ಚಿತ್ರಗಳು : ಬಿ.ಎಂ.ಟಿ.ಸಿ ಬಸ್ ನಲ್ಲಿ ಲೂಸ್ ಮಾದನ ಹೊಸ 'ದುನಿಯಾ'
ಒಂಬತ್ತು ವರ್ಷಗಳು ಉರುಳಿವೆ. ಆದರೂ, 'ದುನಿಯಾ' ಸಿನಿಮಾ ಈಗಲೂ ಸಿನಿ ಪ್ರಿಯರ ಕಣ್ಣಿಗೆ ಕಟ್ಟಿದಂತಿದೆ. ಕಾರಣ, 'ದುನಿಯಾ' ಚಿತ್ರದ 'ರಾ' ಪ್ರೆಸೆಂಟೇಷನ್.
ಅಲ್ಲಿಯವರೆಗೂ ಯಾರೂ ಮಾಡದ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿ ಸೂರಿ ಯಶಸ್ವಿ ಆದರು. ಇದರಿಂದಲೇ ಸೂರಿ, ವಿಜಯ್, ರಶ್ಮಿ ಸ್ಯಾಂಡಲ್ ವುಡ್ ನಲ್ಲಿ ದುನಿಯಾ ಸೂರಿ, ದುನಿಯಾ ವಿಜಯ್, ದುನಿಯಾ ರಶ್ಮಿ ಅಂತ ಹೆಸರುವಾಸಿ.
ಅದೇ 'ದುನಿಯಾ' ಚಿತ್ರದಲ್ಲಿ 'ಲೂಸ್ ಮಾದ' ಪಾತ್ರ ನಿರ್ವಹಿಸಿದ್ದ ಯೋಗೀಶ್ ಕೂಡ ಗಾಂಧಿನಗರದಲ್ಲಿ ಲೂಸ್ ಮಾದ ಯೋಗಿ ಅಂತಲೇ ಫೇಮಸ್. ['ದುನಿಯಾ-2' ಚಿತ್ರದಲ್ಲಿ ಇರಲಿದ್ದಾರೆ ಲೂಸ್ ಮಾದ ಯೋಗಿ.!]
ಹೊಸಬರ ದುನಿಯಾ ಬದಲಿಸಿದ 'ದುನಿಯಾ' ಚಿತ್ರ ಸ್ಯಾಂಡಲ್ ವುಡ್ ನಲ್ಲೀಗ ಮತ್ತೆ ಸುದ್ದಿ ಮಾಡಲು ಕಾರಣ 'ದುನಿಯಾ-2'. ಮುಂದೆ ಓದಿ.....

ಬರಲಿದೆ ಎರಡನೇ ದುನಿಯಾ...
ಸದ್ದಿಲ್ಲದೇ 'ದುನಿಯಾ-2' ಚಿತ್ರದ ಪ್ರೀ-ಪ್ರೊಡಕ್ಷನ್ ಕಾರ್ಯ ಮುಗಿದಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು 'ದುನಿಯಾ-2' ಚಿತ್ರದ ಮುಹೂರ್ತ ಸಮಾರಂಭ ವಸಂತಪುರದ ವಸಂತವಲ್ಲಭರಾಯಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.

ಅಲ್ಲಿ ವಿಲನ್, ಇಲ್ಲಿ ಹೀರೋ.!
'ದುನಿಯಾ' ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿದ್ದ ಲೂಸ್ ಮಾದ ಯೋಗಿ, 'ದುನಿಯಾ-2' ಚಿತ್ರದ ಹೀರೋ.

ಹಿತಾ ಚಂದ್ರಶೇಖರ್ ನಾಯಕಿ
ಯೋಗಿ ಜೊತೆ 'ದುನಿಯಾ-2' ಚಿತ್ರದಲ್ಲಿ ಮಿಂಚಲಿರುವ ಬೆಡಗಿ ಹಿತಾ ಚಂದ್ರಶೇಖರ್

ಬಿ.ಎಂ.ಟಿ.ಸಿ ಬಸ್ ನಲ್ಲಿ ಹೊಸ ದುನಿಯಾ
'ದುನಿಯಾ' ಚಿತ್ರದಲ್ಲಿ ನಾಯಕ ವಿಜಯ್ ಹಾಗೂ ನಾಯಕಿ ರಶ್ಮಿಗೆ ಸೂರಿ ಸೂರು ಕಲ್ಪಿಸಿದ್ದು ಬಸ್ ವೊಂದರಲ್ಲಿ.! ಹಾಗೆ, 'ದುನಿಯಾ-2' ಅಡ್ಡದಿಂದ ಬಂದಿರುವ ಫೋಟೋಗಳನ್ನು ನೋಡಿದ್ರೆ, ಇದರಲ್ಲಿ ಬಿ.ಎಂ.ಟಿ.ಸಿ ಬಸ್ ಗಳು ಪ್ರಮುಖ ಪಾತ್ರ ವಹಿಸುವುದರಲ್ಲಿ ಅನುಮಾನ ಇಲ್ಲ.

ಇದು ಕೆ.ಆರ್.ಮಾರ್ಕೆಟ್ ದುನಿಯಾ.!
'ದುನಿಯಾ-2' ಚಿತ್ರದ ಇಡೀ ಕಥೆ ನಡೆಯುವುದು ಕತ್ತಲಲ್ಲಿ, ಅದು ಕೆ.ಆರ್.ಮಾರ್ಕೆಟ್ ನಲ್ಲಿ.!

ಹೊಸ ನಿರ್ದೇಶಕ
ಸುನಿ ಬಳಿ ಸಹಾಯಕ ನಿರ್ದೇಶಕರಾಗಿದ್ದ ಹರಿ ಇದೀಗ 'ದುನಿಯಾ-2' ಚಿತ್ರದ ಮೂಲಕ ಡೈರೆಕ್ಟರ್ ಆಗಿದ್ದಾರೆ.

ಮುಂದುವರಿದ ಭಾಗ ಅಲ್ಲ.!
'ದುನಿಯಾ-2' ಅಂತ ಟೈಟಲ್ ಇಟ್ಟ ಮಾತ್ರಕ್ಕೆ ಇದು 'ದುನಿಯಾ' ಚಿತ್ರದ ಮುಂದುವರಿದ ಭಾಗ ಅಲ್ಲ. ಇದೇ ಬೇರೆ ಕಥೆ. ಸ್ವತಃ ಕಥೆ ಬರೆದಿರುವವರು ನಿರ್ದೇಶಕ ಹರಿ.

ಯೋಗಿ ತಾಯಿ ನಟಿಸಲಿದ್ದಾರೆ.
'ದುನಿಯಾ-2' ಚಿತ್ರದಲ್ಲಿ ಯೋಗಿ ತಾಯಿ ಅಂಬುಜಾ ತೆರೆಮೇಲೂ ಯೋಗಿ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ.


Click it and Unblock the Notifications











