twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಗಳಲ್ಲಿ: ಅದ್ದೂರಿಯಾಗಿ ನೆರವೇರಿದ 'Red FM ತುಳು ಫಿಲ್ಮ್ ಅವಾರ್ಡ್'

    By Suneetha
    |

    ಏಪ್ರಿಲ್ 9 ರಂದು ಕರಾವಳಿಯ ಸಿನಿ ರಸಿಕರಿಗೆ ಹಾಗು ತುಳು ಚಿತ್ರರಂಗದ ಕಲಾವಿದರಿಗೆ ಹಬ್ಬದ ವಾತಾವರಣ. ಹೌದು ಪ್ರತೀ ವರ್ಷದಂತೆ ಈ ಬಾರಿ ಕೂಡ 93.5 ರೆಡ್ ಎಫ್.ಎಮ್ ವತಿಯಿಂದ 'ತುಳು ಚಲನಚಿತ್ರ ಪ್ರಶಸ್ತಿ' ಸಮಾರಂಭ ಮಂಗಳೂರಿನ ಕರಾವಳಿ ಮೈದಾನದಲ್ಲಿ ಗ್ರ್ಯಾಂಡ್ ಆಗಿ ನೆರವೇರಿತ್ತು.

    ಈ ಬಾರಿ ಕರಾವಳಿಗರಿಗೆ ಇನ್ನೊಂದು ಖುಷಿಯ ವಿಚಾರ ಏನಪ್ಪಾ ಅಂದ್ರೆ, ಬಾಲಿವುಡ್ ನ ಖ್ಯಾತ ನಟರಾದ ಸುನೀಲ್ ಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಸೋಹಿಲ್ ಖಾನ್ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಮತ್ತಷ್ಟು ಮೆರುಗು ತಂದಿದ್ದರು.[ಯುಗಾದಿಗೆ ರಾರಾಜಿಸಲಿದೆ ಪೊರ್ಲುದ ವಿಶೇಷ ಚಿತ್ರ 'ನಮ್ಮ ಕುಡ್ಲ']

    In Pics: Red FM Tulu film awards - 2016

    ಮಾತ್ರವಲ್ಲದೇ ತುಳು ಚಿತ್ರರಂಗ ಬೆಳೆಯಲು ನಾವು ಸಹಾಯ ಮಾಡುತ್ತೇವೆ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ಅವರು ವೇದಿಕೆಯಲ್ಲಿ ಭರವಸೆ ನೀಡಿದರು.[ಒಂದೇ ವಾರಕ್ಕೆ ಕರಗಿ ನೀರಾಯಿತೇ?, 'ಐಸ್ ಕ್ರೀಮ್'..!]

    'ರೆಡ್ ಎಫ್.ಎಮ್ ತುಳು ಫಿಲ್ಮ್ ಅವಾರ್ಡ್ 2016' ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ...

    • ಜೀವಮಾನ ಸಾಧನೆ ಪ್ರಶಸ್ತಿ: ರಿಚರ್ಡ್ ಕ್ಯಾಸ್ಟಲಿನೋ.
    • ಉತ್ತಮ ಚಿತ್ರ : 'ಚಾಲಿಪೋಲಿಲು'.[400 ದಿನ ಪೂರೈಸಿ ದಾಖಲೆ ನಿರ್ಮಿಸಿದ ಕರಾವಳಿಯ ಹೆಮ್ಮೆಯ 'ಚಾಲಿಪೋಲಿಲು']
    • ಉತ್ತಮ ನಾಯಕಿ ನಟಿ : ಕರಿಷ್ಮಾ ಅಮೀನ್, ಚಿತ್ರ: 'ಚಂಡಿ ಕೋರಿ'.
    • ಉತ್ತಮ ನಾಯಕ ನಟ : ಅರ್ಜುನ್ ಕಾಪಿಕಾಡ್, ಚಿತ್ರ: 'ಚಂಡಿಕೋರಿ'.
    • ಉತ್ತಮ ಹಾಸ್ಯನಟ : ಅರವಿಂದ್ ಬೋಳಾರ್, ಚಿತ್ರ: 'ಎಕ್ಕ ಸಕ್ಕ'.
    • ಉತ್ತಮ ಖಳನಟ : ಸಂತೋಷ್ ಶೆಟ್ಟಿ, ಚಿತ್ರ: 'ಮದಿಮೆ'.
    • ಉತ್ತಮ ನಿರ್ದೇಶಕ : ವೀರೇಂದ್ರ ಶೆಟ್ಟಿ ಕಾವೂರು, ಚಿತ್ರ: 'ಚಾಲಿಪೋಲಿಲು'.
    • ಉತ್ತಮ ಸಂಗೀತ ನಿರ್ದೇಶಕ: ಮಣಿಕಾಂತ್ ಕದ್ರಿ, ಚಿತ್ರ: 'ರಂಗ್', ಹಾಡು: ಸರದಾನಿ.
    • ಉತ್ತಮ ಗಾಯಕಿ: ಅನುರಾಧ ಭಟ್, ಚಿತ್ರ: 'ಚಾಲಿಪೋಲಿಲು', ಹಾಡು: 'ಮಹಾಮಾಯೆ'.
    • ಉತ್ತಮ ಗಾಯಕ: ರಾಜೇಶ್ ಕೃಷ್ಣನ್, ಚಿತ್ರ: 'ಒರಿಯನ್ ತೂಂಡಾ ಒರಿಯಗಾಪುಜಿ', ಹಾಡು: ಪಂಡಿ ಪರಕೆ.
    • ಉತ್ತಮ ಕಥೆ: ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಿತ್ರ: ಮದಿಮೆ.
    • ಉತ್ತಮ ಚಿತ್ರಕಥೆ: ಸೂರಜ್ ಕೆ ಶೆಟ್ಟಿ, ಚಿತ್ರ: 'ಎಕ್ಕ ಸಕ್ಕ'.
    • ಉತ್ತಮ ಗೀತ ರಚನೆಕಾರ : ದೇವದಾಸ್ ಕಾಪಿಕಾಡ್, ಚಿತ್ರ: 'ಚಂಡಿಕೋರಿ', ಹಾಡು: ಉದಯ ಉದಯ.
    • ಉತ್ತಮ ಆಕ್ಷನ್: ಮಾಸ್ ಮಾದ, ಚಿತ್ರ: 'ಚಂಡಿಕೋರಿ'
    • ಉತ್ತಮ ಆರ್ಟ್ ನಿರ್ದೇಶನ: ಕೇಶವ ಸುವರ್ಣ, ಚಿತ್ರ: 'ಚಾಲಿಪೋಲಿಲು'
    • ಉತ್ತಮ ಛಾಯಾಗ್ರಹಣ: ಮಣಿ ಕೂಕಲ್ ನಾಯರ್, ಚಿತ್ರ: ನಿರೆಲ್
    • ಉತ್ತಮ ಸಂಕಲನ: ಸುಜಿತ್ ನಾಯಕ್, ಚಿತ್ರ: 'ಚಂಡಿಕೋರಿ'
    • ಉತ್ತಮ ನೃತ್ಯ ನಿರ್ದೇಶಕ: ಸದಾ ಮಾಸ್ಟರ್, ಚಿತ್ರ: 'ಸೂಂಬೆ'.
    • ಉತ್ತಮ ಬಾಲ ಕಲಾವಿದೆ: ಪ್ರಣೀತಾ, ಚಿತ್ರ: 'ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ'.
    • ಉತ್ತಮ ಪೋಷಕ ನಟಿ: ಉಷಾ ಭಂಡಾರಿ, ಚಿತ್ರ: 'ಮದಿಮೆ'
    • ಉತ್ತಮ ಪೋಷಕ ನಟ: ಗೋಪಿನಾಥ್ ಭಟ್, ಚಿತ್ರ: 'ದಂಡ್'
    • ಉತ್ತಮ ಡೈಲಾಗ್: ಸೂರಜ್ ಕೆ ಶೆಟ್ಟಿ, ಚಿತ್ರ: 'ಎಕ್ಕ ಸಕ್ಕ'

    'ರೆಡ್ ಎಫ್.ಎಮ್ ತುಳು ಫಿಲ್ಮ್ ಅವಾರ್ಡ್ 2016' ಅದ್ದೂರಿ ಪ್ರಶಸ್ತಿ ಸಮಾರಂಭದ ಫೊಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

    English summary
    It was a joyous moment for the Tulu film industry on Saturday April 9 as top celebrities from Bollywood graced the dazzling Red FM Tulu Film Awards ceremony and extended their full support for the industry's growth. The large crowds that gathered at Karavali Utsav Grounds. The glamorous evening began with Bollywood actor Suniel Shetty and other dignitaries lighting the traditional lamp.
    Tuesday, April 12, 2016, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X