»   » ಪುನೀತ್ ಹೊಸ ಮನೆಯನ್ನ ನೋಡಿದ್ರೆ ನೀವು ಬಾಯ್ಮೇಲೆ ಬೆರಳಿಡುತ್ತೀರಾ.!

ಪುನೀತ್ ಹೊಸ ಮನೆಯನ್ನ ನೋಡಿದ್ರೆ ನೀವು ಬಾಯ್ಮೇಲೆ ಬೆರಳಿಡುತ್ತೀರಾ.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಮನೆ ಎಲ್ಲಿದೆ.? ಈ ಪ್ರಶ್ನೆ ಕೇಳಿದ ಕೂಡಲೆ ಎಲ್ಲರೂ ಬೆಟ್ಟು ಮಾಡಿ ತೋರಿಸುವುದು ಸದಾಶಿವನಗರದತ್ತ.! ಅಪ್ಪ ಡಾ.ರಾಜ್ ಕುಮಾರ್ ಕಾಲದಿಂದಲೂ ಅಪ್ಪು ವಾಸವಾಗಿರುವುದು ಇದೇ ಸದಾಶಿವನಗರದಲ್ಲಿ.

ಡಾ.ರಾಜ್ ಕುಮಾರ್ ರವರ ಮನೆ ಅಂದ್ರೆ ಸದಾಶಿವನಗರದಲ್ಲಿ ಲ್ಯಾಂಡ್ ಮಾರ್ಕ್ ಇದ್ಹಾಗೆ. ಹೀಗಾಗಿ, ಪವರ್ ಸ್ಟಾರ್ ರನ್ನ ಭೇಟಿ ಮಾಡಲು, ಅವರ ಮನೆ ಮುಂದೆ ಅಭಿಮಾನಿಗಳ ದಂಡು ಪ್ರತಿದಿನ ಇದ್ದೇ ಇರುತ್ತೆ. [ಏ.24ರಂದು ಸದಾಶಿವನಗರ ಹೊಸ ಮನೆಗೆ ಪುನೀತ್]

ಬಿಡುವಿಲ್ಲದ ಶೂಟಿಂಗ್ ನಡುವೆಯೂ ಕುಟುಂಬ ಸದಸ್ಯರ ಜೊತೆ ಜೀವನ ಕಳೆಯಲು ಬಯಸಿರುವ ಪುನೀತ್ ರಾಜ್ ಕುಮಾರ್ ಹೊಸ ಮನೆ ಮಾಡಿದ್ದಾರೆ. ಪುನೀತ್ ರವರ ಎರಡನೇ ಮನೆಯ ಒಳಾಂಗಣ ವಿನ್ಯಾಸ ನೋಡಿದ್ರೆ, ನೀವು ಬಾಯಿ ಮೇಲೆ ಬೆರಳಿಡುತ್ತೀರಾ...ಮುಂದೆ ಓದಿ....

ಇದೇ ನೋಡಿ ಅಪ್ಪು ಹೊಸ ಮನೆ

ಪುನೀತ್ ರಾಜ್ ಕುಮಾರ್ ಕೊಂಡುಕೊಂಡಿರುವ ಹೊಸ ಮನೆ ಇದೇ. [ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!]

ಯಾವ ಏರಿಯಾದಲ್ಲಿ ಇದೆ.?

ಬೆಂಗಳೂರಿನ ಕ್ರೇಗ್ ಪಾರ್ಕ್ ನಲ್ಲಿ ಹೊಸ ಮನೆ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್.

ಒಳಾಂಗಣ ವಿನ್ಯಾಸ

ಭಾರತದ ಪ್ರಮುಖ ಪೀಠೋಪಕರಣ ಮತ್ತು ಒಳಾಂಗಣ ಅಲಂಕರಣದ ಬ್ರ್ಯಾಂಡ್ ಆಗಿರುವ ಗೋದ್ರೆಜ್ ಇಂಟೀರಿಯೋ, 'ಅಪ್ ಲೋಡ್ ಅಂಡ್ ಟ್ರಾನ್ಸ್ ಫಾರ್ಮ್' ಅಭಿಯಾನದ ಅಂಗವಾಗಿ ಪುನೀತ್ ರಾಜ್ ಕುಮಾರ್ ರವರ ಎರಡನೇ ಮನೆಗೆ ಹೊಸ ರೂಪ ನೀಡಿದೆ.

ಪುನೀತ್ ಕುಟುಂಬದ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ

ಪುನೀತ್ ರಾಜ್ ಕುಮಾರ್ ರವರ ಜೀವನ ಶೈಲಿ, ಅಗತ್ಯಕ್ಕೆ ತಕ್ಕಂತೆ, ಅವರ ಮನೆಗೆ ಗೋದ್ರೆಜ್ ಇಂಟೀರಿಯೋ ಆಕರ್ಷಕ ರೂಪ ನೀಡಿದೆ.

ಕಂಗೊಳಿಸುವ ಲಿವಿಂಗ್ ಏರಿಯಾ

ಎಷ್ಟು ಬೇಕೋ ಅಷ್ಟು ಬೆಳಕು, ಅದಕ್ಕೆ ತಕ್ಕಂತೆ ವಾಲ್ ಪೇಂಟ್ ಮತ್ತು ಪೀಠೋಪಕರಣ ಇರುವ ಪುನೀತ್ ರಾಜ್ ಕುಮಾರ್ ರವರ ಹೊಸ ಮನೆಯ ಲಿವಿಂಗ್ ಏರಿಯಾ ನೋಡಲು ಚೆಂದ.

ಆಧುನಿಕ ಪೀಠೋಪಕರಣ

ಪುನೀತ್ ಹಾಗೂ ಪತ್ನಿ ಅಶ್ವಿನಿ ಯವರ ಇಚ್ಛೆಗೆ ತಕ್ಕ ಹಾಗೆ ಗೋದ್ರೆಜ್ ಇಂಟೀರಿಯೋ ಸಿದ್ದಪಡಿಸಿರುವ ಸೋಫಾ ಇದು.

ಬೆಡ್ ರೂಮ್

ಪುನೀತ್ ರಾಜ್ ಕುಮಾರ್ ಹೊಸ ಮನೆಯ ಮಾಸ್ಟರ್ ಬೆಡ್ ರೂಮ್ ಇದು.

ಮಕ್ಕಳ ಬೆಡ್ ರೂಮ್

ಪುನೀತ್ ಇಬ್ಬರು ಮಕ್ಕಳಾದ ಧ್ರಿತಿ ಮತ್ತು ವಂದಿತಾಗೆ ಮೀಸಲಿರುವ ಇರುವ ಬೆಡ್ ರೂಮ್ ಇದು.

ಗೆಸ್ಟ್ ಬೆಡ್ ರೂಮ್

ಪುನೀತ್ ಮನೆಗೆ ಯಾರೇ ಅತಿಥಿ ಬಂದರೂ, ಅವರು ನಿದ್ರಿಸುವುದು ಇಲ್ಲೇ.

ಡೈನಿಂಗ್ ಟೇಬಲ್ ನೋಡಿ....

ಗಂಡ-ಹೆಂಡತಿ ಇಬ್ಬರು ಮಕ್ಕಳಿಗಾಗಿ ಪ್ರತ್ಯೇಕ ಡೈನಿಂಗ್ ಟೇಬಲ್ ಇದೆ.

ಅಡುಗೆ ಮನೆ ಇದು....

ಪುನೀತ್ - ಅಶ್ವಿನಿ ಹೊಸ ಮನೆಯ ಅಡುಗೆ ಮನೆ ಸಂಪೂರ್ಣ ಬಿಳಿ ಮಯ.

ಮನೆ ವಿನ್ಯಾಸದ ಬಗ್ಗೆ ಪುನೀತ್ ಹೇಳುವುದು ಹೀಗೆ....

''ಈ ಮನೆಯ ವಿನ್ಯಾಸ ಸಮಕಾಲೀನ ಶೈಲಿಯಲ್ಲಿದೆ. ಪಾಶ್ಚಾತ್ಯ ಶೈಲಿಯ ಪ್ರಭಾವ ಕಾಣಿಸುತ್ತದೆ. ಗಾಢ ಬಣ್ಣದ ಶೇಡ್ ಗಳು ನನಗೆ ಇಷ್ಟವಾಗುವುದಿಲ್ಲ. ತಿಳಿ ಬಣ್ಣ ಕಣ್ಣಿಗೆ ಹಿತ, ಮನಸ್ಸಿಗೂ ಹಿತ. ನನ್ನ ಟೇಸ್ಟ್ ಗೆ ತಕ್ಕ ಹಾಗೆ ಗೋದ್ರೆಜ್ ನವರು ವಿನ್ಯಾಸ ಮಾಡಿದ್ದಾರೆ'' ಎನ್ನುತ್ತಾರೆ ಪುನೀತ್ ರಾಜ್ ಕುಮಾರ್

ಪುನೀತ್ ಗೆ ಇನ್ನೊಂದು ಮನೆ ಯಾಕೆ.?

''ಬಿಡುವಿಲ್ಲದ ಶೂಟಿಂಗ್ ನಡುವೆಯೂ ಕುಟುಂಬ ಸದಸ್ಯರ ಜೊತೆಗೆ ಖುಷಿಯ ಜೀವನ ಕಳೆಯಲು ನಾನು ಹೊಸ ಮನೆ ಮಾಡಿದೆ. ನನ್ನ ಮನೆಗೆ ಒಳಾಂಗಣ ವಿನ್ಯಾಸ ಮಾಡಲು ಗೋದ್ರೆಜ್ ಇಂಟೀರಿಯೋ 'ಅಪ್ ಲೋಡ್ ಅಂಡ್ ಟ್ರಾನ್ಸ್ ಫಾರ್ಮ್' ಅಭಿಯಾನದ ಮುಖಾಂತರ ಮುಂದಾದರು. ನನಗೆ ಬೇಕಾದ ಹಾಗೆ ಉತ್ತಮ ವಿನ್ಯಾಸ ಮಾಡಿದ್ದಾರೆ. ನನ್ನ ಕನಸಿನ ಮನೆ ನಿಜವಾಗಿದೆ'' ಎಂದರು ಪುನೀತ್ ರಾಜ್ ಕುಮಾರ್

English summary
Godrej Interio, India's leading furniture and interior solutions brand, transformed Kannada Actor Puneeth Rajkumar's second home as a part of consumer campaign 'Upload and Transform'. Check out the pics of Appu's new home...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada