»   » ಚಿತ್ರಗಳು; ಪ್ರಜ್ವಲ್ ದೇವರಾಜ್-ರಾಗಿಣಿ ಆರತಕ್ಷತೆಯಲ್ಲಿ ಗಣ್ಯರ ದಂಡು

ಚಿತ್ರಗಳು; ಪ್ರಜ್ವಲ್ ದೇವರಾಜ್-ರಾಗಿಣಿ ಆರತಕ್ಷತೆಯಲ್ಲಿ ಗಣ್ಯರ ದಂಡು

Posted By:
Subscribe to Filmibeat Kannada

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮಾಡೆಲ್ ಕಮ್ ಡ್ಯಾನ್ಸರ್ ರಾಗಿಣಿ ಚಂದ್ರನ್ ವಿವಾಹ ನಿನ್ನೆ ಅದ್ದೂರಿಯಾಗಿ ನೆರವೇರಿದೆ.

ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಮದುವೆ ನಡೆಯಿತು. ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್-ರಾಗಿಣಿ ಹಸೆಮಣೆ ಏರಿದರು.

ಬಳಿಕ ಸಂಜೆ 7 ಗಂಟೆ ನಂತರ ವಿವಾಹ ಆರತಕ್ಷತೆ ಕಾರ್ಯಕ್ರಮ ಜರುಗಿತು. ರಿಸೆಪ್ಷನ್ ನಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರು, ರಾಜಕಾರಣಿಗಳು ಭಾಗವಹಿಸಿ ನವ ವಧುವರರಿಗೆ ಶುಭ ಹಾರೈಸಿದರು. [ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಮದುವೆ ಫೋಟೋ ಆಲ್ಬಂ]

ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ವೆಡ್ಡಿಂಗ್ ರಿಸೆಪ್ಷನ್ ಆಲ್ಬಂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ....ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.......

ಕಂಗೊಳಿಸಿದ ನವ ಜೋಡಿ

ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಕಂಗೊಳಿಸಿದ್ದು ಹೀಗೆ....[ಹ್ಯಾಪಿ ಮ್ಯಾರೀಡ್ ಲೈಫ್ ಪ್ರಜ್ವಲ್ ದೇವರಾಜ್-ರಾಗಿಣಿ]

ಹಾಲು-ಜೇನು ಒಂದಾದ ಹಾಗೆ....

ಕೆಂಪು ಬಣ್ಣದ ಗಾಘ್ರಾದಲ್ಲಿ ವಧು ರಾಗಿಣಿ ಚಂದ್ರನ್ ಕಂಗೊಳಿಸಿದರೆ, ಕಪ್ಪು ಬಣ್ಣದ ಶೇರ್ವಾಣಿ ತೊಟ್ಟು ಪ್ರಜ್ವಲ್ ದೇವರಾಜ್ ಮಿಂಚಿದರು. [ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ]

ನಮ್ಮ ಸಂಸಾರ ಅನಂದ ಸಾಗರ

ನವ ಜೋಡಿಯೊಂದಿಗೆ ಡೈನಾಮಿಕ್ ಸ್ಟಾರ್ ದೇವರಾಜ್ ಮತ್ತು ಪತ್ನಿ ಚಂದ್ರ ದೇವರಾಜ್. [ಮಗ ಪ್ರಜ್ವಲ್ ಮದುವೆಗೆ ಅಪ್ಪನ 'ಅದ್ದೂರಿ' ಉಡುಗೊರೆ]

ಶುಭ ಹಾರೈಸಿದ ಬರಗೂರು ರಾಮಚಂದ್ರಪ್ಪ

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಗೆ ಬರಗೂರು ರಾಮಚಂದ್ರಪ್ಪ ಶುಭ ಹಾರೈಸಿದರು.

ವಿಶ್ ಮಾಡಿದ ನಟಿ ಸುಧಾರಾಣಿ

ನಟಿ ಸುಧಾರಾಣಿ ತಮ್ಮ ಪುತ್ರಿಯೊಂದಿಗೆ ಆಗಮಿಸಿ, ನವ ಜೋಡಿಗೆ ಶುಭ ಕೋರಿದರು.

ಹಿರಿಯ ನಟಿ ಜಯಂತಿ

ಹಿರಿಯ ನಟಿ ಜಯಂತಿ ಕೂಡ ಪ್ರಜ್ವಲ್ ದೇವರಾಜ್ ಆರತಕ್ಷತೆಗೆ ಆಗಮಿಸಿ ನವ ವಧುವರರಿಗೆ ಆಶೀರ್ವಾದ ಮಾಡಿದರು.

ಆರತಕ್ಷತೆಯಲ್ಲಿ ಅವಿನಾಶ್ ದಂಪತಿ

ದೇವರಾಜ್ ಕುಟುಂಬಕ್ಕೆ ಆಪ್ತರಾಗಿರುವ ಅವಿನಾಶ್ ಮತ್ತು ಮಾಳವಿಕಾ ಕೂಡ ಆರತಕ್ಷತೆಯಲ್ಲಿ ಭಾಗವಹಿಸಿದರು.

ನಿರ್ದೇಶಕ ಎಂ.ಎಸ್.ರಮೇಶ್

ಕನ್ನಡದ ಖ್ಯಾತ ನಿರ್ದೇಶಕ, ಸಂಭಾಷಣೆಕಾರ ಎಂ.ಎಸ್.ರಮೇಶ್ ಕೂಡ ಆಗಮಿಸಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಗೆ ಶುಭ ಕೋರಿದರು.

ನಿರ್ದೇಶಕ ಸಾಯಿ ಪ್ರಕಾಶ್

ಖ್ಯಾತ ನಿರ್ದೇಶಕ ಸಾಯಿ ಪ್ರಕಾಶ್ ಕೂಡ ಹೊಸ ಜೋಡಿಗೆ ಶುಭ ಹಾರೈಸಿದರು.

ಶ್ರೀಧರ್ ಕುಟುಂಬ

ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಆರತಕ್ಷತೆಯಲ್ಲಿ ನಟ ಶ್ರೀಧರ್ ಕುಟುಂಬ.

ಸಚಿವೆ ಉಮಾಶ್ರೀ

ನಟಿ ಹಾಗು ಸಚಿವೆ ಉಮಾಶ್ರೀ ಪ್ರಜ್ವಲ್ ದೇವರಾಜ್ ಗೆ ಶುಭ ಕೋರಿದ್ದು ಹೀಗೆ...

ಎಸ್.ಎ.ಗೋವಿಂದರಾಜು ಕುಟುಂಬ

ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಆರತಕ್ಷತೆಯಲ್ಲಿ ಡಾ.ರಾಜ್ ಕುಮಾರ್ ಪುತ್ರಿ ಲಕ್ಷ್ಮಿ, ನಿರ್ಮಾಪಕ ಎಸ್.ಎ.ಗೋವಿಂದರಾಜು ಕುಟುಂಬ.

ಆರ್.ಆಶೋಕ್

ಬಿಜೆಪಿ ನಾಯಕ ಆರ್.ಆಶೋಕ್ ಕೂಡ ರಿಸೆಪ್ಷನ್ ಗೆ ಆಗಮಿಸಿ ವಧು-ವರರಿಗೆ ಶುಭ ಕೋರಿದರು.

ನಟ ಶಿವರಾಮ್

ನವ ಜೋಡಿಯೊಂದಿಗೆ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್.

ನಿರ್ಮಾಪಕ ಮುನಿರತ್ನ

ದೇವರಾಜ್ ಕುಟುಂಬದ ಜೊತೆ ನಿರ್ಮಾಪಕ ಮುನಿರತ್ನ.

ರಾಗಿಣಿ ಚಂದ್ರನ್ ಕುಟುಂಬ

ಆರತಕ್ಷತೆಯಲ್ಲಿ ರಾಗಿಣಿ ಚಂದ್ರನ್ ಕುಟುಂಬದ ಸದಸ್ಯರು.

ನವ ಜೋಡಿಗೆ ನೀವೂ ಶುಭ ಹಾರೈಸಿ

ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ ಚಂದ್ರನ್ ಗೆ ನೀವೂ ಶುಭಹಾರೈಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ವಿಶಸ್ ತಿಳಿಸಿ.....

English summary
Kannada Actor Prajwal Devaraj has tied knot with his long-time girlfriend Ragini Chandran yesterday (October 25th) in Palace Grounds, Bengaluru. Check out the wedding reception album of this cute couple

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada