For Quick Alerts
  ALLOW NOTIFICATIONS  
  For Daily Alerts

  ಮೊಮ್ಮಗಳ ನಾಮಕರಣದ ಸಂಭ್ರಮದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್

  By Suneetha
  |

  ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಡೈಲಾಗ್ ಕಿಂಗ್ ಅಂತಾನೇ ಖ್ಯಾತಿ ಗಳಿಸಿರುವ ನಟ ಸಾಯಿಕುಮಾರ್ ಅವರು ಬಹಳ ಖುಷಿಯಲ್ಲಿದ್ದಾರೆ. 'ರಂಗಿತರಂಗ' ಚಿತ್ರದಲ್ಲಿ ಕಾಳಿಂಗ ಭಟ್ಟರಾಗಿ ಎಲ್ಲರ ಮೆಚ್ಚುಗೆ ಗಳಿಸಿದ ಸಾಯಿ ಕುಮಾರ್ ಅವರು ಇದೀಗ ಅಜ್ಜ ಆದ ಸಂಭ್ರಮದಲ್ಲಿದ್ದಾರೆ.

  ಹೌದು 'ಡೈಲಾಗ್ ಕಿಂಗ್' ಸಾಯಿಕುಮಾರ್ ಅವರ ಮಗ ತೆಲುಗು ನಟ ಆದಿ ಸಾಯಿಕುಮಾರ್ ಅವರಿಗೆ ಹೆಣ್ಣು ಮಗುವಾಗಿದ್ದು, ಇತ್ತೀಚೆಗೆ ಮಗುವಿನ ನಾಮಕರಣ ಕಾರ್ಯಕ್ರಮ ಸಾಯಿಕುಮಾರ್ ಅವರ ಮನೆಯಲ್ಲಿಯೇ ಬಹಳ ಸಂಭ್ರಮದಿಂದ ನೆರವೇರಿತ್ತು.[ಮೂರು ಬಾರಿ ಯಮಲೋಕದ ಕದ ತಟ್ಟಿದ್ದ ನಟ ಸಾಯಿಕುಮಾರ್!]

  ನಟ ಸಾಯಿ ಕುಮಾರ್ ಅವರು ತಮ್ಮ ಮುದ್ದಾದ ಮೊಮ್ಮಗಳಿಗೆ ಅಯಾನಾ ಎಂದು ನಾಮಕರಣ ಮಾಡಿದ್ದಾರೆ. ಸಾಯಿಕುಮಾರ್ ಅವರ ಪುತ್ರ ಆದಿ ಅವರ ಪತ್ನಿ ಅರುಣಾ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

  'ಪ್ರೇಮ ಕಾವಾಲಿ' ಚಿತ್ರದ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಕುಮಾರ್ ಅವರ ಮಗ ನಟ ಆದಿ ಮೊದಲ ಚಿತ್ರದಲ್ಲಿಯೇ ಫಿಲ್ಮ್ ಫೇರ್ ಪ್ರಶಸ್ತಿ ಗಿಟ್ಟಿಸಿಕೊಂಡರು. ತದನಂತರ ನಟಿ ಶಾನ್ವಿ ಶ್ರೀವಾತ್ಸವ ಅವರ ಜೊತೆ 'ಲವ್ಲಿ' ಚಿತ್ರದಲ್ಲಿ ಮಿಂಚಿದ್ದರು.[ರಾಕಿಂಗ್ ಸ್ಟಾರ್ ಅಪ್ಪನಾಗಿ ಡೈಲಾಗ್ ಕಿಂಗ್ ಕಾಣಿಸಿಕೊಳ್ತಾರಾ?]

  ನಟ ಸಾಯಿಕುಮಾರ್ ಅವರು 'ರಂಗಿತರಂಗ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಪಟಾಕಿ' ಚಿತ್ರದಲ್ಲಿ ಮತ್ತೆ ಪೊಲೀಸ್ ಖದರ್ ತೋರಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಸಾಯಿ ಕುಮಾರ್ ಅವರು 'ವೀಕೆಂಡ್ ವಿತ್ ರಮೇಶ್' [ಅಮಿತಾಬ್, ರಜನಿ, ಸಿಲ್ವೆಸ್ಟರ್..ಎಲ್ಲರಿಗೂ 'ಇವರೇ' ಬೇಕು! ಯಾರದು?] ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಮನದಾಳವನ್ನು ಹಂಚಿಕೊಂಡಿದ್ದರು. ಮಗುವಿನ ನಾಮಕರಣದ ಸಂಭ್ರಮದ ಚಿತ್ರಗಳನ್ನು ನೋಡಿ ಸ್ಲೈಡುಗಳಲ್ಲಿ...

  ಆದಿ ಮತ್ತು ಅರುಣಾ ದಂಪತಿ

  ಆದಿ ಮತ್ತು ಅರುಣಾ ದಂಪತಿ

  ಮಗನ ಚಿತ್ರಕ್ಕೆ ಅಪ್ಪನ ಕ್ಲಾಪ್

  ಆದಿ ಮತ್ತು ಅರುಣಾ ಅವರ ಮದುವೆ ಫೋಟೋ

  ತೆಲುಗು ನಟ ಆದಿ ಸಾಯಿ ಕುಮಾರ್

  ಸಾಯಿ ಕುಮಾರ್ ಅವರ ಮೊಮ್ಮಗಳು ಪುಟ್ಟ ಅಯಾನಾ

  ಸಾಯಿ ಕುಮಾರ್ ಅವರ ಮೊಮ್ಮಗಳು ಪುಟ್ಟ ಅಯಾನಾ ನಾಮಕರಣ

  ಸಾಯಿ ಕುಮಾರ್ ಅವರ ಮೊಮ್ಮಗಳು ಪುಟ್ಟ ಅಯಾನಾ

  ಮುದ್ದು ಮಗಳ ಜೊತೆ ಆದಿ ಸಾಯಿ ಕುಮಾರ್ ದಂಪತಿಗಳು

  ಪುಟ್ಟ ಮಗಳು ಅಯಾನಾ ಜೊತೆ ಆದಿ ಸೆಲ್ಫಿ

  -ಮುದ್ದು ಮಗಳ ಜೊತೆ ಆದಿ ಸಾಯಿ ಕುಮಾರ್ ದಂಪತಿಗಳು

  English summary
  Kannada actor Saikumar as the traditional ceremony of naming a new born baby boy is going to be celebrated. Saikumar Son Actor Adi's wife has given birth to a baby boy recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X