»   » ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!

ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!

Posted By:
Subscribe to Filmibeat Kannada

ಜೀವಮಾನದಲ್ಲಿ ಎಷ್ಟೋ ಹಾರರ್ ಸಿನಿಮಾಗಳನ್ನ ನೋಡಿರ್ಬಹುದು. ಆದ್ರೆ, 2013ರಲ್ಲಿ ತೆರೆಕಂಡ ಕನ್ನಡ ಚಿತ್ರ '6-5=2' ನೋಡೋಕೆ ಮಾತ್ರ ಗಟ್ಟಿ ಗುಂಡಿಗೆ ಖಂಡಿತ ಬೇಕಾಗಿತ್ತು.!

2010 ರಲ್ಲಿ ನಡೆದ ನೈಜ ಘಟನೆ ಆಧಾರಿಸಿದ ಚಿತ್ರ '6-5=2', ಅಕ್ಷರಶಃ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಹುಟ್ಟಿಹಾಕ್ತು. ಯಾವುದೇ ಸ್ಟಾರ್ ಗಳಲ್ಲಿದ್ದ ಈ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡ್ತು. ಇದೀಗ ಇದೇ ಚಿತ್ರತಂಡದಿಂದ ಮತ್ತೊಂದು ಹಾರರ್ ಸಿನಿಮಾ ಸಿದ್ಧವಾಗುತ್ತಿದೆ. ಅದೇ 'ಕರ್ವ'. ['6-5=2' ವಿಮರ್ಶೆ: ಮೀಟರ್ ಇರುವವರಿಗೆ ಮಾತ್ರ]

in-pics-making-stills-of-kannada-movie-karva

'6-5=2' ಸಿನಿಮಾ ನೋಡಿ ಶಿಳ್ಳೆ ಹೊಡೆದ 'ಮೀಟರ್ ಇರುವ' ಪ್ರೇಕ್ಷಕರಿಗಾಗಿ 'ಕರ್ವ' ತಯಾರಾಗುತ್ತಿದೆ. ಈಗಾಗಲೇ 'ಕರ್ವ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತಿಲಕ್, ಆರ್.ಜೆ. ರೋಹಿತ್, ಅನಿಶಾ ಅಂಬ್ರೋಸ್ 'ಕರ್ವ' ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

'ಕರ್ವ' ಚಿತ್ರಕ್ಕೆ ನವನೀತ್ ಆಕ್ಷನ್ ಕಟ್ ಹೇಳುತ್ತಿದ್ದರೆ, ಕೃಷ್ಣ ಚೈತನ್ಯ ಬಂಡವಾಳ ಹಾಕುತ್ತಿದ್ದಾರೆ. [ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು]

'ಕರ್ವ' ಚಿತ್ರದ ಕಥಾಹಂದರದ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದ್ರೆ, ಈಗಷ್ಟೇ ರಿಲೀಸ್ ಆಗಿರುವ 'ಕರ್ವ' ಚಿತ್ರದ ಮೇಕಿಂಗ್ ಸ್ಟಿಲ್ ಗಳು ಮಾತ್ರ ಚಿತ್ರ ಅದ್ಧೂರಿಯಾಗಿ ತಯಾರಾಗುತ್ತಿದೆ ಅನ್ನೋದಕ್ಕೆ ಸಾಕ್ಷಿ.

-
-
-
-
-
English summary
'Karva', Another horror-thriller film from the makers of 6-5=2. The movie is directed by Navneeth and Produced by Krishna Chaithanya. Check out the making stills here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada