For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ'ನ ಶತದಿನೋತ್ಸವದಲ್ಲಿ ಹಾಡಿ-ಕುಣಿದು ಸಂಭ್ರಮಿಸಿದ ತಾರೆಯರು

  By Bharath Kumar
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಶತದಿನೋತ್ಸವ ಕಾರ್ಯಕ್ರಮ ನಿನ್ನೆಯಷ್ಟೆ (ಜುಲೈ 7) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.

  'ದೊಡ್ಮನೆ ಹುಡ್ಗ'ನ ಸಂಭ್ರಮದಲ್ಲಿ ಕನ್ನಡದ ಹಲವು ತಾರೆಯರು ಭಾಗವಹಿಸಿದ್ದರು. ಕಿಚ್ಚ ಸುದೀಪ್, ರಾಕಿಂಗ್ ಯಶ್ ಮತ್ತು ರಾಧಿಕಾ ಪಂಡಿತ್, ರಚಿತಾ ರಾಮ್, ಶಿವರಾಜ್ ಕುಮಾರ್, ಜಗ್ಗೇಶ್, ಶ್ರೀ ಮುರುಳಿ, ರಚಿತಾ ರಾಮ್ ಸೇರಿದಂತೆ ಹಲವರು ಸ್ಟಾರ್ ನಟ-ನಟಿಯರು ಆಗಮಿಸಿದ್ದರು.

  ಹೀಗಾಗಿ, 'ರಾಜಕುಮಾರ'ನ ವೇದಿಕೆ ಸಖತ್ ಕಲರ್ ಫುಲ್ ಆಗಿತ್ತು. ಹಾಗಿದ್ರೆ, ಯಾವ ಯಾವ ನಟರು, ಯಾವ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಎಂದು ಮುಂದೆ ಚಿತ್ರಗಳ ಸಮೇತ ನೋಡಿ....

  ಒಟ್ಟಿಗೆ ಡ್ಯಾನ್ ಮಾಡಿದ ಕಿಚ್ಚ-ಅಪ್ಪು

  ಒಟ್ಟಿಗೆ ಡ್ಯಾನ್ ಮಾಡಿದ ಕಿಚ್ಚ-ಅಪ್ಪು

  'ರಾಜಕುಮಾರ' ಸೆಂಚುರಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನ ರಂಜಿಸಿದರು. ನಟ ಪುನೀತ್ ರಾಜ್ ಕುಮಾರ್ ಜೊತೆ ಸೇರಿ ಅಪ್ಪು ಡ್ಯಾನ್ಸ್ ಹಾಡಿಗೆ ತಮ್ಮದೇ ಸ್ಟೈಲ್ ನಲ್ಲಿ ಹೆಜ್ಜೆ ಹಾಕಿದರು.

  ಅಪ್ಪು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಸುದೀಪ್, ಯಶ್, ಉಪೇಂದ್ರ.!

  'ಬೊಂಬೆ ಹೇಳುತೈತೆ' ಹಾಡು ಹೇಳಿದ ಶಿವಣ್ಣ

  'ಬೊಂಬೆ ಹೇಳುತೈತೆ' ಹಾಡು ಹೇಳಿದ ಶಿವಣ್ಣ

  'ರಾಜಕುಮಾರ' ಸೆಂಚುರಿ ಕಾರ್ಯಕ್ರಮದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡನ್ನ ಪುನೀತ್ ಜೊತೆ ಸೇರಿ ಹಾಡಿದ್ದು ವಿಶೇಷವಾಗಿತ್ತು.

  ಅಪ್ಪು ಸೆಂಚುರಿ, ಶಿವಣ್ಣ ಹಾಫ್ ಸೆಂಚುರಿ: ಗೆಲುವಿನ ಗುಟ್ಟೇನು.?

  ರಾಕಿಂಗ್ ಸ್ಟಾರ್ ದಂಪತಿ

  ರಾಕಿಂಗ್ ಸ್ಟಾರ್ ದಂಪತಿ

  ಇನ್ನು ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ನಟಿ ರಾಧಿಕಾ ಪಂಡಿತ್ ಕೂಡ 'ರಾಜಕುಮಾರ' ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಚಿತ್ರಜಗತ್ತು ಮೆಚ್ಚುವ ಕೆಲಸಕ್ಕೆ ಮುಂದಾದ 'ರಾಜಕುಮಾರ' ನಿರ್ಮಾಪಕ

  ಜಗ್ಗೇಶ್ ಮಾತಿನ ಚಟಾಕಿ

  ಜಗ್ಗೇಶ್ ಮಾತಿನ ಚಟಾಕಿ

  ಅರಮನೆ ಮೈದಾನದಲ್ಲಿ ನಡೆದ 'ರಾಜಕುಮಾರ' 100ನೇ ಸಂಭ್ರಮಕ್ಕೆ ನವರಸ ನಾಯಕ ಜಗ್ಗೇಶ್ ಅವರು ಸಾಕ್ಷಿಯಾಗಿದ್ದರು. ಈ ವೇಳೆ ಸ್ಟಾರ್ ನಟರ ಬಗ್ಗೆ ಮತ್ತು ಚಿತ್ರರಂಗದ ಭವಿಷ್ಯದ ಬಗ್ಗೆ ಮಾತಿನ ಚಟಾಕಿ ಹಾರಿಸಿದ್ದು ಗಮನ ಸೆಳೆಯಿತು.

  ರೋರಿಂಗ್ ಸ್ಟಾರ್ ಶ್ರೀಮುರುಳಿ

  ರೋರಿಂಗ್ ಸ್ಟಾರ್ ಶ್ರೀಮುರುಳಿ

  ಪುನೀತ್ ರಾಜ್ ಕುಮಾರ್ ಅವರ ಸಂಭ್ರಮದಲ್ಲಿ ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಕೂಡ ಭಾಗಿಯಾಗಿದ್ದರು. ಈ ವೇಳೆ ಅಪ್ಪು ಜೊತೆ ಶ್ರೀಮುರುಳಿ ಹಾಗೂ ಜಾನಿ ಮಾಸ್ಟರ್ ಹೆಜ್ಜೆ ಹಾಕಿದರು.

  ರಾಘವೇಂದ್ರ ರಾಜ್ ಕುಮಾರ್ ದಂಪತಿ

  ರಾಘವೇಂದ್ರ ರಾಜ್ ಕುಮಾರ್ ದಂಪತಿ

  'ರಾಜಕುಮಾರ' ಚಿತ್ರದ ಶತದಿನೋತ್ಸವಕ್ಕೆ ನಟ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳ ರಾಘವೇಂದ್ರ ರಾಜ್ ಕುಮಾರ್ ಮತ್ತು ದೊಡ್ಮನೆ ಸದಸ್ಯರು ಆಗಮಿಸಿದ್ದರು.

  ಶರತ್ ಕುಮಾರ್, ಪ್ರಕಾಶ್ ರೈ ಭಾಗಿ

  ಶರತ್ ಕುಮಾರ್, ಪ್ರಕಾಶ್ ರೈ ಭಾಗಿ

  'ರಾಜಕುಮಾರ' ಚಿತ್ರದಲ್ಲಿ ಅಭಿನಯಿಸಿದ್ದ ತಮಿಳುನಟ ಶರತ್ ಕುಮಾರ್, ಬಹುಭಾಷಾ ನಟ ಪ್ರಕಾಶ್ ರೈ, ನಟಿ ಪ್ರಿಯಾ ಆನಂದ್ ಅವರಿಗೆ 'ರಾಜಕುಮಾರ' ಚಿತ್ರತಂಡದಿಂದ ವಿಶೇಷವಾಗಿ ಗೌರವಿಸಲಾಯಿತು. ರಚಿತಾ ರಾಮ್, ಚಿಕ್ಕಣ್ಣ, ರಂಗಾಯಣ ರಘು, ಕೊರಿಯೋಗ್ರಫರ್ ಜಾನಿ ಮಾಸ್ಟರ್ ಸೇರಿದಂತೆ ಇನ್ನು ಹಲವು ಕಲಾವಿದರು ಭಾಗಿಯಾಗಿದ್ದರು.

  ಪವರ್ ಸ್ಟಾರ್ ಕಡೆಯಿಂದ ಮಸ್ತ್ ಮನರಂಜನೆ

  ಪವರ್ ಸ್ಟಾರ್ ಕಡೆಯಿಂದ ಮಸ್ತ್ ಮನರಂಜನೆ

  ಇನ್ನು 'ರಾಜಕುಮಾರ' ಸಂಭ್ರಮದ ಸಾರಥಿಯಾಗಿದ್ದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ರಂಜಿಸಲು ಹಾಡು, ಡ್ಯಾನ್ಸ್, ಮಾಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತ್ತು.

  'ರಾಜಕುಮಾರ' ಚಿತ್ರತಂಡಕ್ಕೆ ಗೌರವ

  'ರಾಜಕುಮಾರ' ಚಿತ್ರತಂಡಕ್ಕೆ ಗೌರವ

  ಚಿತ್ರದ ತಾಂತ್ರಿಕ ವರ್ಗ, ಕಲಾವಿದರು, ಪ್ರೊಡಕ್ಷನ್ ಟೀಮ್ ಹೀಗೆ 'ರಾಜಕುಮಾರ' ಚಿತ್ರಕ್ಕಾಗಿ ದುಡಿದ ಎಲ್ಲ ಸದಸ್ಯರನ್ನ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ವೇದಿಕೆ ಮೇಲೆ ಗೌರವಿಸಿದರು.

  ಉದಯ ಟಿವಿಯಲ್ಲಿ ಪ್ರಸಾರ

  ಉದಯ ಟಿವಿಯಲ್ಲಿ ಪ್ರಸಾರ

  ರಾಜಕುಮಾರ ಚಿತ್ರದ ಶತದಿನೋತ್ಸವ ಸಂಭ್ರಮದ ಪ್ರಸಾರ ಹಕ್ಕನ್ನ ಉದಯ ಟಿವಿ ಖರೀದಿಸಿದೆ. ಆದಷ್ಟೂ ಬೇಗ ಉದಯ ಟಿವಿಯಲ್ಲಿ ರಾಜಕುಮಾರನ 100ನೇ ಯಶಸ್ಸಿನ ಕಾರ್ಯಕ್ರಮ ಪ್ರಸಾರವಾಗುವುದು ನಿರೀಕ್ಷಿಸಿ.

  'ರಾಜಕುಮಾರ' ಚಿತ್ರದ ಯಶಸ್ವಿ ಜೋಡಿಯಿಂದ ಮತ್ತೊಂದು ಹೊಸ ಚಿತ್ರ

  ಚಿತ್ರಕೃಪೆ; ಶಿವರಾಜ್ ಕುಮಾರ್, ಸುದೀಪ್, ಪುನೀತ್ ಅಭಿಮಾನಿ, ಫೇಸ್ ಬುಕ್

  English summary
  Powerstar Puneeth Rajkumar Starrer Raajakumara Movie 100 Days Celebration at Palace Ground. Check out in pics

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X