ಚಿತ್ರಗಳು : ರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ನಿಶ್ಚಿತಾರ್ಥದ ಸಂಭ್ರಮ

By Harshitha

ಕರ್ನಾಟಕದ ರಣಜಿ ಆಟಗಾರ, ವೇಗಿ, ಬೆಂಗಳೂರು ಹುಡುಗ ಅಭಿಮನ್ಯು ಮಿಥುನ್ ರವರ ನಿಶ್ಚಿತಾರ್ಥ ಇಂದು ನೆರವೇರಿದೆ. ಕಾಲಿವುಡ್ ನ ಖ್ಯಾತಿ ನಟಿ ರಾಧಿಕಾ ಸರತ್ ಕುಮಾರ್ ರವರ ಪುತ್ರಿ ರಾಯನೆ ರವರ ಬೆರಳಿಗೆ ಇವತ್ತು ಅಭಿಮನ್ಯು ಮಿಥುನ್ ಉಂಗುರ ತೊಡಿಸಿದರು.

ಕುಟುಂಬ ಮತ್ತು ಆಪ್ತರಿಗಷ್ಟೇ ಆಹ್ವಾನವಿದ್ದ ಅಭಿಮನ್ಯು ಮಿಥುನ್ ಮತ್ತು ರಾಯನೆ ಅವರ ನಿಶ್ಚಿತಾರ್ಥ ಸಮಾರಂಭ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಿತು. ಹಸಿರು ಮತ್ತು ಹಳದಿ ಬಣ್ಣದ ಸೀರೆಯಲ್ಲಿ ರಾಯನೆ ಕಂಗೊಳಿಸಿದರೆ, ಶೇರ್ವಾನಿ ತೊಟ್ಟು ಅಭಿಮನ್ಯು ಮಿಥುನ್ ಮಿರ ಮಿರ ಮಿಂಚಿದರು.[ರಾಧಿಕಾ ಶರತ್ ಪುತ್ರಿ ಜೊತೆ ಕ್ರಿಕೆಟರ್ ಅಭಿಮನ್ಯು ಮಿಥುನ್ ಮದುವೆ]

ಅಭಿಮನ್ಯು ಮಿಥುನ್-ರಾಯನೆ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳು ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಹೊಸ ಬಾಳಿನ ಹೊಸ್ತಿಲಲಿ....

ಹೊಸ ಬಾಳಿನ ಹೊಸ್ತಿಲಲಿ....

ರಾಧಿಕಾ ಸರತ್ ಕುಮಾರ್ ಪುತ್ರಿ ರಾಯನೆ ಬೆರಳಿಗೆ ಅಭಿಮನ್ಯು ಮಿಥುನ್ ಉಂಗುರ ತೊಡಿಸುತ್ತಿರುವುದು.

ಇಬ್ಬರ ಲವ್ ಸ್ಟೋರಿ

ಇಬ್ಬರ ಲವ್ ಸ್ಟೋರಿ

ಅಭಿಮನ್ಯು ಮಿಥುನ್ ಮತ್ತು ರಾಯನೆ ಲವ್ ಸ್ಟೋರಿ ಶುರುವಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ. ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಇಬ್ಬರು ಭೇಟಿಯಾಗಿದ್ದರು. ಇಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 ಒಬ್ಬರದ್ದು ಕ್ರಿಕೆಟ್, ಇನ್ನೊಬ್ಬರದ್ದು ಸಿನಿಮಾ

ಒಬ್ಬರದ್ದು ಕ್ರಿಕೆಟ್, ಇನ್ನೊಬ್ಬರದ್ದು ಸಿನಿಮಾ

ಕರ್ನಾಟಕದ ರಣಜಿ ಆಟಗಾರರಾಗಿದ್ದ ಅಭಿಮನ್ಯು ಮಿಥುನ್ ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆಗಿ ಬೆಳೆದಿದ್ದಾರೆ. ಇನ್ನೂ ಇಂಗ್ಲೆಂಡ್ ನಲ್ಲಿ ಪದವಿ ಮುಗಿಸಿರುವ ರಾಯನೆ ತಾಯಿ ರಾಧಿಕಾ ರವರ 'ರಾಧನ್ ಮೀಡಿಯಾ' ಉಸ್ತುವಾರಿ ವಹಿಸಿಕೊಂಡಿದ್ದಾರೆ.

ರಾಧಿಕಾ ಎರಡನೇ ಪತಿ ಪುತ್ರಿ ರಾಯನೆ

ರಾಧಿಕಾ ಎರಡನೇ ಪತಿ ಪುತ್ರಿ ರಾಯನೆ

ರಾಧಿಕಾ ಸರತ್ ಕುಮಾರ್ ರವರ ಎರಡನೇ ಪತಿ ರಿಚರ್ಡ್ ಹಾರ್ಡಿ ರವರ ಪುತ್ರಿ ರಾಯನೆ.

ಫ್ಯಾಮಿಲಿ ಫೋಟೋ

ಫ್ಯಾಮಿಲಿ ಫೋಟೋ

ನಿಶ್ಚಿತಾರ್ಥದಲ್ಲಿ ರಾಯನೆ ಮತ್ತು ಅಭಿಮನ್ಯು ಮಿಥುನ್ ರವರ ಕುಟುಂಬ.

More from Filmibeat

English summary
Kollywood Actress Radhika Sarath Kumar's daughter Rayane has got engaged to Cricketer Abhimanyu Mithun in Chennai today (September 23rd)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X