, ವರ ಪೂಜೆ ಮತ್ತು ಕಾಶಿಯಾತ್ರೆ ನೆರವೇರಿಸಿದ ಬಳಿಕ ಧ್ರುವ ಸರ್ಜಾ ಮದುವೆ ಮಂಟಪದಲ್ಲಿ ಹಾಜರ್ ಆದರು.

  ಮದುವೆ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಮದುವೆ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  ಕಾಲು ತೊಳೆದ ಪ್ರೇರಣಾ ತಂದೆ-ತಾಯಿ

  ಕಾಲು ತೊಳೆದ ಪ್ರೇರಣಾ ತಂದೆ-ತಾಯಿ

  ಧ್ರುವ ಸರ್ಜಾ ಕಾಲು ತೊಳೆದು ಸಾಂಪ್ರದಾಯಿಕವಾಗಿ ಕನ್ಯಾದಾನ ಮಾಡಿಕೊಟ್ಟರು ಪ್ರೇರಣಾ ಪೋಷಕರಾದ ಶಂಕರ್ ಮತ್ತು ಸರಿತಾ.

  ಧ್ರುವ ಸರ್ಜಾ ಮದುವೆ: ಅಭಿಮಾನಿಗಳಿಗಿದೆ ಒಂದು ಸೂಪರ್ ಸ್ಪೆಷಲ್ ನ್ಯೂಸ್.!ಧ್ರುವ ಸರ್ಜಾ ಮದುವೆ: ಅಭಿಮಾನಿಗಳಿಗಿದೆ ಒಂದು ಸೂಪರ್ ಸ್ಪೆಷಲ್ ನ್ಯೂಸ್.!

  ಸಂತಸ ಪಟ್ಟ ಅರ್ಜುನ್ ಸರ್ಜಾ ದಂಪತಿ

  ಸಂತಸ ಪಟ್ಟ ಅರ್ಜುನ್ ಸರ್ಜಾ ದಂಪತಿ

  ಧ್ರುವ ಸರ್ಜಾ-ಪ್ರೇರಣಾ ಶಂಕರ್ ಮದುವೆಯನ್ನ ಮುಂದೆ ನಿಂತು ನೆರವೇರಿಸಿಕೊಟ್ಟವರು ಅರ್ಜುನ್ ಸರ್ಜಾ ದಂಪತಿ. ನವ ಜೋಡಿಗೆ ಅರ್ಜುನ್ ಸರ್ಜಾ ದಂಪತಿ ಶುಭ ಹಾರೈಸಿ, ಆಶೀರ್ವಾದ ಮಾಡಿದರು.

  ಚಿರು-ಮೇಘನಾ ದಂಪತಿ

  ಚಿರು-ಮೇಘನಾ ದಂಪತಿ

  ಧ್ರುವ ಸರ್ಜಾ-ಪ್ರೇರಣಾ ಮದುವೆಯಲ್ಲಿ ಸಹೋದರ ಚಿರಂಜೀವಿ ಸರ್ಜಾ ಮತ್ತು ಪತ್ನಿ ಮೇಘನಾ ರಾಜ್ ಮಿಂಚಿದ್ದು ಹೀಗೆ.. ಕಳೆದ ವರ್ಷ ಕ್ರೈಸ್ತ ಮತ್ತು ಹಿಂದು ಸಂಪ್ರದಾಯದಂತೆ ಚಿರಂಜೀವಿ ಸರ್ಜಾ-ಮೇಘನಾ ವಿವಾಹ ಮಹೋತ್ಸವ ನಡೆದಿತ್ತು.

  ಶುಭ ಕೋರಿದ ಪವರ್ ಸ್ಟಾರ್ ದಂಪತಿ

  ಶುಭ ಕೋರಿದ ಪವರ್ ಸ್ಟಾರ್ ದಂಪತಿ

  ಧ್ರುವ ಸರ್ಜಾ-ಪ್ರೇರಣಾ ಮದುವೆಗೆ ಆಗಮಿಸಿ, ನವ ವಧು-ವರರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಶುಭ ಕೋರಿದರು.

  ವಿಶ್ ಮಾಡಿದ ಸುದೀಪ್

  ವಿಶ್ ಮಾಡಿದ ಸುದೀಪ್

  ಆಕ್ಷನ್ ಪ್ರಿನ್ಸ್ ವಿವಾಹ ಮಹೋತ್ಸವಕ್ಕೆ ಕಿಚ್ಚ ಸುದೀಪ್ ಕೂಡ ಸಾಕ್ಷಿ ಆದರು. ನವ ದಂಪತಿಗಳಿಗೆ ಅಭಿನಯ ಚಕ್ರವರ್ತಿ ಸುದೀಪ್ ಶುಭಾಶಯ ತಿಳಿಸಿದರು.

  ಆಶೀರ್ವಾದ ಮಾಡಿದ ಸುಂದರ್ ರಾಜ್ ದಂಪತಿ

  ಆಶೀರ್ವಾದ ಮಾಡಿದ ಸುಂದರ್ ರಾಜ್ ದಂಪತಿ

  ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಜೋಡಿಗೆ ಸುಂದರ್ ರಾಜ್ ದಂಪತಿ ಆಶೀರ್ವಾದ ಮಾಡಿದರು. ಅಂದ್ಹಾಗೆ, ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ.. ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಮಾವ-ಅತ್ತೆ.

  ಖುಷಿ ಪಟ್ಟ ರಾಜೇಶ್

  ಖುಷಿ ಪಟ್ಟ ರಾಜೇಶ್

  ಧ್ರುವ ಸರ್ಜಾ-ಪ್ರೇರಣಾ ಶಂಕರ್ ಮದುವೆಗೆ ಹಿರಿಯ ನಟ ರಾಜೇಶ್ ಕೂಡ ಆಗಮಿಸಿದ್ದರು. ನೂತನ ಜೋಡಿಗೆ ರಾಜೇಶ್ ಆಶೀರ್ವದಿಸಿದರು. ಅಂದ್ಹಾಗೆ, ರಾಜೇಶ್.. ಅರ್ಜುನ್ ಸರ್ಜಾ ಮಾವ.

  ಹಾಜರ್ ಆದ ಹ್ಯಾಟ್ರಿಕ್ ಹೀರೋ

  ಹಾಜರ್ ಆದ ಹ್ಯಾಟ್ರಿಕ್ ಹೀರೋ

  ಧ್ರುವ ಸರ್ಜಾ-ಪ್ರೇರಣಾ ವಿವಾಹ ಮಹೋತ್ಸವಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಆಗಮಿಸಿ ವಿಶ್ ಮಾಡಿದರು.

  ಶುಭಾಶಯ ತಿಳಿಸಿದ ರಾಘವೇಂದ್ರ ರಾಜ್ ಕುಮಾರ್

  ಶುಭಾಶಯ ತಿಳಿಸಿದ ರಾಘವೇಂದ್ರ ರಾಜ್ ಕುಮಾರ್

  ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಮದುವೆಗೆ ಆಗಮಿಸಿದ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುತ್ರ ವಿನಯ್ ರಾಜ್ ಕುಮಾರ್ ಶುಭಾಶಯ ತಿಳಿಸಿದರು.

  ಅಕ್ಷತೆ ಹಾಕಿದ ರವಿಶಂಕರ್

  ಅಕ್ಷತೆ ಹಾಕಿದ ರವಿಶಂಕರ್

  ನವ ದಂಪತಿಗಳಾದ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಗೆ ರವಿಶಂಕರ್ ಅಕ್ಷತೆ ಹಾಕಿ ಆಶೀರ್ವಾದ ಮಾಡಿದರು.

  ರಿಯಲ್ ಸ್ಟಾರ್ ದಂಪತಿ

  ರಿಯಲ್ ಸ್ಟಾರ್ ದಂಪತಿ

  ನಿನ್ನೆ ಬೆಳಗ್ಗೆ ಮುಹೂರ್ತ ಸಮಾರಂಭ ನಡೆದರೆ, ಸಂಜೆ ಆರತಕ್ಷತೆ ನೆರವೇರಿತು. ರಿಸೆಪ್ಷನ್ ನಲ್ಲಿ ಭಾಗವಹಿಸಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಗೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಶುಭ ಕೋರಿದರು.

  ವಿಶ್ ಮಾಡಿದ ಯಶ್

  ವಿಶ್ ಮಾಡಿದ ಯಶ್

  ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ಷೆನ್ಷನ್ ಹಾಲ್ ನಲ್ಲಿ ನಡೆದ ಧ್ರುವ ಸರ್ಜಾ-ಪ್ರೇರಣಾ ಶಂಕರ್ ರಿಸೆಪ್ಷನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಕಾಣಿಸಿಕೊಂಡರು.

  English summary
  Kannada Actor Dhruva Sarja got married to Prerna Shankar on November 24th. Have a look at Dhruva Sarja's wedding photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X