»   » ಚಿತ್ರಗಳು: ಚಂದನವನದ ಗ್ರೇಟ್ ಅಪ್ಪಂದಿರು ಇವರೇ ಕಣ್ರೀ

ಚಿತ್ರಗಳು: ಚಂದನವನದ ಗ್ರೇಟ್ ಅಪ್ಪಂದಿರು ಇವರೇ ಕಣ್ರೀ

Posted By:
Subscribe to Filmibeat Kannada

ಚಂದನವನದಲ್ಲಿರುವ ಸ್ಟಾರ್ ನಟರಾದ ಸುದೀಪ್, ದರ್ಶನ್, ಉಪೇಂದ್ರ, ಗಣೇಶ್, ಶ್ರೀಮುರಳಿ ಮುಂತಾದವರೆಲ್ಲಾ ಬರೀ ಸಿನಿಮಾದಲ್ಲಿ ಪುಟ್ಟ ಮಕ್ಕಳನ್ನು ಇಷ್ಟ ಪಡೋದು ಮಾತ್ರವಲ್ಲದೇ, ನಿಜ ಜೀವನದಲ್ಲಿ ತಮ್ಮ ತಮ್ಮ ಮುದ್ದು ಮಕ್ಕಳಿಗೆ ಬೆಸ್ಟ್ ಅಪ್ಪ ಆಗಿದ್ದಾರೆ.

ಶೂಟಿಂಗ್ ಸಮಯದಲ್ಲೂ ಬಿಡುವು ಮಾಡಿಕೊಂಡು ಅಮೂಲ್ಯ ಸಮಯಗಳನ್ನು ತಮ್ಮ ಮಕ್ಕಳಿಗಾಗಿ ಮೀಸಲಿಟ್ಟರೆ, ಶೂಟಿಂಗ್ ರಜಾ ದಿನವಾದ ವೀಕೆಂಡ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಪಾರ್ಕ್, ಮಾಲ್, ರೆಸ್ಟೋರೆಂಟ್ ಅಂತ ಔಟಿಂಗ್ ಹೊರಟು ಬಿಡುತ್ತಾರೆ.[3ನೇ ವಯಸ್ಸಿಗೆ ಗ್ಲಾಮರ್ ಗುಂಗಿನಲ್ಲಿರುವ ಶ್ರೀಮುರಳಿ ಸುಪುತ್ರಿ]

ಇನ್ನು ವೀಕೆಂಡ್ ನಲ್ಲಿ ಮಕ್ಕಳೊಂದಿಗೆ ಎಂಜಾಯ್ ಮಾಡಿದ ಕ್ಷಣಗಳನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡು ಮಕ್ಕಳೊಂದಿಗಿನ ತಮ್ಮ ಸ್ಪೆಷಲ್ ಬಾಂಡ್ ಹೇಗಿದೆ ಎಂಬ ಖುಷಿಯನ್ನು ಹಂಚಿಕೊಳ್ಳುತ್ತಾರೆ.[ಚಿತ್ರಗಳು: ದೊಡ್ಮನೆ ಮೊಮ್ಮಗಳ ಮದುವೆಯ ಅದ್ಧೂರಿ ಕ್ಷಣಗಳು]

ಅಂದಹಾಗೆ ಚಂದನವನದಲ್ಲಿ ತಮ್ಮ ಮುದ್ದು ಮಕ್ಕಳಿಗೆ ಯಾವೆಲ್ಲಾ ನಟರು ತುಂಬಾ ಡೆಡಿಕೇಟೆಡ್ ಆಗಿದ್ದಾರೆ. ಯಾವ ನಟ ತಮ್ಮ ಮಕ್ಕಳೊಂದಿಗೆ ಸ್ಪೆಷಲ್ ಬಾಂಡ್ ಇಟ್ಟುಕೊಂಡಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಗೋಲ್ಡನ್ ಸ್ಟಾರ್ ಗಣೇಶ್

'ಮುಂಗಾರು ಮಳೆ' ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಬ್ಬರು ಮಕ್ಕಳು, ಒಂದು ಹೆಣ್ಣು ಮತ್ತು ಒಂದು ಗಂಡು. ಹೆಣ್ಣು ಮಗಳು ದೊಡ್ಡವಳು ಚಾರಿತ್ರ್ಯ ಹಾಗೂ ಚಿಕ್ಕ ಮಗ ವಿಹಾನ್. ವಿಶೇಷವಾಗಿ ಪುಟ್ಟ ಮುದ್ದು ಕಂದಮ್ಮ ವಿಹಾನ್ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂಥರಾ ಸ್ಪೆಷಲ್ ಬಾಂಡ್ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ 'ಮುಂಗಾರು ಮಳೆ 2' ಮತ್ತು 'ಗಂಡು ಎಂದರೆ ಗಂಡು' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೂ ಬಿಡುವಿನ ಸಮಯದಲ್ಲಿ ಮಗನ ಜೊತೆ ಹಾಯಾಗಿ ಕಾಲ ಕಳೆಯುತ್ತಾರೆ.[ಗೋಲ್ಡನ್ ಸ್ಟಾರ್ ತೋಳೊಳಗೆ ಮರಿ ಲಿಟಲ್ ಸ್ಟಾರ್...]

ರಿಯಲ್ ಸ್ಟಾರ್ ಉಪೇಂದ್ರ

ಡಿಫರೆಂಟ್ ಉಪ್ಪಿ ಅವರು ಮುದ್ದು ಪತ್ನಿ ಪ್ರಿಯಾಂಕ ಅವರಿಗಿಂತ ಹೆಚ್ಚಾಗಿ ಅವರ ಮುದ್ದು ಮಕ್ಕಳಿಬ್ಬರ ಜೊತೆ ವಿಶೇಷ ಬಂಧವನ್ನು ಇಟ್ಟುಕೊಂಡಿದ್ದಾರೆ. ಉಪೇಂದ್ರ ಮತ್ತು ನಟಿ ಪ್ರಿಯಾಂಕ ಉಪೇಂದ್ರ ಅವರ ಮುದ್ದು ಸಂಸಾರದಲ್ಲಿ ಆಯುಷ್ ಮತ್ತು ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅದ್ರಲ್ಲೂ ಉಪ್ಪಿ ಅವರಿಗೆ ಮಗಳು ಐಶ್ವರ್ಯ ಅಂದರೆ ತುಂಬಾ ಪ್ರೀತಿ. ವೀಕೆಂಡ್ ಬಂದರೆ ಉಪ್ಪಿ ಮಕ್ಕಳಿಬ್ಬರನ್ನು ಕರೆದುಕೊಂಡು ಶಾಪಿಂಗ್ ಗೆ ತೆರಳುತ್ತಾರೆ.

ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿನಿಮಾ, ಶೂಟಿಂಗ್ ಗಿಂತಲೂ ತಮ್ಮ ಮಗಳು ಸಾನ್ವಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಸುದೀಪ್ ಅವರು ಫ್ರೀಯಾಗಿದ್ದ ಸಮಯದಲ್ಲಿ ತಾವೇ ಅಡುಗೆ ಮನೆಗೆ ನುಗ್ಗಿ ಮುದ್ದು ಮಗಳು ಸಾನ್ವಿಗೆ ಏನೇನೂ ಬೇಕು ಅವೆಲ್ಲವನ್ನು ಮಾಡಿ ಕೊಡುತ್ತಾರೆ. ಒಟ್ನಲ್ಲಿ ಕಿಚ್ಚ ಅವರಿಗಿಂತ ಜಾಸ್ತಿ ಅವರ ಮಗಳು ಸಾನ್ವಿಯನ್ನು ಇಷ್ಟಪಡುತ್ತಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತಮ್ಮ ಮುದ್ದು ಹೆಣ್ಣು ಮಕ್ಕಳೆಂದರೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಮಕ್ಕಳಾದ ಧೃತಿ ಮತ್ತು ವಂದಿತಾ ಅವರ ಜೊತೆ ಕಾಲ ಕಳೆಯುವುದು ಹಾಗೂ ಅವರಿಬ್ಬರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಎಂದರೆ ನಮ್ಮ ಅಪ್ಪು ಅವರಿಗೆ ತುಂಬಾ ಇಷ್ಟವಂತೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಮ್ಮೆಲ್ಲರ ಮೆಚ್ಚಿನ ಶಿವಣ್ಣನಿಗೆ ಅವರ ದೊಡ್ಡ ಮಗಳು ನಿರುಪಮಾ ಅಂದ್ರೆ ತುಂಬಾ ಇಷ್ಟವಂತೆ. ಇತ್ತೀಚೆಗೆ ನಿರುಪಮಾ ಅವರ ವಿವಾಹ ಗೆಳೆಯ ದಿಲೀಪ್ ಅವರ ಜೊತೆ ಅದ್ದೂರಿಯಾಗಿ ನೆರವೇರಿದ್ದು, ಮಗಳನ್ನು ತವರಿನಿಂದ ಕಳುಹಿಸಿ ಕೊಡುವಾಗ ಶಿವಣ್ಣ ಕಣ್ಣೀರು ಹಾಕಿದ್ರಂತೆ. ಮಗಳ ವಿವಾಹಕ್ಕೆ ಮುಂಚೆ ಶಿವಣ್ಣ ಅವರು ಎಲ್ಲಿ ಹೋದರು ದೊಡ್ಡ ಮಗಳು ನಿರುಪಮಾರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಶಿವಣ್ಣ ಅವರ ಚಿಕ್ಕ ಮಗಳು ನಿವೇದಿತಾ.[ಶಿವಣ್ಣ ಮಗಳ ಮದುವೆಯ 'ರಾಜ' ವೈಭೋಗ]

ಚಾಲೆಂಜಿಂಗ್ ಸ್ಟಾರ್ ದರ್ಶನ್

ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಾಸ ಆದರೆ ದರ್ಶನ್ ಅವರು ಮಾತ್ರ ತಮ್ಮ ಮಗ ವಿನೀಶ್ ಅವರಿಗೆ ದಾಸ ಅಂತೆ. ಯಾವಾಗಲೂ ಮಗನ ಜೊತೆ ಹೆಚ್ಚು ಹೊತ್ತು ಕಾಲ ಕಳೆಯಲು ದರ್ಶನ್ ಅವರು ಇಷ್ಟಪಡುತ್ತಾರೆ. ಇತ್ತೀಚೆಗೆ ದರ್ಶನ್ ಅವರ 'Mr. ಐರಾವತ' ಚಿತ್ರದಲ್ಲಿ ಮಿನಿ ದರ್ಶನ್ ಅಲಿಯಾಸ್ ವಿನೀಶ್ ದರ್ಶನ್ ಅವರು ಅಪ್ಪನಂತೆ ಖಾಕಿ ಡ್ರೆಸ್ ಹಾಕಿ ಮಿಂಚಿದ್ದರು.['ಮಿಸ್ಟರ್ ಐರಾವತ' ಡಬ್ಬಿಂಗ್ ಮುಗಿಸಿದ ಮಾ.ವಿನೀಶ್]

'ಉಗ್ರಂ' ನಟ ಶ್ರೀಮುರಳಿ

'ಉಗ್ರಂ' ಮತ್ತು 'ರಥಾವರ' ಸಿನಿಮಾ ನೀಡಿ ಹಿಟ್ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಮಗ ಅಗಸ್ತ್ಯನಿಗಿಂತ ಹೆಚ್ಚಾಗಿ ಮುದ್ದು ಮಗಳು ಅತೀವಾಳ ಜೊತೆ ವಿಶೇಷ ಬಾಂಡ್ ಇಟ್ಟುಕೊಂಡಿದ್ದಾರೆ. ಆದರೂ ಮಗ ಎಂದರೆ ಕೂಡ ಶ್ರೀಮುರಳಿ ಅವರಿಗೆ ಇಷ್ಟ. ಕೊಂಚ ಮಗಳ ಮೇಲೆ ಪ್ರೀತಿ ಜಾಸ್ತಿ. ಪ್ರತೀ ಭಾನುವಾರ ಮಗ ಮತ್ತು ಮಗಳ ಜೊತೆ ಶ್ರೀಮುರಳಿ ಅವರು ತಪ್ಪದೇ ಶಾಪಿಂಗ್ ಗೆ ಹೋಗುತ್ತಾರೆ.(ಚಿತ್ರಕೃಪೆ: ಚಂದನ್)

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್

ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರು ತಮ್ಮ ಮೂವರು ಮಕ್ಕಳಾದ ಮೋನಿಕಾ, ಮೋನಿಶಾ ಮತ್ತು ಸಾಮ್ರಾಟ್ ಜೊತೆ ತುಂಬಾ ಅಟ್ಯಾಚ್‍ಮೆಂಟ್ ಇಟ್ಟುಕೊಂಡಿದ್ದಾರೆ. ಅಭಿಮಾನಿಗಳ ಮನಗೆದ್ದಿರುವ ದುನಿಯಾ ವಿಜಿ ಅವರು ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ.[ವೀಕೆಂಡ್ ನಲ್ಲಿ ದುನಿಯಾ ವಿಜಯ್ ಕಣ್ಣೀರ ಕಥೆ ಅನಾವರಣ]

ಖಳನಟ ರವಿಶಂಕರ್

ಸ್ಯಾಂಡಲ್ ವುಡ್ ನಲ್ಲಿ ಖಳನಟನಾಗಿ ಮಿಂಚುವ ಮೂಲಕ ಖ್ಯಾತಿ ಗಳಿಸಿರುವ ನಟ ರವಿಶಂಕರ್ ಅವರಿಗೂ ತಮ್ಮ ಮಗ ಅದ್ವೈತ ಅಂದರೆ ತುಂಬಾ ಪ್ರೀತಿ. ಎದೆಯೆತ್ತರಕ್ಕೆ ಬೆಳೆದ ಮಗನನ್ನು ಗೆಳೆಯನ ಥರ ಕಾಣುತ್ತಾರೆ ರವಿಶಂಕರ್.

ಡೈಲಾಗ್ ಕಿಂಗ್ ಸಾಯಿಕುಮಾರ್

ಡೈಲಾಗ್ ಕಿಂಗ್ ಸಾಯಿಕುಮಾರ್ ಅವರಿಗೆ ಇಬ್ಬರು ಮಕ್ಕಳು. ಮಗ ತೆಲುಗಿನ ಖ್ಯಾತ ನಟ ಆದಿ ಹಾಗೂ ಮಗಳು ಜ್ಯೋತಿರ್ಮಯಿ. ಮಗ ಆದಿ ಎಂದರೆ ಸಾಯಿ ಅವರಿಗೆ ಕೊಂಚ ಜಾಸ್ತಿ ಮುದ್ದು. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಆದಿ ಅವರು ತಮ್ಮ ನಟನೆಯ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ.

ವಿಜಯ ರಾಘವೇಂದ್ರ

ನಟ ಶ್ರೀಮುರಳಿ ಅವರ ಸಹೋದರ ನಟ ವಿಜಯ ರಾಘವೇಂದ್ರ ಅವರಿಗೆ ತಮ್ಮ ಮಗ ಶೌರ್ಯ ಎಂದರೆ ಅಚ್ಚುಮೆಚ್ಚು. ಅವರು ಮಗನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲವಂತೆ.

ನಟಿ ರಕ್ಷಿತಾ ಪ್ರೇಮ್

ಸುಂಟರಗಾಳಿ ರಕ್ಷಿತಾ ಅವರಿಗೆ ತಮ್ಮ ಮಗ ಸೂರ್ಯ ಅಂದರೆ ತುಂಬಾ ಇಷ್ಟ. ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಉಳಿದಿದ್ದ ರಕ್ಷಿತಾ ಅವರು ಮಗ ಸೂರ್ಯನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿ ಬಿಟ್ಟರು. ಇದೀಗ ಮಗನ ಸ್ಕೂಲ್ ಜವಾಬ್ದಾರಿಯನ್ನು ರಕ್ಷಿತಾ ಅವರೇ ಹೊತ್ತುಕೊಂಡಿದ್ದಾರೆ.[ನಿಮಗೆ ಗೊತ್ತಿಲ್ಲದ 'ಸುಂಟರಗಾಳಿ' ರಕ್ಷಿತ ರಿಯಲ್ ಕಹಾನಿ]

ಅರ್ಜುನ್ ಸರ್ಜಾ

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಮಗಳು ಐಶ್ವರ್ಯ ಅಂದರೆ ತುಂಬಾ ಪ್ರೀತಿ. ಇದೀಗ ಮಗಳಿಗೋಸ್ಕರ ಅರ್ಜುನ್ ಅವರು ಕನ್ನಡದಲ್ಲಿ ಒಂದು ಸಿನಿಮಾ ಮಾಡಲು ತಯಾರಾಗಿದ್ದಾರೆ.[ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!]

English summary
Who is the dedicated father in Sandalwood? Which actor has more bonding with their children? Isn't it interesting to know this! Then, read further..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada