»   » ಚಿತ್ರಗಳು: ಪುನೀತ್ ರಾಜ್ ಕುಮಾರ್ 42ನೇ ಹುಟ್ಟುಹಬ್ಬ ಬಲು ಜೋರು

ಚಿತ್ರಗಳು: ಪುನೀತ್ ರಾಜ್ ಕುಮಾರ್ 42ನೇ ಹುಟ್ಟುಹಬ್ಬ ಬಲು ಜೋರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಪವರ್ ಸ್ಟಾರ್'.. ಅಣ್ಣಾವ್ರ ಮುದ್ದಿನ ಮಗ.. ಪುನೀತ್ ರಾಜ್ ಕುಮಾರ್ ರವರಿಗಿಂದು (ಮಾರ್ಚ್ 17) ಹುಟ್ಟುಹಬ್ಬದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟಿರುವ ಅಪ್ಪು ಇಂದು ತಮ್ಮ ಜನ್ಮದಿನವನ್ನ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮಧ್ಯರಾತ್ರಿಯಿಂದಲೇ ಸದಾಶಿವನಗರದಲ್ಲಿ ಇರುವ ಪುನೀತ್ ರಾಜ್ ಕುಮಾರ್ ರವರ ಮನೆ ಮುಂದೆ ಜನಸಾಗರ. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಅಪ್ಪು ಬರ್ತಡೇಯನ್ನ ಅಭಿಮಾನಿಗಳು ಧಾಂ ಧೂಂ ಆಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ.[ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..]

ಇನ್ನೂ ಅಭಿಮಾನಿಗಳು ಪ್ರೀತಿಯಿಂದ ತಂದಿರುವ ತರಹೇವಾರಿ ಕೇಕ್ ಗಳನ್ನು ಕತ್ತಿರಿಸಿ, ಬರ್ತಡೇ ಬಾಯ್ ಪುನೀತ್ ಸಂಭ್ರಮಿಸುತ್ತಿದ್ದಾರೆ. ಮುಂದೆ ಓದಿರಿ....

ಪವರ್ ಸ್ಟಾರ್ ಮನೆ ಮುಂದೆ ಜನಜಂಗುಳಿ

''ಹೇಗಾದರೂ ಮಾಡಿ ಪುನೀತ್ ರಾಜ್ ಕುಮಾರ್ ರವರಿಗೆ ಇಂದು ಬರ್ತಡೇ ವಿಶ್ ಮಾಡಲೇಬೇಕು... ನನ್ನ ಕೈಯಾರೆ ಕೇಕ್ ತಿನ್ನಿಸಲೇ ಬೇಕು'' ಅಂತ ಡಿಸೈಡ್ ಮಾಡಿ ರಾಜ್ಯದ ಮೂಲೆಮೂಲೆಯಿಂದಲೂ 'ಪವರ್'ಫುಲ್ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಮನೆ ಮುಂದೆ ಜಮಾಯ್ಸಿದ್ದರು. [ಪುನೀತ್ ಹೊಸ ಮನೆಯನ್ನ ನೋಡಿದ್ರೆ ನೀವು ಬಾಯ್ಮೇಲೆ ಬೆರಳಿಡುತ್ತೀರಾ.!]

ಅಪ್ಪು ಮನೆ ಮುಂದೆ ಜಾತ್ರೆ

ಸದಾಶಿವನಗರದಲ್ಲಿ ಇರುವ ಪುನೀತ್ ರಾಜ್ ಕುಮಾರ್ ರವರ ಮನೆ ಮುಂದೆ ಇಂದು ಅಕ್ಷರಶಃ ಹಬ್ಬದ ವಾತಾವರಣ. ಅಪ್ಪು ಹುಟ್ಟುಹಬ್ಬಕ್ಕಾಗಿ ಅಭಿಮಾನಿಯೊಬ್ಬರು ತಯಾರು ಮಾಡಿರುವ ಕಲಾಕೃತಿಯನ್ನ ಒಮ್ಮೆ ನೀವೇ ನೋಡಿ....

[ಪವರ್ ಸ್ಟಾರ್ ಬಗ್ಗೆ ನೀವರಿಯದ ಗುಣವಿಶೇಷಣಗಳು]

ಕೈ ಮೇಲೆ ಟ್ಯಾಟ್ಯೂ

ಕರ್ನಾಟಕದಲ್ಲಿ ಅಪ್ಪು ಕ್ರೇಜ್ ಎಷ್ಟಿದೆ ಅನ್ನೋ ಪ್ರಶ್ನೆಗೆ ಸರಿಯಾದ ಉತ್ತರ ಇದೇ ನೋಡಿ.... ಅಭಿಮಾನಿಯೊಬ್ಬರು ತಮ್ಮ ಕೈ ಮೇಲೆ 'ಅಪ್ಪು' ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ.

ರಾರಾಜಿಸುತ್ತಿರುವ ಪೋಸ್ಟರ್ ಗಳು

ಸದಾಶಿವನಗರದ ಮೂಲೆ ಮೂಲೆಯಲ್ಲೂ ಇಂದು ಅಪ್ಪು ಹುಟ್ಟುಹಬ್ಬಕ್ಕಾಗಿ ಶುಭ ಕೋರುವ ಪೋಸ್ಟರ್ ಗಳೇ ರಾರಾಜಿಸುತ್ತಿವೆ.

ಮುದ್ದಿನ ಮಡದಿ ಕೇಕ್ ತಿನ್ನಿಸಿದ ಕ್ಷಣ

ಪತಿಗೆ ಶುಭಾಶಯ ಕೋರಿ ಮುದ್ದಿನ ಮಡದಿ ಅಶ್ವಿನಿ ಕೇಕ್ ತಿನ್ನಿಸಿದ ಸಂಭ್ರಮದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿರುವುದು ಹೀಗೆ...

ಶುಭ ಕೋರಲು ಆಗಮಿಸಿದ ರಾಘಣ್ಣ

ಆತ್ಮೀಯ ಸಹೋದರನಿಗೆ ಶುಭಾಶಯ ತಿಳಿಸಲು ರಾಘವೇಂದ್ರ ರಾಜ್ ಕುಮಾರ್ ಕೂಡ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್

#HappyBirthdayPuneeth ಎಂಬ ಹ್ಯಾಶ್ ಟ್ಯಾಗ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಅಭಿಮಾನಿಗಳಿಗೆ ಬಂಪರ್ ಉಡುಗೊರೆ

ಅಪ್ಪು ಹುಟ್ಟುಹಬ್ಬದ ಪ್ರಯುಕ್ತ 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್...' ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಲಿಂಕ್ ಇಲ್ಲಿದೆ.. ನೋಡಿ...

ಹ್ಯಾಪಿ ಬರ್ತಡೇ ಅಪ್ಪು..

42ನೇ ವಸಂತಕ್ಕೆ ಕಾಲಿಟ್ಟಿರುವ ಪುನೀತ್ ರಾಜ್ ಕುಮಾರ್ ಹೀಗೆ ಯಶಸ್ಸಿನ ಏಣಿಯ ಎತ್ತರೆತ್ತರಕ್ಕೆ ಏರುತಿರಲಿ ಎನ್ನುವುದು ನಮ್ಮ ಆಶಯ... ಒನ್ಸ್ ಅಗೇನ್ ಹ್ಯಾಪಿ ಬರ್ತಡೇ ಅಪ್ಪು.

ನೀವೂ ವಿಶ್ ಮಾಡಿ...

ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಪುನೀತ್ ರಾಜ್ ಕುಮಾರ್ ರವರಿಗೆ ನೀವೂ ವಿಶ್ ಮಾಡಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Power Star Puneeth Rajkumar is celebrating his 42nd Birthday today (March 17th). Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada