»   » ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗೀಶ್-ಸಾಹಿತ್ಯ

ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗೀಶ್-ಸಾಹಿತ್ಯ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸುಗ್ಗಿ ಶುರುವಾಗಿದೆ. ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಿಶ್ಚಿತಾರ್ಥದ ಬಳಿಕ ಈಗ ನಟ ಲೂಸ್ ಮಾದ ಯೋಗಿ ಮದುವೆ ಸಂಭ್ರಮ ಜೋರಾಗಿದೆ.

ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲೂಸ್ ಮಾದ ಯೋಗಿ-ಸಾಹಿತ್ಯ

ಇಂದು ನಟ ಯೋಗೀಶ್ ಮತ್ತು ಸಾಹಿತ್ಯ ವಿವಾಹ ಮಹೋತ್ಸವ ನಡೆದಿದೆ. ತಮ್ಮ ಆಸೆಯಂತೆ ಪ್ರೀತಿಸಿದ ಹುಡುಗಿಯನ್ನೇ ಯೋಗಿ ಕೈ ಹಿಡಿದಿದ್ದಾರೆ. ಕೋಣನಕುಂಟೆಯಲ್ಲಿರುವ ಶ್ರೀ ಕನ್ವೆನ್ಷನ್​ ಹಾಲ್​ನಲ್ಲಿ ಇಂದು (ಗುರುವಾರ) ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನೆರವೇರಿದೆ. ಅಂದಹಾಗೆ, ಯೋಗಿ-ಸಾಹಿತ್ಯ ಕಲ್ಯಾಣ ಮಹೋತ್ಸವದ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ಯೋಗಿ ವೆಡ್ಸ್ ಸಾಹಿತ್ಯ

ನಟ ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಕೈ ಹಿಡಿದಿದ್ದಾರೆ. ತಮ್ಮ ಎರಡು ವರ್ಷದ ಪ್ರೀತಿಯ ಬಳಿಕ ಇದೀಗ ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ.

ಸಂಪ್ರದಾಯಬದ್ಧವಾಗಿ ಮದುವೆ

ಯೋಗಿ- ಸಾಹಿತ್ಯ ವಿವಾಹ ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.

ಎರಡು ಕುಟುಂಬ ಭಾಗಿ

ವಿವಾಹ ಕಾರ್ಯಕ್ರಮದಲ್ಲಿ ವರ ಮತ್ತು ವಧು ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

ಮಾಂಗಲ್ಯ ಧಾರಣೆ

ಇಂದು (ಗುರುವಾರ) ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನೆರವೇರಿತು.

ಸಾಂಪ್ರದಾಯಿಕ ಉಡುಗೆ

ಮದುಮಗ ಯೋಗಿ ಪಂಚೆಯುಟ್ಟು ಮದುಮಗಳು ಸಾಹಿತ್ಯ ಗೋಲ್ಡನ್ ಬಣ್ಣದ ಸೀರೆ ತೊಟ್ಟು ಮಿಂಚಿದರು.

ಗೆಳತಿ ಸಾಹಿತ್ಯ ಜೊತೆ ಹಸೆಮಣೆ ಏರಿದ ನಟ ಲೂಸ್ ಮಾದ ಯೋಗೀಶ್

ಶಿವಣ್ಣ ಹಾಜರಿ

ವಿವಾಹ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಹಾಜರಾಗಿ ನೂತನ ಜೋಡಿಗೆ ಶುಭ ಕೋರಿದರು.

English summary
Check out pictures : Kannada Actor Lose mada yogesh got married to sahitya today (November 2) in konanakunte.
Please Wait while comments are loading...