ಚಿತ್ರಗಳು: ಅಮೂಲ್ಯ ಪತಿ ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್.!
ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮೊಗದಲ್ಲಿ ಸಡಗರ ತುಂಬಿ ತುಳುಕುತ್ತಿತ್ತು. ಅದಕ್ಕೆ ಕಾರಣ, ಪತಿ ಜಗದೀಶ್ ಜನ್ಮದಿನದ ಸಂಭ್ರಮ.
ಹೌದು, ನಟಿ ಅಮೂಲ್ಯ ಪತಿ ಜಗದೀಶ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪತಿ ಜಗದೀಶ್ ಗೆ ಅಮೂಲ್ಯ ಸರ್ಪ್ರೈಸ್ ಬರ್ತಡೇ ಪಾರ್ಟಿ ಕೊಟ್ಟು ಸೆಲೆಬ್ರೇಷನ್ ನ ಡಬಲ್ ಮಾಡಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ 'ಸೀಕ್ರೆಟ್ ಆಫ್ ಬ್ಯಾಂಗಲೋರ್'ನಲ್ಲಿ ಜಗದೀಶ್ ಬರ್ತಡೇ ಪಾರ್ಟಿ ಗ್ರ್ಯಾಂಡ್ ಆಗಿ ನಡೆದಿದೆ. ಈ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಪಾಲ್ಗೊಂಡು ಜಗದೀಶ್ ಗೆ ವಿಶ್ ಮಾಡಿದ್ದಾರೆ.

ಜಗದೀಶ್ ಬರ್ತಡೇ ಪಾರ್ಟಿ
ಉದ್ಯಮಿ ಜಗದೀಶ್ ಬರ್ತಡೇ ಪಾರ್ಟಿ ಗ್ರ್ಯಾಂಡ್ ಆಗಿ ನೆರವೇರಿದೆ. ಜನ್ಮದಿನದಂದು ಕೇಕ್ ಕಟ್ ಮಾಡಿ ಜಗದೀಶ್ ಸಂಭ್ರಮಿಸಿದ್ದಾರೆ. ಪತಿ ಜಗದೀಶ್ ಜೊತೆಗೆ ಅಮೂಲ್ಯ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ಸ್ ಭಾಗಿ
ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ಕುಟುಂಬಸ್ಥರು ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಪ್ರಿಯಾಂಕಾ ಉಪೇಂದ್ರ ಪಾಲ್ಗೊಂಡು ಜಗದೀಶ್ ಗೆ ಶುಭಾಶಯ ತಿಳಿಸಿದ್ದಾರೆ.

ಉಡುಗೊರೆ ನೀಡಿದ ಪ್ರಿಯಾಂಕಾ ಉಪೇಂದ್ರ
ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಪಾಲ್ಗೊಂಡಿದ್ದರು. ಬರ್ತಡೇ ಬಾಯ್ ಜಗದೀಶ್ ಗೆ ಪ್ರಿಯಾಂಕಾ ಉಪೇಂದ್ರ ಉಡುಗೊರೆ ನೀಡಿದ್ದಾರೆ.

ಶೆಟ್ರ ಬಳಗ ಭಾಗಿ
ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ನಟ, ನಿರ್ದೇಶಕ ರಿಶಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಕೂಡ ಭಾಗವಹಿಸಿದ್ದರು.

ಫ್ರೆಂಡ್ಸ್ ಗ್ಯಾಂಗ್
ನಿಮಗೆಲ್ಲ ಗೊತ್ತಿರುವ ಹಾಗೆ ಶಿಲ್ಪಾ ಗಣೇಶ್ ಮತ್ತು ಅಮೂಲ್ಯ ನಡುವೆ ಆತ್ಮೀಯ ಒಡನಾಟ ಇದೆ. ಜೊತೆಗೆ ಕಾರುಣ್ಯ ರಾಮ್, ಹರ್ಷಿಕಾ ಪೂಣಚ್ಚ ಮತ್ತು ಪ್ರಗತಿ ಶೆಟ್ಟಿ ಕೂಡ ಶಿಲ್ಪಾ ಗಣೇಶ್ ಮತ್ತು ಅಮೂಲ್ಯ ಫ್ರೆಂಡ್ಸ್ ಸರ್ಕಲ್ ನಲ್ಲಿದ್ದಾರೆ.

ಭುವನ್ ಪೊನ್ನಣ್ಣ ಕೂಡ ಪ್ರತ್ಯಕ್ಷ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಜಗದೀಶ್ ಗೆ ಭುವನ್ ಪೊನ್ನಣ್ಣ ಕಾಮನ್ ಫ್ರೆಂಡ್. ಹೀಗಾಗಿ, ಭುವನ್ ಪೊನ್ನಣ್ಣ ಕೂಡ ಜಗದೀಶ್ ಬರ್ತಡೇ ಪಾರ್ಟಿಗೆ ಹಾಜರ್ ಆಗಿದ್ದರು.

ಗ್ರೂಪ್ ಸೆಲ್ಫಿ
ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ಎಂಜಾಯ್ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ಸ್ ಕ್ಲಿಕ್ ಮಾಡಿಕೊಂಡಿರುವ ಗ್ರೂಪ್ ಸೆಲ್ಫಿ ಇದು.

2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಮೂಲ್ಯ-ಜಗದೀಶ್
2017 ರ ಮೇ ತಿಂಗಳಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಧಾಂ ಧೂಂ ಆಗಿ ನಡೆದ ಇವರಿಬ್ಬರ ಮದುವೆಗೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸಾಕ್ಷಿ ಆಗಿದ್ದರು. ಮದುವೆ ಆದ ಬಳಿಕ ಸಿನಿಮಾಗಳಿಗಾಗಿ ನಟಿ ಅಮೂಲ್ಯ ಬಣ್ಣ ಹಚ್ಚಿಲ್ಲ.


Click it and Unblock the Notifications











