»   » 'ಮಾಸ್ ಲೀಡರ್'ನ ಸ್ಟೈಲ್, ಖದರ್, ಅಬ್ಬರಕ್ಕೆ ಸರಿಸಾಟಿಯಿಲ್ಲ

'ಮಾಸ್ ಲೀಡರ್'ನ ಸ್ಟೈಲ್, ಖದರ್, ಅಬ್ಬರಕ್ಕೆ ಸರಿಸಾಟಿಯಿಲ್ಲ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ 'ಮಾಸ್ ಲೀಡರ್' ಚಿತ್ರ ತಾರಾಬಳಗ ಮತ್ತು ಕಥಾವಸ್ತುವಿಂದಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಡ್ರಗ್ ಮಾಫಿಯಾ ಈ ಚಿತ್ರದ ಕೇಂದ್ರ ಕಥಾವಸ್ತು.

'ಮಾಸ್ ಲೀಡರ್' ಚಿತ್ರದ ನೈಜಕಥೆ ಬಹಿರಂಗ!

ಶಿವರಾಜ್ ಕುಮಾರ್ ಸದಾ ತಮ್ಮನ್ನು ವಿಭಿನ್ನ ಪಾತ್ರಗಳಿಗೆ ಒಗ್ಗಿಸಿಕೊಳ್ಳಲು ಬಯಸುವವರು. ಈ ಹಿಂದೆ 'ಶ್ರೀಕಂಠ' ಸಿನಿಮಾದಲ್ಲಿ ಕಾಮನ್ ಮ್ಯಾನ್ ಆಗಿ, 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ಕ್ಲಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳಲ್ಲಿ ಶಿವಣ್ಣ 'ಮಾಸ್ ಲೀಡರ್' ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುತ್ತಿತ್ತು. ಆ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.

ಈಗಾಗಲೇ ವೀರಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ರವರ ಲುಕ್ ರಿವೀಲ್ ಆಗಿತ್ತು. ಈಗ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಇನ್ನು ಹಲವು ವಿಭಿನ್ನ ಲುಕ್ ಗಳ ಚಿತ್ರಗಳು ದೊರೆತಿದ್ದು ಅವುಗಳು ಈ ಕೆಳಗಿನಂತಿವೆ.

ಗನ್ ಹಿಡಿದ 'ಮಾಸ್ ಲೀಡರ್'

'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರುವ ಖಡಕ್ ನಾಯಕನಾಗಿ ಕಾಣಿಸಿಕೊಂಡಿರುವ ಲುಕ್ ಇದು. ಶಿವಣ್ಣ ಗನ್ ಹಿಡಿದು ನೋಡುತ್ತಿರುವ ಈ ಲುಕ್ ಮಾಸ್ ಪ್ರೇಕ್ಷಕರ ಗಮನಸೆಳೆಯುವಲ್ಲಿ ಯಾವುದೇ ಸಂಶಯವಿಲ್ಲ.

ಲೀಡರ್'ನ ಕ್ಲಾಸ್ ಲುಕ್ ಇದು..

ಶಿವಣ್ಣ 'ಮಾಸ್ ಲೀಡರ್' ಚಿತ್ರದಲ್ಲಿ ಒಂದೇ ಡ್ರೆಸ್ ನಲ್ಲಿ ಎರಡು ರೀತಿಯ ಲುಕ್ ಗಳಿಂದ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇದೇ ಡ್ರೆಸ್ ನಲ್ಲಿ ಗನ್ ಹಿಡಿದು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಲುಕ್ ನೀಡಿದ್ದ ಶಿವಣ್ಣ, ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಈ ಲುಕ್ ನಲ್ಲೂ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಸಿಂಹಾಸನದ ಮೇಲೆ ಕುಳಿತ ಶಿವಣ್ಣ

ಡ್ರಗ್ ಮಾಫಿಯಾ ದಂಧೆಯ ಕುರಿತು ಮಾತ್ರವಲ್ಲದೇ ದೇಶಪ್ರೇಮದ ಕುರಿತು ಬೆಳಕು ಚೆಲ್ಲುವ 'ಮಾಸ್ ಲೀಡರ್' ನಲ್ಲಿ ಶಿವಣ್ಣ ಸಿಂಹಾಸನದ ಮೇಲೆ ಕುಳಿತ ವಿಶೇಷ ಲುಕ್ ಒಂದು ಸಹ ರಿವೀಲ್ ಆಗಿದೆ. ಈ ಫೋಟೋ ನೋಡಿದರಂತು ಚಿತ್ರದ ಬಗ್ಗೆ ಇನ್ನೂ ಹೆಚ್ಚು ಕ್ಯೂರಿಯಾಸಿಟಿ ಹುಟ್ಟುವಲ್ಲಿ ಯಾವುದೇ ಸಂಶಯವಿಲ್ಲ.

ದೇಶದ್ರೋಹಿಗಳನ್ನು ಸದೆಬಡೆಯುವ ಶಿವ

'ಮಾಸ್ ಲೀಡರ್' ಚಿತ್ರದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆಬಂದು ಡ್ರಗ್ ಮಾಫಿಯಾದಲ್ಲಿ ತೊಡಗಿಕೊಂಡಿರುವವರನ್ನು ಶಿವಣ್ಣ ಸದೆಬಡೆಯುತ್ತಾರೆ. ಆ ದೃಶ್ಯಗಳ ಚಿತ್ರೀಕರಣದಲ್ಲಿ ಗನ್ ಹಿಡಿದು ಶಿವಣ್ಣ ಕಾಣಿಸಿಕೊಂಡ ಸಖತ್ ಸ್ಟೈಲಿಶ್ ಮತ್ತು ಡಿಫರೆಂಟ್ ಲುಕ್ ಇದು.

ಸಹನಾ ಮೂರ್ತಿ ನಿರ್ದೇಶನ

'ರೋಸ್' ಖ್ಯಾತಿಯ ಸಹನಾ ಮೂರ್ತಿ(ನರಸಿಂಹ) 'ಮಾಸ್ ಲೀಡರ್' ಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಶಿವಣ್ಣ ರವರಿಗೆ ಪ್ರಣೀತಾ ಸುಭಾಷ್ ಜೊತೆಯಾಗಿ ನಟಿಸಿದ್ದಾರೆ. ಚಿತ್ರವನ್ನು ಆಗಸ್ಟ್ ನಲ್ಲಿ ತೆರೆಗೆ ತರಲು ಉದ್ದೇಶಿಸಲಾಗಿದೆ.

English summary
In Pics: Shiva Rajkumar different looks in 'Maas Leader' film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada