ಮೈಸೂರು ಅರಮನೆ ಮುಂದೆ 'ಮಾಯಾವಿ' ಸಂಚಾರಿ ವಿಜಯ್

ಅದು ಜಗತ್ಪ್ರಸಿದ್ದ ಮೈಸೂರು ಅರಮನೆಯ ಮುಂಭಾಗ... ಅಲ್ಲಿ ಯಕ್ಷಗಾನ ವೇಷ ಧರಿಸಿದ ವ್ಯಕ್ತಿಯೊಬ್ಬ ಮೂಟೆಗಳನ್ನು ಹೊತ್ತುಕೊಂಡು ತಿರುಗಾಡುತ್ತಿದ್ದದ್ದು ಮೈಸೂರಿಗರಿಗೆ ಅಚ್ಚರಿ ತಂತು.

ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಾಗಿದ್ದು.. ಆ ಯಕ್ಷಗಾನ ವೇಷ ಧರಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ನಟ ಸಂಚಾರಿ ವಿಜಯ್ ಅಂತ.!

ಅಷ್ಟಕ್ಕೂ, ಸಂಚಾರಿ ವಿಜಯ್ ಹೀಗೆ ಯಕ್ಷಗಾನ ವೇಷ ತೊಟ್ಟು ಮೈಸೂರಿನ ಅರಮನೆ ಮುಂಭಾಗ ಸರ್ಕಸ್ ಮಾಡಲು ಕಾರಣ 'ಮೇಲೊಬ್ಬ ಮಾಯಾವಿ' ಚಿತ್ರದ ಚಿತ್ರೀಕರಣ.

ಬಿ.ನವೀನ್ ಕೃಷ್ಣ ಅವರ ಕಥೆ-ನಿರ್ದೇಶನ ಇರುವ 'ಮೇಲೊಬ್ಬ ಮಾಯಾವಿ' ಪೋಸ್ಟರ್ ಮಾತ್ರದಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದೆ. ಇದೀಗ ಈ ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಮುಂದೆ ಓದಿರಿ...

ಮೈಸೂರಿನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ

ಮೈಸೂರಿನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ

ಯಕ್ಷಗಾನ ವೇಷದಲ್ಲಿರುವ ಸಂಚಾರಿ ವಿಜಯ್ ಅವರ ಕ್ಲೈಮ್ಯಾಕ್ಸ್ ದೃಶ್ಯದ ಪ್ಯಾಚಪ್ ಚಿತ್ರೀಕರಣ ಮೈಸೂರಿನಲ್ಲಿ ನಡೆಯಿತು. ಇದಕ್ಕಾಗಿ ಮೈಸೂರು ಅರಮನೆ ಮುಂಭಾಗದಲ್ಲಿ ಅರ್ಧಂಬರ್ಧ ಯಕ್ಷಗಾನ ಗೆಟಪ್ ನಲ್ಲಿ ಕಾಣಿಸಿಕೊಂಡು, ಮೂಟೆಗಳನ್ನ ಹೊತ್ತುಕೊಂಡು ಓಡಾಡುತ್ತಿದ್ದರು ನಟ ಸಂಚಾರಿ ವಿಜಯ್.

ನೂರಕ್ಕೂ ಹೆಚ್ಚು ಕಲಾವಿದರು

ನೂರಕ್ಕೂ ಹೆಚ್ಚು ಕಲಾವಿದರು

ಈ ಒಂದು ದೃಶ್ಯದ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡದಲ್ಲಿ ಸುಮಾರು ನೂರಕ್ಕಿಂತೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ವಿಶೇಷ.

ಸಂಚಾರಿ ವಿಜಯ್ ಏನಂತಾರೆ.?

ಸಂಚಾರಿ ವಿಜಯ್ ಏನಂತಾರೆ.?

''ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇರುವೆ. ಈ ಇರುವೆಗೆ ಯಕ್ಷಗಾನ ವೇಷ ಹಾಕಬೇಕೆಂಬ ಮಹದಾಸೆ. ಆದರೆ, ಯಕ್ಷಗಾನ ಮೇಷ್ಟ್ರು ಇರುವೆಗೆ ಹುಟ್ಟಿನಿಂದಲೇ ಬಂದ ನ್ಯೂನತೆಯೊಂದರ ಕಾರಣಕ್ಕಾಗಿ ಆತನನ್ನು ಯಕ್ಷಗಾನ ಮೇಳಕ್ಕೆ ಸೇರಿಸಿಕೊಳ್ಳುವುದಿಲ್ಲ. ಮುಂದೆ ಇರುವೆ ಹೇಗೆ ಅದೇ ಯಕ್ಷಗಾನದ ಮೂಲಕ ಏನು ಮಾಡುತ್ತಾನೆ ಅನ್ನೋದೇ ಚಿತ್ರದ ಇಂಟ್ರೆಸ್ಟಿಂಗ್ ಪಾಯಿಂಟ್'' ಅಂತಾರೆ ನಟ ಸಂಚಾರಿ ವಿಜಯ್.

ಕರಾವಳಿಯ ಮಾಫಿಯಾ

ಕರಾವಳಿಯ ಮಾಫಿಯಾ

ಕರಾವಳಿಯ ಮಾಫಿಯವೊಂದನ್ನು ಅಲ್ಲಿಯದೇ ಕಲೆಯ ಮೂಲಕ ಹೇಳಲು ಹೊರಟಿರುವ ನಿರ್ದೇಶಕ ಬಿ.ನವೀನ್ ಕೃಷ್ಣ ಅವರ ತಯಾರಿ ಮೆಚ್ಚುವಂಥದ್ದು.

More from Filmibeat

English summary
Kannada Actor Sanchari Vijay shoots for Kannada Movie 'Mellobba Mayavi'. Have a look at the pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X