»   » ಪತ್ನಿ ಜೊತೆ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ಹುಟ್ಟುಹಬ್ಬದ ಸಂಭ್ರಮ

ಪತ್ನಿ ಜೊತೆ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada

'ರಾಕಿಂಗ್ ಸ್ಟಾರ್' ಪಟ್ಟ ಗಿಟ್ಟಿಸಿಕೊಂಡಿರುವ ಯಶ್ ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. 31ನೇ ವಸಂತಕ್ಕೆ ಕಾಲಿಟ್ಟಿರುವ ಯಶ್, ಇವತ್ತು ತಮ್ಮ ಹೊಸಕೆರೆಹಳ್ಳಿ ನಿವಾಸದಲ್ಲಿ ಅಭಿಮಾನಿಗಳ ಜೊತೆ ಭರ್ಜರಿಯಾಗಿ ಬರ್ತಡೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ನೆಚ್ಚಿನ 'ಅಣ್ತಮ್ಮ'ನ ಬರ್ತಡೆ ಸೆಲೆಬ್ರೇಟ್ ಮಾಡುವುದಕ್ಕೆ ಯಶ್ ರವರ ಹೊಸಕೆರೆಹಳ್ಳಿ ನಿವಾಸದ ಮುಂದೆ ಮಧ್ಯರಾತ್ರಿಯಿಂದಲೂ ಅಭಿಮಾನಿಗಳು ಜಮಾಯ್ಸಿದ್ದಾರೆ.[ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

ಇಂದು ಇಡೀ ದಿನ ಅಭಿಮಾನಿಗಳಿಗಾಗಿಯೇ ಮೀಸಲಿಟ್ಟಿರುವ ಯಶ್, ಎಲ್ಲರೊಂದಿಗೆ ನಗುನಗುತ್ತಾ ಬೆರೆತು ಅಭಿಮಾನಿಗಳ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ.

ಮದುವೆ ನಂತರ ಮೊದಲ ಹುಟ್ಟುಹಬ್ಬ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ರಾಕಿಂಗ್ ಸ್ಟಾರ್ ಯಶ್ ಗೆ ಇದು ಮೊದಲ ಹುಟ್ಟುಹಬ್ಬ. ಹೀಗಾಗಿ ಈ ಬಾರಿಯ ಬರ್ತಡೇ ಯಶ್ ಗೆ ಸಖತ್ ಸ್ಪೆಷಲ್. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಅಭಿಮಾನಿಗಳ ಸಮ್ಮುಖದಲ್ಲೇ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.[ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ]

ಬೃಹತ್ ಹೂವಿನ ಮಾಲೆ

ಹುಟ್ಟುಹಬ್ಬದ ಪ್ರಯುಕ್ತ ಯಶ್ ಗಾಗಿ ಅಭಿಮಾನಿಗಳು ಬೃಹತ್ ಹೂವಿನ ಹಾರ ಹಾಕಿದರು. ಅಭಿಮಾನಿಗಳು ತಂದಿದ್ದ ತರಹೇವಾರಿ ಕೇಕ್ ಗಳನ್ನು ಕತ್ತರಿಸಿ ಯಶ್ ಸಂಭ್ರಮಿಸಿದರು.[ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

ಯಶ್ ಮನೆ ಮುಂದೆ ಜನ ಜಾತ್ರೆ

ರಾಕಿಂಗ್ ಸ್ಟಾರ್ ಗೆ ಶುಭಾಶಯ ಕೋರಲು, ಯಶ್ ಮನೆ ಮುಂದೆ ಜನಸಾಗರ ಹರಿದುಬರುತ್ತಲೇ ಇದೆ.

ಕೆ.ಜಿ.ಎಫ್ ಪೋಸ್ಟರ್ ರಿಲೀಸ್

ಯಶ್ ಹುಟ್ಟುಹಬ್ಬದ ಪ್ರಯುಕ್ತ, ಅವರ ಅಪ್ ಕಮ್ಮಿಂಗ್ ಸಿನಿಮಾ 'ಕೆ.ಜಿ.ಎಫ್' ಪೋಸ್ಟರ್ ಬಿಡುಗಡೆ ಆಗಿದೆ.

ಯಶ್ ಗೆ ನೀವೂ ವಿಶ್ ಮಾಡಿ

ಸತತ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ರಾಕಿಂಗ್ ಸ್ಟಾರ್ ಯಶ್, ಹೀಗೆ ಯಶಸ್ಸಿನ ಎತ್ತರೆತ್ತರಕ್ಕೆ ಏರುತ್ತಿರಲಿ ಅಂತ 'ಫಿಲ್ಮಿಬೀಟ್ ಕನ್ನಡ' ಆಶಿಸುತ್ತದೆ. ಯಶ್ ರವರ ಹುಟ್ಟುಹಬ್ಬಕ್ಕೆ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನೀವೂ ವಿಶ್ ಮಾಡಿ....

English summary
Rocking Star Yash is celebrating his 31st birthday today (Jan 8th). Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada