For Quick Alerts
  ALLOW NOTIFICATIONS  
  For Daily Alerts

  ಕಪಿಲ್ ಶರ್ಮ ಶೋನಲ್ಲಿ ಮಸ್ತ್ ಮಜಾ ಮಾಡಿದ ಕಿಚ್ಚ ಸುದೀಪ್.!

  |

  ಕನ್ನಡ ಸಿನಿಮಾಗಳು ಮತ್ತು ಕನ್ನಡ ಚಿತ್ರ ನಟರು ಇದೀಗ ಕರ್ನಾಟಕ ಗಡಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡದ 'ಕೆ.ಜಿ.ಎಫ್' ಸಿನಿಮಾ ಇಡೀ ಭಾರತದಾದ್ಯಂತ ಸದ್ದು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

  ಇನ್ನೂ ಕನ್ನಡ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ. ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಅಷ್ಟೇ ಜನಪ್ರಿಯ.

  ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್ ಇದೀಗ ಹಿಂದಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ 'ಕಪಿಲ್ ಶರ್ಮ ಶೋ'ನಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಭಾಗವಹಿಸಿದ್ದಾರೆ. ಮುಂದೆ ಓದಿರಿ...

  'ಕಪಿಲ್ ಶರ್ಮ ಶೋ'ನಲ್ಲಿ ಕಿಚ್ಚ ಸುದೀಪ್

  'ಕಪಿಲ್ ಶರ್ಮ ಶೋ'ನಲ್ಲಿ ಕಿಚ್ಚ ಸುದೀಪ್

  ಕಾಮಿಡಿ ಕಿಂಗ್ ಕಪಿಲ್ ಶರ್ಮ ಶೋನಲ್ಲಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

  'ಸುದೀಪ್ 23ರ ಯುವಕನಂತೆ ಕಾಣ್ತಾರೆ' ಎಂದ ಸ್ಟಾರ್ ನಿರ್ದೇಶಕ

  ಕಿಚ್ಚ ಸುದೀಪ್ ಟ್ವೀಟ್

  ಕಿಚ್ಚ ಸುದೀಪ್ ಟ್ವೀಟ್

  ಕಪಿಲ್ ಶರ್ಮ ಶೋ ನಲ್ಲಿ ಭಾಗವಹಿಸಿ ಸಂತಸಗೊಂಡ ಕಿಚ್ಚ ಸುದೀಪ್ ತಮ್ಮ ಹರ್ಷವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದೆ. ನಕ್ಕು ನಕ್ಕು ಸಾಕಾಯ್ತು. ಈ ರೀತಿ ನಗುವ ಅವಕಾಶ ನನಗೆ ಸಿಕ್ಕಿದ್ದೇ ಅಪರೂಪ. ಇಂಥ ಅವಕಾಶ ಕಲ್ಪಿಸಿಕೊಟ್ಟವರಿಗೆ ಧನ್ಯವಾದಗಳು. ಥ್ಯಾಂಕ್ಯೂ ಕಪಿಲ್ ಶರ್ಮ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  'ವಿಲನ್' ಚಿತ್ರತಂಡದ ಮೇಲೆ ಸುದೀಪ್ ಮುನಿಸಿಕೊಳ್ಳಲು ಕಾರಣ ಇದೇ.!

  ಮೊದಲ ಸ್ಯಾಂಡಲ್ ವುಡ್ ನಟ

  ಮೊದಲ ಸ್ಯಾಂಡಲ್ ವುಡ್ ನಟ

  ಇಂಟ್ರೆಸ್ಟಿಂಗ್ ಏನಪ್ಪ ಅಂದ್ರೆ ಕಪಿಲ್ ಶರ್ಮ ಶೋನಲ್ಲಿ ಭಾಗವಹಿಸಿರುವ ಮೊಟ್ಟಮೊದಲ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್. ಕಪಿಲ್ ಶರ್ಮ ಶೋ ಮೂಲಕ ಹಿಂದಿ ಕಿರುತೆರೆಯ ವೀಕ್ಷಕರಿಗೂ ಸುದೀಪ್ ಆಪ್ತವಾಗಲಿದ್ದಾರೆ.

  ಚಿತ್ರರಂಗದಲ್ಲಿ ಸುದೀಪ್ ಗೆ 23 ವರ್ಷ : ಪತ್ನಿ ಕಡೆಯಿಂದ ಪ್ರೀತಿಯ ಶುಭಾಶಯ

  ಪೈಲ್ವಾನ್ ಪ್ರಮೋಷನ್.?

  ಪೈಲ್ವಾನ್ ಪ್ರಮೋಷನ್.?

  ಅಂದ್ಹಾಗೆ, ಕಪಿಲ್ ಶರ್ಮ ಶೋ ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿರುವುದು 'ಪೈಲ್ವಾನ್' ಚಿತ್ರದ ಪ್ರಮೋಶನ್ ಗೋ ಅಥವಾ ಸಿಸಿಎಲ್ ಗೋ ಎಂಬ ಕ್ಲಾರಿಟಿ ಸಿಕ್ಕಿಲ್ಲ. ಸಂಚಿಕೆ ಪ್ರಸಾರ ಆಗುವವರೆಗೂ ಕಾಯಬೇಕು.

  ಪ್ರಸಾರ ಯಾವಾಗ.?

  ಪ್ರಸಾರ ಯಾವಾಗ.?

  ಹಿಂದಿಯ ಸೋನಿ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಕಪಿಲ್ ಶರ್ಮ ಶೋ ಪ್ರಸಾರವಾಗಲಿದೆ. ನಿನ್ನೆಯಷ್ಟೇ ಸುದೀಪ್ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣಗೊಂಡಿರುವುದರಿಂದ, ಆ ಸಂಚಿಕೆ ಯಾವಾಗ ಪ್ರಸಾರ ಆಗುತ್ತೆ ಅನ್ನೋದನ್ನು ಕನ್ಫರ್ಮ್ ಆಗಿಲ್ಲ.

  English summary
  Kannada Actor Kiccha Sudeep graces The Kapil Sharma Show. Have a look at the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X