ಸುದೀಪ್, ಗಣೇಶ್, ಜಗ್ಗೇಶ್ ಗೂ 'ಯಶ್-ರಾಧಿಕಾ' ಮದುವೆಯ ಕರೆಯೋಲೆ!

By Bharath Kumar

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ದಿನಾಂಕ ಹತ್ತಿರವಾಗುತ್ತಿದ್ಹಾಗೆ, ಮದುವೆಯ ಕೆಲಸಗಳು ಮತ್ತಷ್ಟು ವೇಗವಾಗಿ ನಡೆಯುತ್ತಿವೆ. ಕಳೆದ ವಾರದಿಂದ ಸ್ಯಾಂಡಲ್ ವುಡ್ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡುತ್ತಿರುವ ನಟ ಯಶ್, ಈಗ ಮತ್ತೆ ಕೆಲವು ಗಣ್ಯರಿಗೆ, ಸ್ಟಾರ್ ನಟರಿಗೆ ಇನ್ವಿಟೇಷನ್ ಕೊಟ್ಟಿದ್ದಾರೆ.

ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಹಲವರಿಗೆ ಆಹ್ವಾನ ಪತ್ರಿಕೆ ನೀಡಿದ್ದ ಯಶ್, ಈಗ ಸುದೀಪ್, ಗಣೇಶ್, ರಕ್ಷಿತ್ ಶೆಟ್ಟಿ, ಜಗ್ಗೇಶ್ ಸೇರಿದಂತೆ ಹಲವು ಕಲಾವಿದರಿಗೆ ಮದುವೆಯ ಕರೆಯೋಲೆ ನೀಡಿದ್ದಾರೆ.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

(ಚಿತ್ರಕೃಪೆ: ಯಶ್ ಫ್ಯಾನ್ಸ್ ಕ್ಲಬ್,)

ಕಿಚ್ಚ ಸುದೀಪ್ ಗೆ ಆಹ್ವಾನ

ಕಿಚ್ಚ ಸುದೀಪ್ ಗೆ ಆಹ್ವಾನ

ಸಾಮಾಜಿಕ ಜಾಲತಾಣಗಳಲ್ಲಿ, ಕಿಚ್ಚ ಸುದೀಪ್ ಹಾಗೂ ಯಶ್ ಅವರ ಮಧ್ಯೆ ಮನಸ್ತಾಪವಿದೆ ಎಂಬುದು ದಿನನಿತ್ಯ ಚರ್ಚೆಯಾಗುತ್ತಿರುತ್ತೆ. ಆದ್ರೆ, ಸುದೀಪ್ ಹಾಗೂ ಯಶ್ ಇಬ್ಬರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಯಶ್ ಮದುವೆಗೆ, ಸುದೀಪ್ ಅವರನ್ನ ಆಮಂತ್ರಿಸಿರುವುದು. ಹೌದು, ಕಿಚ್ಚನ ಮನೆಗೆ ಹೋಗಿ, ತಮ್ಮ ಮದುವೆಗೆ ಬರುವಂತೆ ಕರೆಯೋಲೆ ನೀಡಿದ್ದಾರೆ ರಾಕಿಂಗ್ ಸ್ಟಾರ್

ಗೋಲ್ಡನ್ ಸ್ಟಾರ್ ಕುಟುಂಬಕ್ಕೆ ಆಮಂತ್ರಣ

ಗೋಲ್ಡನ್ ಸ್ಟಾರ್ ಕುಟುಂಬಕ್ಕೆ ಆಮಂತ್ರಣ

ತಮ್ಮ ಮದುವೆಗೆ ಬಂದು ಹಾರೈಸುವಂತೆ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ಅವರಿಗೆ ನಟ ಯಶ್ ಆಹ್ವಾನಿಸಿದ್ದಾರೆ.['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್ ]

ಜಗ್ಗೇಶ್ ಕುಟುಂಬಕ್ಕೆ ಕರೆಯೋಲೆ

ಜಗ್ಗೇಶ್ ಕುಟುಂಬಕ್ಕೆ ಕರೆಯೋಲೆ

ನವರಸ ನಾಯಕ ಜಗ್ಗೇಶ್ ಅವರನ್ನ ಪ್ರೀತಿಯಿಂದ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ ನಟ ಯಶ್. ಜಗ್ಗೇಶ್ ಮನೆಗೆ ಹೋಗಿದ್ದ ಯಶ್ ಅವರಿಗೆ, ಒಳ್ಳೆಯದಾಗಲಿ ಎಂದು ದೇವರ ಬಳಿ ಪ್ರಾರ್ಥಿಸಿದ್ದಾರೆ.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?]

ಮಾಲಾಶ್ರೀ ದಂಪತಿಗೆ ಆಮಂತ್ರಣ ನೀಡಿದ ಯಶ್

ಮಾಲಾಶ್ರೀ ದಂಪತಿಗೆ ಆಮಂತ್ರಣ ನೀಡಿದ ಯಶ್

ಆಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ದಂಪತಿಗೆ, ನಟ ಯಶ್ ತಮ್ಮ ಮದುವೆಯ ಆಹ್ವಾನ ನೀಡಿದ್ದಾರೆ.[ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]

ರಕ್ಷಿತ್ ಶೆಟ್ಟಿಗೆ ಆಹ್ವಾನ ನೀಡಿದ ಯಶ್

ರಕ್ಷಿತ್ ಶೆಟ್ಟಿಗೆ ಆಹ್ವಾನ ನೀಡಿದ ಯಶ್

ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರಿಗೆ, ರಾಕಿಂಗ್ ಸ್ಟಾರ್ ಯಶ್ ಪರ್ಸನಲ್ ಆಗಿ ತಮ್ಮ ಮದುವೆಗೆ ಇನ್ವೈಟ್ ಮಾಡಿದ್ದಾರೆ.

ದಿನಕರ್ ತೂಗುದೀಪ ಕುಟುಂಬಕ್ಕೆ ಆಹ್ವಾನ

ದಿನಕರ್ ತೂಗುದೀಪ ಕುಟುಂಬಕ್ಕೆ ಆಹ್ವಾನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ಆಹ್ವಾನ ಪತ್ರಿಕೆ ನೀಡಿದ್ದಾರೆ.

ನೆನಪಿರಲಿ ಪ್ರೇಮ್ ಕುಂಟುಂಬಕ್ಕೆ ಆಮಂತ್ರಣ

ನೆನಪಿರಲಿ ಪ್ರೇಮ್ ಕುಂಟುಂಬಕ್ಕೆ ಆಮಂತ್ರಣ

ನೆನಪಿರಲಿ ಪ್ರೇಮ್ ಕುಂಟುಂಬಕ್ಕೆ ತಮ್ಮ ಮದುವೆಗೆ ಬಂದು ತಮ್ಮನ್ನ ಅರಸಿ ಎಂದು ನಟ ಯಶ್ ಆಮಂತ್ರಿಸಿದ್ದಾರೆ.

ಜೋಗಿ ಪ್ರೇಮ್ ಫ್ಯಾಮಿಲಿಗೆ ಕರೆಯೋಲೆ

ಜೋಗಿ ಪ್ರೇಮ್ ಫ್ಯಾಮಿಲಿಗೆ ಕರೆಯೋಲೆ

ನಿರ್ದೇಶಕ ಜೋಗಿ ಪ್ರೇಮ್ ಹಾಗೂ ರಕ್ಷಿತಾ ದಂಪತಿಗೆ, ಯಶ್ ಮದುವೆಯೆ ಕರೆಯೋಲೆ ನೀಡಿದ್ದಾರೆ.

ಶ್ರೀಮುರುಳಿ ಕುಟುಂಬಕ್ಕೆ ಆಹ್ವಾನ

ಶ್ರೀಮುರುಳಿ ಕುಟುಂಬಕ್ಕೆ ಆಹ್ವಾನ

ರೋರಿಂಗ್ ಸ್ಟಾರ್ ಶ್ರೀಮುರುಳಿ ಕುಟುಂಬಕ್ಕೆ, ಯಶ್ ಮದುವೆಯ ಆಹ್ವಾನ ಪತ್ರಿಕೆ ನೀಡಿ, ತಮ್ಮ ಮದುವೆಗೆ ಬರುವಂತೆ ಆಮಂತ್ರಿಸಿದ್ದಾರೆ.

ರಂಗಾಯಣ ರಘು ಕುಟುಂಬಕ್ಕೆ ಸ್ವಾಗತ

ರಂಗಾಯಣ ರಘು ಕುಟುಂಬಕ್ಕೆ ಸ್ವಾಗತ

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಅದ್ದೂರಿ ಮದುವೆಯ ಕಾರ್ಯಕ್ರಮಕ್ಕೆ ಹಾಸ್ಯ ನಟ ರಂಗಾಯಣ ರಘು ಅವರನ್ನ ಆಹ್ವಾನಿಸಲಾಗಿದೆ.

ಹಂಸಲೇಖ ಅವರಿಗೆ ಆಹ್ವಾನ

ಹಂಸಲೇಖ ಅವರಿಗೆ ಆಹ್ವಾನ

ಸಂಗೀತ ಲೋಕದ ದಿಗ್ಗಜ, ನಾದ ಬ್ರಹ್ಮ ಹಂಸಲೇಖ ಅವರಿಗೆ ಯಶ್ ತಮ್ಮ ಮದುವೆಯೆ ಆಮಂತ್ರಣ ನೀಡಿ, ಸ್ವಾಗತಿಸಿದ್ದಾರೆ.

ಹಿರಿಯ ನಿರ್ದೇಶಕ, ಸಾಹಿತಿಗಳಿಗೂ ಆಹ್ವಾನ

ಹಿರಿಯ ನಿರ್ದೇಶಕ, ಸಾಹಿತಿಗಳಿಗೂ ಆಹ್ವಾನ

ಯಶ್-ರಾಧಿಕಾ ಮದುವೆಗೆ, ಹಿರಿಯ ನಿರ್ದೇಶಕ ದೊರೆ ಭಗವಾನ್, ಸಾಹಿತಿ ಬರುಗೂರು ರಾಮಚಂದ್ರಪ್ಪ. ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಹಾಗೂ ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ಅವರನ್ನ ಕೂಡ ಆಹ್ವಾನ ಮಾಡಿದ್ದಾರೆ.

ಮದುವೆ ಯಾವಾಗ, ಎಲ್ಲಿ?

ಮದುವೆ ಯಾವಾಗ, ಎಲ್ಲಿ?

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಡಿಸೆಂಬರ್ 10 ಹಾಗೂ 11 ರಂದು ನಡೆಯಲಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಡಿಸೆಂಬರ್ 11 ರಂದು ಸಂಜೆ 7 ಗಂಟೆಯಿಂದ ಆರತಕ್ಷತೆ ನಡೆಯಲಿದೆ.[ಯಶ್-ರಾಧಿಕಾ ಮದುವೆ: ಹುಡುಗಿ ಕಡೆಯ 'ಆಹ್ವಾನ ಪತ್ರಿಕೆ' ರೆಡಿ]

More from Filmibeat

English summary
Rocking Star Yash inviting to all Sandalwood Stars for his marriage with Kannada Actress Radhika Pandit. The wedding is scheduled on December 10th and 11th at Tripura Vasini, Bengaluru Palace Ground.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X