»   » ಯಶ್ ಮನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಟ್ರಿ

ಯಶ್ ಮನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಟ್ರಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಯಾರು ಅಂದ್ರೆ, ಮುಲಾಜಿಲ್ದೆ ಸಿಗುವ ಉತ್ತರ ರಾಕಿಂಗ್ ಸ್ಟಾರ್ ಯಶ್. ಇನ್ನೂ ಗಾಂಧಿನಗರದ ಗಲ್ಲಪೆಟ್ಟಿಗೆಯನ್ನ ಧೂಳೆಬ್ಬಿಸುವುದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ನಂಬರ್ 1.

ಈ ಇಬ್ಬರು ತೆರೆಮೇಲೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಸ್ ಆಗಿರ್ಬಹುದು. ಆದ್ರೆ, ತೆರೆಹಿಂದೆ ಅಣ್ತಮ್ಮಂದಿರು. ಪುನೀತ್ ರಾಜ್ ಕುಮಾರ್ ಸಿನಿಮಾ ಶೂಟಿಂಗ್ ನಡೆಯುವಾಗ, ಅವರ ಚಿತ್ರದ ಸೆಟ್ ಗೆ ಯಶ್ ಭೇಟಿ ಕೊಡುವುದು, ಯಶ್ ಚಿತ್ರಕ್ಕೆ ಪುನೀತ್ ಶುಭ ಹಾರೈಸುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. [ಸೂರಿ 'ಕಂಟ್ರಿ ಪಿಸ್ತೂಲ್'ಗೆ ರಾಕಿಂಗ್ ಸ್ಟಾರಾ ಇಲ್ಲಾ ಪವರ್ ಸ್ಟಾರಾ?]

ಈಗ ಇನ್ನೂ ಒಂದ್ ಹೆಜ್ಜೆ ಮುಂದಕ್ಕೆ ಹೋಗಿರುವ ಪುನೀತ್ ರಾಜ್ ಕುಮಾರ್, ನಟ ಯಶ್ ಮನೆಗೆ ಇತ್ತೀಚೆಗಷ್ಟೇ ಭೇಟಿ ಕೊಟ್ಟಿದ್ದರು. ಯಶ್ ಕುಟುಂಬ ಸದಸ್ಯರ ಜೊತೆ ಕೆಲ ಕಾಲ ಹರಟಿದರು. ಅದರ ಚಿತ್ರಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಯಶ್ ಕುಟುಂಬದ ಜೊತೆ ಪುನೀತ್ ರಾಜ್ ಕುಮಾರ್

ಯಶ್ ತಂದೆ ಅರುಣ್ ಕುಮಾರ್, ತಾಯಿ ಪುಷ್ಪ, ಸಹೋದರಿ ನಂದಿನಿ ಜೊತೆ ಪುನೀತ್ ರಾಜ್ ಕುಮಾರ್.

ಪುನೀತ್ ಗೆ ಯಶ್ ತಾಯಿ ಪುಷ್ಪ ಪಪ್ಪಿ

ತಮ್ಮ ಮನೆಗೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿರುವ ಖುಷಿಯಲ್ಲಿ ಯಶ್ ತಾಯಿ ಪುಷ್ಪ, ಅಪ್ಪುಗೆ ಸಿಹಿ ಮುತ್ತು ನೀಡಿದರು.

ಪುಟಾಣಿ ಜೊತೆ ಪವರ್ ಸ್ಟಾರ್

ಯಶ್ ಸಹೋದರಿ ನಂದಿನಿ ಪುತ್ರ ಚಿರಾಗ್ ಜೊತೆ ಪುನೀತ್ ರಾಜ್ ಕುಮಾರ್.

ಪುನೀತ್ ಅಂದ್ರೆ ಇಷ್ಟ

ಯಶ್ ಸಹೋದರಿ ನಂದಿನಿಗೆ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಫೇವರಿಟ್ ಆಕ್ಟರ್.

ಯಶ್ ಮಿಸ್ಸಿಂಗ್.!

'ಮಾಸ್ಟರ್ ಪೀಸ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಮನೆಗೆ ಪುನೀತ್ ಭೇಟಿ ಕೊಟ್ಟ ಸಂದರ್ಭದಲ್ಲಿ ಮಿಸ್ ಆಗಿದ್ದರು.

ಶೂಟಿಂಗ್ ನಲ್ಲಿ ಅಪ್ಪು ಬಿಜಿ

'ದೊಡ್ಮನೆ ಹುಡುಗ' ಮತ್ತು 'ಚಕ್ರವ್ಯೂಹ' ಶೂಟಿಂಗ್ ನಲ್ಲಿ ಸದ್ಯ ಪುನೀತ್ ರಾಜ್ ಕುಮಾರ್ ಬಿಜಿಯಾಗಿದ್ದಾರೆ. ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ಯಶ್ ಮನೆಗೆ ಭೇಟಿ ಕೊಟ್ಟಿದ್ದಾರೆ ಅಪ್ಪು.

English summary
Kannada Actor Puneeth Rajkumar was recently spotted spending time with family members of Yash in his busy schedule.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada