ಚಿತ್ರಪಟ: ಸ್ಯಾಂಡಲ್ ವುಡ್ ಪಿ.ಆರ್.ಒ ನಾಗೇಂದ್ರ ಮಗಳ ಮದುವೆ

By Suneetha

ಸುಮಾರು 700 ಕನ್ನಡ ಚಿತ್ರಗಳಿಗೆ ಪ್ರಚಾರಕರ್ತರಾಗಿ (ಪಿ.ಆರ್.ಒ) ಕೆಲಸ ಮಾಡಿ ಇದೀಗ ಹಿರಿಯ PRO ಎನಿಸಿಕೊಂಡಿರುವ ನಾಗೇಂದ್ರ ಅವರ ಮಗಳು ಅಪೂರ್ವ ಅವರ ವಿವಾಹವು ಸಂಜೀವ್ ಕುಮಾರ್ ಎಂಬುವವರ ಜೊತೆ ಮೇ 26ರಂದು ಅದ್ದೂರಿಯಾಗಿ ನೆರವೇರಿದೆ.

ಸರಿ ಸುಮಾರು 3 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಾ, ಜೊತೆ-ಜೊತೆಗೆ ಸಿನಿಮಾ ನಿರ್ಮಾಣ ಮಾಡುವ ಕೆಲಸಕ್ಕೂ ಕೈ ಹಾಕಿದ್ದ ನಾಗೇಂದ್ರ ಅವರಿಗೆ ಇಂದು ಇಡೀ ಸ್ಯಾಂಡಲ್ ವುಡ್ ಕ್ಷೇತ್ರದ ಇಂಚಿಂಚೂ ತಿಳಿದಿದೆ.[ಚಿತ್ರಗಳು: 'ಕೋಟಿಗೊಬ್ಬ 2' ನಿರ್ದೇಶಕರ ಮಗಳ ಮದುವೆಯಲ್ಲಿ ಸುದೀಪ್ ಭಾಗಿ]

In pics: PRO Nagendra daughter Apoorva weds Sanjeev

ಇದೀಗ ಒಬ್ಬಳೇ ಮಗಳಾದ ಅಪೂರ್ವ ಅವರನ್ನು ಸಂಜೀವ್ ಕುಮಾರ್ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಅದ್ದೂರಿ ಸಮಾರಂಭ ಮೇ 26, ಗುರುವಾರದಂದು ಬೆಂಗಳೂರಿನ ಪೈ ವಿಸ್ತ ಕನ್ವೆನ್ ಷನ್ ಹಾಲ್ ನಲ್ಲಿ ಜರುಗಿದೆ.

ಇನ್ನು ನಾಗೇಂದ್ರ ಅವರ ಮುದ್ದು ಮಗಳ ಮದುವೆಯಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ, ನೂತನ ವಧು-ವರರಾದ ಅಪೂರ್ವ ಮತ್ತು ಸಂಜೀವ್ ಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.

ನಟ ಕಿಚ್ಚ ಸುದೀಪ್, ನಟಿ ಅಮೂಲ್ಯ, ರಮೇಶ್ ಅರವಿಂದ್, ಲವ್ಲಿಸ್ಟಾರ್ ಪ್ರೇಮ್, ಕುಮಾರ್ ಬಂಗಾರಪ್ಪ, ಸುಂದರ್ ರಾಜ್, ಬಿ.ಸಿ ಪಾಟೀಲ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಹಾಗೂ ಮಾಧ್ಯಮ ಮಿತ್ರರು ಆಗಮಿಸಿ ನವ ದಂಪತಿಗಳಿಗೆ ಹರಸಿದ್ದಾರೆ.

ಅಪೂರ್ವ ಮತ್ತು ಸಂಜೀವ್ ಕುಮಾರ್ ಅವರ ಮದುವೆಯ ಫೋಟೋ ಆಲ್ಬಂ ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದ್ದು, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ಚಿತ್ರಪಟ: ಸ್ಯಾಂಡಲ್ ವುಡ್ ಪಿ.ಆರ್.ಒ ನಾಗೇಂದ್ರ ಮಗಳ ಮದುವೆ

ಚಿತ್ರಪಟ: ಸ್ಯಾಂಡಲ್ ವುಡ್ ಪಿ.ಆರ್.ಒ ನಾಗೇಂದ್ರ ಮಗಳ ಮದುವೆ

-

-

-

-

-

-

-

-

-

-

-

-

-

-

-

-

-

-

-

-

-

-

More from Filmibeat

English summary
Senior most Kannada cinema PRO Nagendra who worked for nearly 700 films held a grand wedding of his daughter Apoorva with Sanjeev Kumar on 26th of May in Bengaluru Pai Vista Convention center. Apoorva is the only daughter of the senior PRO Nagendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X