»   » ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥಕ್ಕೆ ಸಖತ್ ತಯಾರಿ

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥಕ್ಕೆ ಸಖತ್ ತಯಾರಿ

By: ಬಿ.ಎಂ.ಲವಕುಮಾರ್
Subscribe to Filmibeat Kannada

ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥಕ್ಕೆ ವೀರಾಜಪೇಟೆಯ ಸೆರಿನಿಟಿ ಹಾಲ್ ಸಜ್ಜಾಗಿದ್ದು, ಈಗಾಗಲೇ ವೀರಾಜಪೇಟೆಗೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಆಗಮಿಸಿದ್ದಾರೆ.

ಮತ್ತೊಂದೆಡೆ ಸೆರಿನಿಟಿ ಹಾಲ್‍ನಲ್ಲಿ ನಿಶ್ಚಿತಾರ್ಥಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಟಿ ಜಿಟಿ ಮಳೆ ಅತಿಥಿಗಳಿಗೆ ಮಜಾ ನೀಡುತ್ತಿದೆ. ವೀರಾಜಪೇಟೆಯಲ್ಲಿ ಸಾಗಿ ಬಂದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್‍ ಶೆಟ್ಟಿಯನ್ನು ಜನ ಆತ್ಮೀಯತೆಯಿಂದ ಸ್ವಾಗತಿಸಿದ್ದಾರೆ.

In pics: Rakshit Shetty and Rashmika Mandanna arrived to Virajpete Engagement venue

ರಶ್ಮಿಕಾ ಮಂದಣ್ಣ ಅವರ ಕುಟುಂಬಸ್ಥರು ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಸೆರಿನಿಟಿ ಹಾಲ್ ಸರ್ವ ಸನ್ನದ್ಧವಾಗಿದೆ. ಸಂಜೆ 6.30ಕ್ಕೆ ನಡೆಯುವ ನಿಶ್ವಿತಾರ್ಥ ಕಾರ್ಯಕ್ರಮದಲ್ಲಿ ರಿಂಗ್ ಬದಲಾವಣೆ ನಡೆಯಲಿದೆ. ನಿಶ್ಚಿತಾರ್ಥಕ್ಕೆ ಕೊಡವ ಸಂಪ್ರದಾಯದ ಟಚ್ ದೊರೆಯಲಿದ್ದು, ಈಗಾಗಲೇ ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲವು ಪ್ರಮುಖ ಗಣ್ಯರು, ಆಗಮಿಸಿದ್ದು ಚಿತ್ರರಂಗದ ಹಲವು ನಟ-ನಟಿಯರು ಪಾಲ್ಗೊಳ್ಳುವ ಸಾಧ್ಯತೆ ಇದೆ.

In pics: Rakshit Shetty and Rashmika Mandanna arrived to Virajpete Engagement venue

ಅತಿಥಿಗಳಿಗೆ ವೆಜ್ ಹಾಗೂ ನಾನ್ ವೆಜ್ ಬೋಜನ ವ್ಯವಸ್ಥೆ ಮಾಡಲಾಗಿದ್ದು, ನಾನ್ ವೆಜ್ ಮೆನು ವೈಟ್ ರೈಸ್, ಗೀರೈಸ್, ಮಟನ್‍ಗಸಿ, ಚಿಕನ್ ಸುಕ್ಕಾ, ಬ್ರಿಂಜಲ್ ಫ್ರೈ, ಉಪ್ಪಿನ ಕಾಯಿ, ಮೊಸರು, ಫೋರ್ಕ್ ಫ್ರೈ ಸೇರಿದಂತೆ ಹಲವು ಬಗೆಯ ಖಾದ್ಯಗಳು ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಖಾದ್ಯಗಳು ಇರಲಿವೆ.

English summary
Kannada Actor Rakshit Shetty and Actress Rashmika Mandanna Engagement Held on July 3rd at Virajapete. Check out the Food Menu here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada