For Quick Alerts
  ALLOW NOTIFICATIONS  
  For Daily Alerts

  ಮೇಕಪ್ ಮ್ಯಾಜಿಕ್: ಈ 'ನಟಿ' ಯಾರು ಅಂತ ಹೇಳಿ ನೋಡೋಣ.?

  By Harshitha
  |

  ಜೂನ್ 5, ಸೋಮವಾರ... ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

  ಗುಂಡು ಮುಖ.. ಹಣೆ ಮೇಲೆ ಕೆಂಪು ಬಣ್ಣದ ದೊಡ್ಡ ಬೊಟ್ಟು.. ಕಣ್ಣಿಗೆ ಕಾಡಿಗೆ ತೊಟ್ಟು ಕೆಂಪು ತುಟಿಗಳನ್ನು ತಿರುಗಿಸುತ್ತಿರುವ ಈ ನಟಿಮಣಿ ಯಾರು ಅಂತ ಹೇಳಿ ನೋಡೋಣ...

  ಈಕೆಯನ್ನ ಎಲ್ಲೋ ನೋಡಿದ ಹಾಗಿದೆಯಲ್ಲ... ಅಂತ ಗಲ್ಲದ ಮೇಲೆ ಬೆರಳಿಟ್ಟು ನೀವು ಯೋಚಿಸುತ್ತಿದ್ದರೆ... ಒಮ್ಮೆ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ರಮೇಶ್ ಅರವಿಂದ್ ಅಭಿನಯದ 'ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ' ಚಿತ್ರವನ್ನ ನೆನಪಿಸಿಕೊಳ್ಳಿ...

  ಈ ಚಿತ್ರದ ಹಾಡೊಂದರಲ್ಲಿ 'ನಟಿಮಣಿ'ಯ ಹಾಗೆ ಸಿಂಗಾರ ಮಾಡಿಕೊಂಡು ನಟ ರಮೇಶ್ ಅರವಿಂದ್ ಸೊಂಟ ಬಳುಕಿಸಿದ್ದು ನಿಮಗೆ ನೆನಪಾಯ್ತಾ..? ಅವರೇ ತಾನೆ ಈ ಫೋಟೋದಲ್ಲಿ ಇರುವುದು..?

  ಯಾವುದೇ ಪಾತ್ರ ಕೊಟ್ಟರೂ, ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುವ ನಟ ರಮೇಶ್ ಅರವಿಂದ್ ಬೆಳ್ಳಿತೆರೆ ಮೇಲೆ ವಿವಿಧ ಗೆಟಪ್ ಗಳಲ್ಲಿ ಮಿಂಚಿದ್ದಾರೆ. 'ಮೇಕಪ್ ಕ್ಯಾನ್ ಡು ವಂಡರ್ಸ್' ಎನ್ನುವ ಹಾಗೆ 'ಮೇಕಪ್' ಮೂಲಕ ನಟ ರಮೇಶ್ ತಾಳಿರುವ ತರಹೇವಾರಿ ಅವತಾರಗಳನ್ನ ಒಮ್ಮೆ ನೋಡಿ...

  'ಮ್ಯಾಜಿಕ್ ಆಫ್ ಮೇಕಪ್' ಎಂದು ಟೈಟಲ್ ಕೊಟ್ಟು ತಮ್ಮ ವಿವಿಧ ಅವತಾರಗಳನ್ನ ಸ್ವತಃ ನಟ ರಮೇಶ್ ಅರವಿಂದ್ ರವರೇ ಟ್ವೀಟ್ ಮಾಡಿದ್ದಾರೆ.

  ಮೇಕಪ್ ಮಾತು ಹಾಗಿರಲಿ, ಅಂದಿನಿಂದ ಇಂದಿನವರೆಗೂ ನಟ ರಮೇಶ್ ಅರವಿಂದ್ ಹಾಗೇ ಇದ್ದಾರೆ ಅನಿಸಲ್ವಾ.? ಅವರಿಗೆ ವಯಸ್ಸೇ ಆಗಲ್ವಾ.? ಎಂಬ ಅನುಮಾನ ಕಾಡದೇ ಇರಲ್ಲ.!

  English summary
  Kannada Actor Ramesh Aravind has taken his twitter account to share his magic of make up photos. Take a look at the photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X