»   » ಚಿತ್ರಗಳು: 'ಕಿರಿಕ್ ಪಾರ್ಟಿ' ಮುಹೂರ್ತ ಆಯ್ತು, ಇನ್ನು ಶೂಟಿಂಗ್ ಹಬ್ಬ

ಚಿತ್ರಗಳು: 'ಕಿರಿಕ್ ಪಾರ್ಟಿ' ಮುಹೂರ್ತ ಆಯ್ತು, ಇನ್ನು ಶೂಟಿಂಗ್ ಹಬ್ಬ

Posted By:
Subscribe to Filmibeat Kannada

ನಟನೆ-ನಿರ್ದೇಶನದ ಬಳಿಕ ಇದೀಗ ನಿರ್ಮಾಪಕರಾಗಿ ಜವಾಬ್ದಾರಿ ತೆಗೆದುಕೊಂಡ 'ಉಳಿದವರು ಕಂಡಂತೆ' ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ 'ಪರಂವಾ'ದಿಂದ ಹೊರಬರುತ್ತಿರುವ ಚೊಚ್ಚಲ ಚಿತ್ರ 'ಕಿರಿಕ್ ಪಾರ್ಟಿ' ಅದ್ದೂರಿಯಾಗಿ ಮುಹೂರ್ತ ನೆರವೇರಿಸಿಕೊಂಡಿದೆ.

'ರಿಕ್ಕಿ' ಚಿತ್ರದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು 'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶನದ ಕೆಲಸವನ್ನು ವಹಿಸಿಕೊಂಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರೇ ಚಿತ್ರದಲ್ಲಿ ನಾಯಕನಾಗಿ ಮುಂದುವರಿಯಲಿದ್ದು, ಅಂತೂ ಪೂರ್ತಿ ಹೊಸ ತಂಡದೊಂದಿಗೆ 'ಕಿರಿಕ್ ಪಾರ್ಟಿ' ಮಾಡಲು ಹೊರಟಿದ್ದಾರೆ ಶೆಟ್ರ ಬಳಗದವರು.[ರಕ್ಷಿತ್ ಶೆಟ್ಟಿ ಅವರೆ 'ಕಿರಿಕ್ ಪಾರ್ಟಿ' ಶುರು ಆಯ್ತಾ]

In Pics: Rakshit Shetty Starrer Kannada Movie 'Kirik Party' Muhurtham

ಈಗಾಗಲೇ ಚಿತ್ರಕ್ಕೆ ಇಬ್ಬರು ಹೊಸ ನಾಯಕಿಯರು ಆಯ್ಕೆಯಾಗಿದ್ದು, ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ನಟ ರಕ್ಷಿತ್ ಶೆಟ್ಟಿ ಅವರಿಗೆ ಸಾಥ್ ನೀಡಲಿದ್ದಾರೆ. ಜೊತೆಗೆ ಚಿತ್ರಕ್ಕೆ ಇಬ್ಬರು ಹೊಸ ಬರಹಗಾರರನ್ನು ಆಯ್ಕೆ ಮಾಡಲಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಅವರ 'ತುಘಲಕ್' ಚಿತ್ರಕ್ಕಿಂತ ಮೊದಲೇ ಗೆಳೆಯರಿಬ್ಬರ 'ಕಿರಿಕ್ ಪಾರ್ಟಿ' ಸಿನಿಮಾ ಶುರುವಾಗಿದ್ದು, ರಕ್ಷಿತ್ ಶೆಟ್ಟಿ ಮತ್ತು ರಿಶಬ್ ಶೆಟ್ಟಿ ಅವರ ಕಾಲೇಜು ದಿನಗಳ ರಿಯಲ್ ಅನುಭವಗಳನ್ನೇ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ತೋರಿಸಲಿದ್ದಾರಂತೆ.[ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿಗೆ ಹುಡುಗಿ ಬೇಕಂತೆ..!]

ಈ ಮೊದಲು 'ಉಳಿದವರು ಕಂಡಂತೆ' ಚಿತ್ರದ ತಾರಾಗಣವೇ ಇಲ್ಲೂ ಮುಂದುವರಿಯಲಿದೆಯಾ? ಅನ್ನೋ ಸಣ್ಣ ಅನುಮಾನ ಕಾಡಿತ್ತು. ಆದರೆ ಇದೀಗ ಪೂರ್ತಿ ಹೊಸ ತಂಡವನ್ನು ಕಟ್ಟಿಕೊಂಡು 'ಕಿರಿಕ್ ಪಾರ್ಟಿ' ಸಿನಿಮಾ ಮಾಡುತ್ತಿದ್ದಾರೆ ರಿಶಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರು.[ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಲು ಇಲ್ಲಿದೆ ಉತ್ತಮ ಅವಕಾಶ]

'ಕಿರಿಕ್ ಪಾರ್ಟಿ' ಚಿತ್ರದ ಮುಹೂರ್ತ ಸಮಾರಂಭದ ಫೋಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ..

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
In Pics: Rakshit Shetty Starrer Kannada Movie 'Kirik Party' Muhurtham. Kannada Actor Rakshit Shetty, Actress Rashmika Mandanna, Actress Samyuktha Hegde in the lead role. The movie is directed by Rishab Shetty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada