»   » ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!

ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!

Posted By:
Subscribe to Filmibeat Kannada

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.

ಅರಮನೆ ನಗರಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ 'ಜಾಗ್ವಾರ್' ಶೂಟಿಂಗ್ ಕಳೆದ ತಿಂಗಳಿನಿಂದ ನಡೆಯುತ್ತಿತ್ತು. ಮಧ್ಯದಲ್ಲಿ ನಿಖಿಲ್ ಕುಮಾರ್ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರುವ ಕಾರಣ ಶೂಟಿಂಗ್ ಗೆ ಬ್ರೇಕ್ ನೀಡಲಾಗಿತ್ತು. [ಸ್ಯಾಂಡಲ್ ವುಡ್ ನ ಭರವಸೆಯ 'ಸ್ಟಾರ್' ನಿಖಿಲ್ ಕುಮಾರ್!]


ಮನರಂಜನೆಯ ಎಲ್ಲಾ ಸರಕು ಇರುವ 'ಜಾಗ್ವಾರ್' 100% ಎಂಟರ್ಟೇನಿಂಗ್ ಸಿನಿಮಾ ಅಂತಲೇ ಹೇಳಲಾಗಿದೆ. ಹದಿಹರೆಯದ ಹುಡುಗೀಯರ ಹೃದಯಕ್ಕೆ ಬಾಣ ಬಿಡುವ ಹಾಗೆ ಸಿನಿಮಾದಲ್ಲಿ ಸೂಪರ್ ಸ್ಟೈಲಿಶ್ ಆಗಿ ನಿಖಿಲ್ ಕುಮಾರ್ ಕಾಣಿಸಿಕೊಂಡಿದ್ದಾರೆ. ['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']


ನಿಖಿಲ್ ಲುಕ್ ಹೇಗಿರಬಹುದು ಅಂತ ಈಗಾಗಲೇ ಚಿತ್ರದ ಫೋಟೋಶೂಟ್ ನಲ್ಲಿ ನೀವೆಲ್ಲಾ ನೋಡಿದ್ದೀರಾ. ಇದೀಗ ನಿಮ್ಮ ಮುಂದೆ 'ಜಾಗ್ವಾರ್' ಚಿತ್ರದ ಎಕ್ಸ್ ಕ್ಯೂಸಿವ್ ಫೋಟೋಗಳನ್ನ ಇಡ್ತಿದ್ದೀವಿ ನೋಡಿ, ಕೆಳಗಿರುವ ಸ್ಲೈಡ್ ಗಳಲ್ಲಿ.....


ನಿಖಿಲ್ ಕುಮಾರ್ ಯಾರಿಗೇನು ಕಮ್ಮಿ?

ಟಾಪ್ ಟು ಬಾಟಂ ಫಿಟ್ ಆಗಿ ಕಾಣುವ ನಿಖಿಲ್ ಕುಮಾರ್, 'ಜಾಗ್ವಾರ್' ಚಿತ್ರದಲ್ಲಿ ಕಾಲೇಜು ಹುಡುಗನ ಗೆಟಪ್ ನಲ್ಲಿ ಕ್ಯಾಮರಾ ಕಂಗಳಲ್ಲಿ ಕಾಣಿಸಿಕೊಂಡಿರುವುದು ಹೀಗೆ.....


ಸ್ಟೈಲಿಶ್ ಲುಕ್ ನಲ್ಲಿ ಮಿಂಚಿಂಗ್!

ನಿಖಿಲ್ ಕುಮಾರ್ ಹೀರೋ ಮೆಟೀರಿಯಲ್ ಅನ್ನೋದಕ್ಕೆ ಈ ಫೋಟೋಗಳಿಗಿಂತ ಹೆಚ್ಚಿನ ಉದಾಹರಣೆ ಬೇಕಾ? [ಚಿತ್ರಗಳು ; ನಿಖಿಲ್ ಗ್ರ್ಯಾಂಡ್ ಎಂಟ್ರಿಗೆ ಸಾಕ್ಷಿಯಾದ ಗಣ್ಯರು]


ಹಾಲಿವುಡ್ ಸ್ಟಂಟ್ ಮಾಸ್ಟರ್ ನಿಂದ ತರಬೇತಿ

ಹಾಲಿವುಡ್ ಸ್ಟಂಟ್ ಮಾಸ್ಟರ್ ಸಿರಿಲ್ ರಫೇಲ್ ರವರ ಮಾರ್ಗದರ್ಶನದಲ್ಲಿ ನಿಖಿಲ್ ಕುಮಾರ್ ರೆಡಿಯಾಗಿರುವುದು ಹೀಗೆ....


ಏನೇನು ತರಬೇತಿ ಪಡೆದಿದ್ದಾರೆ?

ಮಾರ್ಷಲ್ ಆರ್ಟ್ಸ್, ಸ್ಟಂಟ್ಸ್, ಕಿಕ್ ಬಾಕ್ಸಿಂಗ್ ಮತ್ತು ಡ್ಯಾನ್ಸ್ ನಲ್ಲಿ ನಿಖಿಲ್ ಕುಮಾರ್ ತರಬೇತಿ ಪಡೆದಿದ್ದಾರೆ.


ಯಂಗ್ ಅಂಡ್ ಎನರ್ಜಿಟಿಕ್

'ಜಾಗ್ವಾರ್' ಚಿತ್ರದ ಫೋಟೋಶೂಟ್ ನಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಲುಕ್ ನಲ್ಲಿ ನಿಖಿಲ್ ಮಿಂಚಿದ್ದಾರೆ.


ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ?

ನಿಖಿಲ್ ಕುಮಾರ್ ಜೊತೆ ಮಲ್ಲು ಬೆಡಗಿ ದೀಪ್ತಿ ಸಾತಿ 'ಜಾಗ್ವಾರ್' ಚಿತ್ರದಲ್ಲಿ ಡ್ಯುಯೆಟ್ ಹಾಡಲಿದ್ದಾರೆ. [ನಿಖಿಲ್ 'ಜಾಗ್ವಾರ್'ಗೆ ನಾಯಕಿ ಯಾರು ಗೊತ್ತಾಯ್ತಾ?]


'ಜಾಗ್ವಾರ್' ನಲ್ಲಿ ಜಗಪತಿ ಬಾಬು?

ಮೂಲಗಳ ಪ್ರಕಾರ, 'ಜಾಗ್ವಾರ್' ಚಿತ್ರದಲ್ಲಿ ಟಾಲಿವುಡ್ ನ ಖ್ಯಾತ ಹೀರೋ ಜಗಪತಿ ಬಾಬು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.[ನಿಖಿಲ್ 'ಜಾಗ್ವಾರ್'ನಲ್ಲಿ ತೆಲುಗಿನ ಜಗಪತಿ ಬಾಬು ಮಿಂಚಿಂಗು]


ಕಟ್ರೀನಾ ಕೈಫ್ ಬರ್ತಾರಾ?

'ಜಾಗ್ವಾರ್' ಸಿನಿಮಾದ ಹಾಡೊಂದರಲ್ಲಿ ಬಾಲಿವುಡ್ ಬ್ಯೂಟಿ ಕಟ್ರೀನಾ ಕೈಫ್ ಸೊಂಟ ಬಳುಕಿಸಲಿದ್ದಾರೆ ಅಂತ ಸುದ್ದಿ ಕೂಡ ಹಬ್ಬಿದೆ. [ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!]


ರಾಜಮೌಳಿ ತಂದೆ ಕಥೆ!

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ಜಾಗ್ವಾರ್' ಚಿತ್ರದ ಕಥೆ ರಚಿಸಿದ್ದಾರೆ. ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಿಸುತ್ತಿದ್ದಾರೆ.


ಟಾಲಿವುಡ್ ಗೂ ಕಾಲಿಡಲಿರುವ ನಿಖಿಲ್!

'ಜಾಗ್ವಾರ್' ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರೆಡಿಯಾಗಲಿದೆ. ಆ ಮೂಲಕ ಟಾಲಿವುಡ್ ಗೂ ಕಾಲಿಡಲಿದ್ದಾರೆ ನಿಖಿಲ್ ಕುಮಾರ್.


http://videos.filmibeat.com/kannada/on-the-sets/making-of-jaguar-kannada-movie-183972.html

ವಿಡಿಯೋ ನೋಡಿದ್ದೀರಾ?

'ಜಾಗ್ವಾರ್' ಚಿತ್ರಕ್ಕೆ ಸರ್ವ ಸಿದ್ಧತೆ ನಡೆಸಿರುವ ನಿಖಿಲ್ ಕುಮಾರ್ ರವರ ವಿಡಿಯೋ ಇಲ್ಲಿದೆ ನೋಡಿ....


English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. Check out the stylish stills of Nikhil Kumar in the movie 'Jaguar'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada