For Quick Alerts
  ALLOW NOTIFICATIONS  
  For Daily Alerts

  'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ

  By Harshitha
  |

  'ಗೋವಿಂದಾಯ ನಮಃ' ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೆಡಗಿ ಪಾರುಲ್ ಯಾದವ್ ಇದೀಗ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಾಯಕ ನಟಿಯಾಗಿ ಬೆಳೆದಿದ್ದಾರೆ.

  'ಪ್ಯಾರ್ಗೆ ಹುಡುಗಿ' ಪಾರುಲ್ ಯಾದವ್ ಈಗ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಬಿಜಿಯಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸುತ್ತಿರುವ ಪಾರುಲ್, ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ವೀರಪ್ಪನ್ ನ ಹಿಡಿಯುವುದಕ್ಕೆ ಸಾಹಸ ಮಾಡಿ ಇತ್ತೀಚೆಗಷ್ಟೇ ಪಾರುಲ್ ಯಾದವ್ ಪೆಟ್ಟು ಮಾಡಿಕೊಂಡಿರುವ ಸುದ್ದಿಯನ್ನ ನಾವೇ ನಿಮಗೆ ಹೇಳಿದ್ವಿ. ಇದೀಗ 'ಕಿಲ್ಲಿಂಗ್ ವೀರಪ್ಪನ್' ಅಡ್ಡದಿಂದ ಪಾರುಲ್ ಯಾದವ್ ರವರ ಲೇಟೆಸ್ಟ್ ಫೋಟೋಗಳು ಔಟ್ ಆಗಿವೆ. [ಸಾಹಸ ಮಾಡಲು ಹೋಗಿ ಪೆಟ್ಟು ಮಾಡಿಕೊಂಡ ಪಾರುಲ್]

  ವೀರಪ್ಪನ್ ನ ಟ್ರ್ಯಾಪ್ ಮಾಡುವುದಕ್ಕೆ ಪಾರುಲ್ ತಾಳಿರುವ ನಾನಾ ಅವತಾರಗಳ ಝಲಕ್ ಇಲ್ಲಿದೆ ನೋಡಿ. ಮಾನಸಿಕ ಅಸ್ವಸ್ಥೆಯಾಗಿ, ಹಳ್ಳಿ ಹುಡುಗಿಯಾಗಿ ಪಾರುಲ್ ಯಾದವ್ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. [ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?]

  ಇದನ್ನೆಲ್ಲಾ ನೋಡ್ತಿದ್ರೆ, ಸಿನಿಮಾದಲ್ಲಿ ಪಾರುಲ್ ಪಾತ್ರಕ್ಕೆ ಮಹತ್ವ ಇದೆ ಅನ್ನೋದು ಕನ್ಫರ್ಮ್. ಸದ್ಯಕ್ಕೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರತಂಡದ ಕಡೆಯಿಂದ ಲಭ್ಯವಾಗಿರುವ ಮಾಹಿತಿ ಇದಿಷ್ಟು. ಸಿನಿಮಾದ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

  English summary
  Kannada Actress Parul Yadav will be seen in different get-ups in Ram Gopal Varma's 'Killing Veerappan'. Check Out her Pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X